
ವಾಷಿಂಗ್ಟನ್: Israel ಜೊತೆಗಿನ ವ್ಯಾಪಾರ ಸಂಬಂಧ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಿಗಳನ್ನು ಖ್ಯಾತ ಟೆಕ್ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್ ವಜಾಗೊಳಿಸಿದೆ.
ಇಸ್ರೇಲ್ ಜೊತೆಗಿನ ಸಂಬಂಧದ ಕುರಿತು ಕಂಪನಿಯ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾಲ್ವರು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ವಜಾಗೊಳಿಸಿದೆ.
ಅನ್ನಾ ಹ್ಯಾಟಲ್ ಮತ್ತು ರಿಕಿ ಫಾಮೆಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸುವ ವಾಯ್ಸ್ ಮೇಲ್‌ಗಳು ಬಂದಿವೆ ಎಂದು ನೋ ಅಜುರೆ ಫಾರ್ ಅಪಾರ್ಥೈಡ್ ಪ್ರತಿಭಟನಾ ಗುಂಪು ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೂ ಮೊದಲು ಅಂದರೆ ಗುರುವಾರ ನಿಸ್ರೀನ್ ಜರಾದತ್ ಮತ್ತು ಜೂಲಿಯಸ್ ಶಾನ್ ಎಂಬ ಇಬ್ಬರು ಕಾರ್ಮಿಕರನ್ನು ಸಹ ಸಂಸ್ಥೆ ಇದೇ ಕಾರಣಕ್ಕೆ ವಜಾಗೊಳಿಸಿತ್ತು.
ಆ ಮೂಲಕ ಇಸ್ರೇಲ್ ಜೊತೆಗಿನ ಸಂಬಂಧದ ಕುರಿತು ಕಂಪನಿಯ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾಲ್ವರು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ಸಂಸ್ಥೆ ವಜಾಗೊಳಿಸಿದಂತಾಗಿದೆ.
ಮಂಗಳವಾರ ವಾಷಿಂಗ್ಟನ್‌ನ ರೆಡ್‌ಮಂಡ್‌ನಲ್ಲಿರುವ ಮೈಕ್ರೋಸಾಫ್ಟ್‌ನ ಜಾಗತಿಕ ಪ್ರಧಾನ ಕಚೇರಿಯಲ್ಲಿರುವ ಕಾರ್ಯನಿರ್ವಾಹಕ ಕಚೇರಿಗಳಿಗೆ ನುಗ್ಗಿ ಏಳು ಜನರ ಗುಂಪು ಧರಣಿ ನಡೆಸಿ, ಪ್ರತಿಭಟನಾ ಘೋಷಣೆಗಳನ್ನು ಕೂಗಿತ್ತು.
ಈ ಪ್ರತಿಭಟನೆ ಮೈಕ್ರೋಸಾಫ್ಟ್ ಸಂಸ್ಥೆಗೆ ಜಾಗತಿಕ ಮುಜುಗರ ತಂದಿತ್ತು. ಹೀಗಾಗಿ ಸಂಸ್ಥೆ 7 ಮಂದಿಯ ಪೈಕಿ ನಾಲ್ವರನ್ನು ವಜಾಗೊಳಿಸಿದೆ.
ಮೈಕ್ರೋಸಾಫ್ಟ್ ಉದ್ಯೋಗಿಗಳು ಆಯೋಜಿಸಿದ್ದ ವಕಾಲತ್ತು ಗುಂಪು ನೋ ಅಜುರೆ ಫಾರ್ ಅಪಾರ್ಥೈಡ್, ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮೈಕ್ರೋಸಾಫ್ಟ್, ಗೂಗಲ್ ಮತ್ತು ಒರಾಕಲ್‌ನ ಪ್ರಸ್ತುತ ಮತ್ತು ಮಾಜಿ ಕಾರ್ಮಿಕರು ಸ್ಮಿತ್ ಅವರ ಕಚೇರಿಯನ್ನು ಆಕ್ರಮಿಸಿಕೊಂಡ ಗುಂಪಿನ ಭಾಗವಾಗಿದ್ದಾರೆ ಎಂದು ಆರೋಪಿಸಿದೆ.
ಈ ತಿಂಗಳ ಆರಂಭದಲ್ಲಿ ದಿ ಗಾರ್ಡಿಯನ್ ಪತ್ರಿಕೆಯು ಗಾಜಾ ಮತ್ತು ವೆಸ್ಟ್ ಬ್ಯಾಂಕ್ ನಲ್ಲಿರುವ ಪ್ಯಾಲೆಸ್ಟೀನಿಯನ್ನರ ಮೇಲೆ ಕಣ್ಗಾವಲು ಹಾಕಲು ಮೈಕ್ರೋಸಾಫ್ಟ್‌ನ ಅಜುರೆ ಕ್ಲೌಡ್ ಪ್ಲಾಟ್‌ಫಾರ್ಮ್ ಅನ್ನು ಇಸ್ರೇಲ್ ಮಿಲಿಟರಿಯ ಒಂದು ಘಟಕ ಬಳಸುತ್ತಿದೆ ಎಂದು ವರದಿಯಾಗಿತ್ತು.
ಈ ವರದಿ ವೈರಲ್ ಆಗುತ್ತಿದ್ದಂತೆಯೇ ಮೈಕ್ರಾಸಾಫ್ಟ್ ಸಂಸ್ಥೆಯಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಪ್ಯಾಲೆಸ್ಟೈನ್ ಪರ ಒಲವು ಹೊಂದಿರುವ ಉದ್ಯೋಗಿಗಳು ಇದರ ವಿರುದ್ಧ ಧನಿ ಎತ್ತಿದ್ದರು. ಅಲ್ಲದೆ ಇದರ ವಿರುದ್ಧ ಪ್ರತಿಭಟನೆ ಕೂಡ ಆರಂಭವಾಗಿತ್ತು. ಮಂಗಳವಾರ ಪೊಲೀಸರಿಂದ ಬಂಧಿಸಲ್ಪಟ್ಟ ಪ್ರತಿಭಟನಾಕಾರರು ಮೈಕ್ರೋಸಾಫ್ಟ್ ಇಸ್ರೇಲ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದರು.
Advertisement