

ಬ್ರೆಸಿಲಿಯಾ (ಬ್ರೆಜಿಲ್): ಭಾರೀ ಚಂಡಮಾರುತಕ್ಕೆ ಹಾಗೂ ಭೀಕರ ಗಾಳಿಗೆ ಬ್ರೆಜಿಲ್ ತತ್ತರಿಸಿ ಹೋಗಿದೆ. ದಕ್ಷಿಣ ಬ್ರೆಜಿಲ್‌ನ ಗುವಾಯ್ಬಾ ನಗರದಲ್ಲಿ ಅಪ್ಪಳಿಸಿದ ಭಾರೀ ಚಂಡಮಾರುತಕ್ಕೆ ಲಿಬರ್ಟಿ ಪ್ರತಿಮೆ ಕುಸಿದು ಬಿದ್ದಿದೆ.
ಇದು ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯಾಗಿದ್ದು, ಮೊದಲ ಪ್ರತಿಮೆ ಅಮೆರಿಕಾದ ನ್ಯೂಜರ್ಸಿಯಲ್ಲಿದೆ. ಬ್ರೆಜಿಲ್'ನಲ್ಲಿ ವೇಗವಾಗಿ ಗಾಳಿ ಬೀಸುತ್ತಿರುವ ಪರಿಣಾಮ ಪ್ರತಿಮೆ ಓರೆಯಾಗಿ ಬಳಿಕ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಕುಸಿದು ಬಿದ್ದಿದೆ.
ಈ ಪ್ರತಿಮೆಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. ಪ್ರತಿಮೆಯ 11 ಮೀಟರ್ ಎತ್ತರದ ಸ್ತಂಭ ಬಲಿಷ್ಠವಾಗಿಯೇ ಇತ್ತು. ಆದರೆ, ಗಾಳಿಯ ವೇಗ ಗಂಟೆಗೆ 80 ರಿಂದ 90 ಕಿ.ಮೀ ವೇಗದಲ್ಲಿದ್ದ ಪರಿಣಾಮ ಪ್ರತಿಮೆ ಕುಸಿದು ಬಿದ್ದಿದೆ.
ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಪ್ರತಿಮೆ ಸಮೀಪದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Advertisement