

ಭಾರತ-ಓಮನ್ ಸಂಬಂಧಗಳು ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಒಮಾನ್‌ನ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಡರ್ ಆಫ್ ಓಮನ್ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಪ್ರಧಾನಿ ಈ ಪ್ರಶಸ್ತಿಯನ್ನು ಎರಡೂ ದೇಶಗಳ ನಡುವಿನ ಶತಮಾನಗಳಷ್ಟು ಹಳೆಯ ಸ್ನೇಹಕ್ಕೆ ಅರ್ಪಿಸಿದ್ದಾರೆ. ಇದು ಭಾರತ ಮತ್ತು ಒಮಾನ್‌ನ 1.4 ಮಿಲಿಯನ್ ಜನರ ನಡುವಿನ ವಾತ್ಸಲ್ಯ ಮತ್ತು ಪ್ರೀತಿಯ ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ತಿಳಿಸಿದೆ.
ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ನೀಡಿದ ಕೊಡುಗೆಗಳಿಗಾಗಿ ಒಮಾನ್‌ನ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ನಾಗರಿಕ ಗೌರವವಾದ ಆರ್ಡರ್ ಆಫ್ ಓಮನ್ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಎರಡು ದಿನಗಳ ಓಮನ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಈ ಗೌರವ ನೀಡಲಾಯಿತು. ಮೂರು ರಾಷ್ಟ್ರಗಳ ಪ್ರವಾಸದ ಸಂದರ್ಭದಲ್ಲಿ ಮೋದಿ ಜೋರ್ಡಾನ್ ಮತ್ತು ಇಂಡೋನೇಷ್ಯಾಗೆ ಭೇಟಿ ನೀಡಿದ್ದಾರೆ.
ಪ್ರಧಾನಿ ಮೋದಿಗೆ ಈ ಗೌರವವನ್ನು ನೀಡಲಾಗಿದೆ. ಇದಕ್ಕೂ ಮುನ್ನ ಮೋದಿಗೆ 28ಕ್ಕೂ ಹೆಚ್ಚು ದೇಶಗಳು ಅತ್ಯುನ್ನತ ನಾಗರಿಕ ಗೌರವಗಳನ್ನು ನೀಡಿವೆ. ಇತ್ತೀಚೆಗೆ ಅವರಿಗೆ ಇಥಿಯೋಪಿಯಾದಲ್ಲಿ 'ಗ್ರೇಟ್ ಆನರ್ ಆಫ್ ಇಥಿಯೋಪಿಯಾ' ಮತ್ತು ಕುವೈತ್‌ನಲ್ಲಿ 'ಆರ್ಡರ್ ಆಫ್ ಮುಬಾರಕ್ ಅಲ್-ಕಬೀರ್' ಪ್ರಶಸ್ತಿಯನ್ನು ನೀಡಲಾಯಿತು. ಭಾರತ ಮತ್ತು ಓಮನ್ ನಡುವಿನ ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವವನ್ನು ಗುರುತಿಸಲು ಮೋದಿ ಒಮಾನ್‌ಗೆ ಭೇಟಿ ನೀಡಿದರು.
ಈ ಭೇಟಿಯ ಸಮಯದಲ್ಲಿ, ಎರಡೂ ಕಡೆಯವರು ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ ಮತ್ತು ಸಂಸ್ಕೃತಿಯಲ್ಲಿ ಕಾರ್ಯತಂತ್ರದ ಪಾಲುದಾರಿಕೆಗಳನ್ನು ದೀರ್ಘಗೊಳಿಸುವತ್ತ ಗಮನಹರಿಸಿದ್ದಾರೆ. ಪ್ರಧಾನಿ ಮೋದಿ ಬುಧವಾರ ಮಸ್ಕತ್‌ಗೆ ಆಗಮಿಸಿದರು. ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ಮತ್ತು ಗೌರವ ರಕ್ಷೆಯನ್ನು ನೀಡಲಾಯಿತು.
Advertisement