Alaska Summit: 'ಯುದ್ಧಕ್ಕೆ ಅಂತ್ಯ ಹಾಡುವ ಇಚ್ಛೆ ಇದೆ.. ಆದರೆ ಪರಿಸ್ಥಿತಿಯನ್ನು ಇನ್ನೂ ತಿಳಿಗೊಳಿಸಬೇಕಿದೆ'; Vladimir Putin

ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಯಾವುದೇ ಫಲಿತಾಂಶವಿಲ್ಲದೇ ಅಂತ್ಯವಾಗಿದೆ.
Vladimir Putin
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Updated on

ಅಲಸ್ಕಾ: ಅಲಸ್ಕಾದಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆ ಮುಕ್ತಾಯದ ಬೆನ್ನಲ್ಲೇ ಈ ಕುರಿತು ವ್ಲಾಡಿಮಿರ್ ಪುಟಿನ್ ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ.

ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಯಾವುದೇ ಫಲಿತಾಂಶವಿಲ್ಲದೇ ಅಂತ್ಯವಾಗಿದೆ.

ಆದಾಗ್ಯೂ ಉಭಯ ನಾಯಕರೂ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧರಾಗಿದ್ದು, ಮಾತುಕತೆಯಲ್ಲಿ ಮಹತ್ವದ ಪ್ರಗತಿ ಕಂಡು ಬಂದಿದೆ ಎಂದು ಘೋಷಣೆ ಮಾಡಿದ್ದಾರೆ.

ಸುಮಾರು ಮೂರು ಗಂಟೆಗಳ ಸುದೀರ್ಘ ಸಮಾಲೋಚನೆ ನಡೆದಿದ್ದು, ಮಾತುಕತೆ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ಮಾತನಾಡಿ ಮಾತುಕತೆಯಲ್ಲಿ ಮಹತ್ವದ ಪ್ರಗತಿ ಕಂಡು ಬಂದಿದೆ ಎಂದು ಘೋಷಣೆ ಮಾಡಿದರು.

ಒಪ್ಪಂದದ ಯಾವುದೇ ವಿವರಗಳನ್ನು ಉಭಯ ನಾಯಕರು ಇದುವರೆಗೂ ನೀಡಿಲ್ಲ. ಅಷ್ಟೇ ಅಲ್ಲ ಉಕ್ರೇನ್​ - ರಷ್ಯಾ ನಡುವಣ ಕದನ ವಿರಾಮ ಘೋಷಣೆ ಆಗಲಿದೆಯೇ ಎಂಬ ಬಗ್ಗೆ ಇಬ್ಬರೂ ನಾಯಕರು ಏನನ್ನೂ ಹೇಳಿಲ್ಲ. ಇಬ್ಬರು ಅಧ್ಯಕ್ಷರು ವರದಿಗಾರರ ಪ್ರಶ್ನೆಗಳನ್ನು ಸ್ವೀಕರಿಸಲಿಲ್ಲ, ಹಾಗೂ ಅವರು ಯಾವುದೇ ಪ್ರಶ್ನೆಗಳಿಗೆ ಆಸ್ಪದವನ್ನೂ ನೀಡಲಿಲ್ಲ.

Vladimir Putin
Alaska Summit: ಟ್ರಂಪ್, ಪುಟಿನ್ ಮಾತುಕತೆ ಫಲಿತಾಂಶವಿಲ್ಲದೆ ಅಂತ್ಯ?

ಯುದ್ಧ ಕೊನೆಗಾಣಿಸುವ ಇಚ್ಛೆ ಇದೆ

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುದ್ಧ ಕೊನೆಗಾಣಿಸುವ ಇಚ್ಛೆ ಇದೆ ಎಂದು ಹೇಳಿದರು. 'ಘರ್ಷಣೆಯಿಂದ ಸಂವಾದಕ್ಕೆ ಹೋಗಲು ನಾವು ಪರಿಸ್ಥಿತಿಯನ್ನು ಇನ್ನೂ ತಿಳಿಗೊಳಿಸಬೇಕಿದೆ ಎಂದು ಸೂಚ್ಯವಾಗಿ ಮತ್ತು ಅತ್ಯಂತ ಸಂಕ್ಷಿಪ್ತವಾಗಿ ಪುಟಿನ್ ಹೇಳಿದರು.

ಈ ಪರಿಸ್ಥಿತಿಗಳಲ್ಲಿ ಅದು ಎಷ್ಟೇ ವಿಚಿತ್ರವೆನಿಸಿದರೂ ನಾವು (ರಷ್ಯಾ ಮತ್ತು ಉಕ್ರೇನ್) ಒಂದೇ ಬೇರುಗಳನ್ನು ಹೊಂದಿದ್ದೇವೆ. ಇನ್ನು ಈಗ ನಡೆಯುತ್ತಿರುವ ಸಂಘರ್ಷ ಎಲ್ಲವೂ ನಮಗೆ ದುರಂತ ಮತ್ತು ಭಯಾನಕ ಗಾಯವಾಗಿದೆ. ಆದ್ದರಿಂದ ನಮ್ಮ ದೇಶವು ಅದನ್ನು ಕೊನೆಗೊಳಿಸಲು ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದೆ ಎಂದು ಪುಟಿನ್​ ಹೇಳಿದರು.

ಇದಕ್ಕೂ ಮೊದಲು ಅಲಾಸ್ಕಾಕ್ಕೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ಅವರನ್ನು ಟ್ರಂಪ್​, ರೆಡ್ ಕಾರ್ಪೆಟ್ ಸ್ವಾಗತಕೋರಿದರು. ಲಿಮೋಸಿನ್ ಅನ್ನು ಪ್ರವೇಶಿಸಿದಾಗ ಸ್ನೇಹಪರವಾಗಿ ಮಾತನಾಡಿದರು ಮತ್ತು ಅವರ ಸಂಭಾಷಣೆಯನ್ನು ಮುಂದುವರೆಸಿದ್ದು ಕಂಡು ಬಂತು.

Vladimir Putin
Alaska summit: Trump-Putin ಮಾತುಕತೆ ವೇಳೆ ತಲೆ ಮೇಲೆ ಅಮೆರಿಕದ B-2 bomber ಫೈಟರ್ ಜೆಟ್ ಹಾರಾಟ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com