ದಕ್ಷಿಣ ಆಫ್ರಿಕಾ ಪಬ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: 9 ಮಂದಿ ಸಾವು, 10 ಜನರಿಗೆ ಗಾಯ

ಜೋಹಾನ್ಸ್‌ಬರ್ಗ್‌ನಿಂದ ಪಶ್ಚಿಮಕ್ಕೆ 46 ಕಿಲೋಮೀಟರ್ ದೂರದಲ್ಲಿರುವ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ.
Deadly Shooting at South African Pub Leaves Nine Dead, Ten Wounded
ದಕ್ಷಿಣ ಆಫ್ರಿಕಾದ ಪಬ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ
Updated on

ಜೋಹಾನ್ಸ್‌ಬರ್ಗ್: ಭಾನುವಾರ ಮುಂಜಾನೆ ದಕ್ಷಿಣ ಆಫ್ರಿಕಾದ ಪಬ್‌ನಲ್ಲಿ ಬಂದೂಕುಧಾರಿಗಳ ಗುಂಪೊಂದು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಮತ್ತು ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋಹಾನ್ಸ್‌ಬರ್ಗ್‌ನಿಂದ ಪಶ್ಚಿಮಕ್ಕೆ 46 ಕಿಲೋಮೀಟರ್ ದೂರದಲ್ಲಿರುವ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಕಳೆದ ಮೂರು ವಾರಗಳಲ್ಲಿ ನಡೆದ ಎರಡನೇ ಸಾಮೂಹಿಕ ಗುಂಡಿನ ದಾಳಿ ಇದಾಗಿದೆ.

ಬೆಕರ್ಸ್‌ಡಾಲ್‌ನ ಟ್ಯಾಂಬೊ ವಿಭಾಗದಲ್ಲಿರುವ ಕ್ವಾನೊಕ್ಸೊಲೊ ಟಾವೆರ್ನ್‌ನಲ್ಲಿ ಪಬ್ ಗ್ರಾಹಕರ ಮೇಲೆ ಬಿಳಿ ಮಿನಿ ಬಸ್ ಮತ್ತು ಸಿಲ್ವರ್ ಸೆಡಾನ್‌ನಲ್ಲಿ ಬಂದ ಸುಮಾರು 12 ಅಪರಿಚಿತ ಶಂಕಿತರು ಏಕಾಏಕಿ ಗುಂಡು ಹಾರಿಸಿದ್ದಾರೆ. ಸ್ಥಳದಿಂದ ಪರಾರಿಯಾಗುತ್ತಿದ್ದಾಗಲೂ ಗುಂಡು ಹಾರಿಸುತ್ತಲೇ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ಅಪರಿಚಿತ ಬಂದೂಕುಧಾರಿಗಳು ಬೀದಿಗಳಲ್ಲಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಮತ್ತು ಗಾಯಗೊಂಡ 10 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.

Deadly Shooting at South African Pub Leaves Nine Dead, Ten Wounded
ಬೋಂಡಿ ಬೀಚ್ ರಕ್ತಪಾತ: ನನ್ನ ಮಗ ಒಳ್ಳೆಯ ಹುಡುಗ; ಅಂತಹ ಮಗನನ್ನು ಪಡೆಯಲು ಎಲ್ಲರೂ ಬಯಸುತ್ತಾರೆ; ಹಂತಕ ನವೀದ್ ತಾಯಿ!

'ಮೃತರಲ್ಲಿ ಒಬ್ಬರು ಆನ್‌ಲೈನ್ ಕಾರ್-ಹೇಲಿಂಗ್ ಸೇವೆಯ ಚಾಲಕರಾಗಿದ್ದು, ಅವರು ಪಬ್‌ನ ಹೊರಗೆ ಇದ್ದರು' ಎಂದು ಪ್ರಾಂತೀಯ ಪೊಲೀಸ್ ಆಯುಕ್ತ ಮೇಜರ್ ಜನರಲ್ ಫ್ರೆಡ್ ಕೆಕಾನಾ SABC ದೂರದರ್ಶನಕ್ಕೆ ತಿಳಿಸಿದ್ದಾರೆ.

ಗುಂಡಿನ ದಾಳಿಯ ಶಂಕಿತರಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿವೆ.

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಾರ್‌ಗಳಲ್ಲಿ - ಶೆಬೀನ್ಸ್ ಅಥವಾ ಟಾವೆರ್ನ್‌ಗಳು ಎಂದು ಕರೆಯಲ್ಪಡುವ - ಹಲವಾರು ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ. ಇದರಲ್ಲಿ ದಕ್ಷಿಣ ಆಫ್ರಿಕಾದ ರಾಜಧಾನಿಯ ಬಳಿ ಪರವಾನಗಿ ಪಡೆಯದ ಬಾರ್‌ನಲ್ಲಿ ಹಲವಾರು ಶಂಕಿತರು ನಡೆಸಿದ ಸಾಮೂಹಿಕ ಗುಂಡಿನ ದಾಳಿಯೂ ಸೇರಿದೆ. ಈ ತಿಂಗಳ ಆರಂಭದಲ್ಲಿ ಕನಿಷ್ಠ 12 ಜನರು ಸಾವಿಗೀಡಾಗಿದ್ದರು ಮತ್ತು 13 ಜನರು ಗಾಯಗೊಂಡರು.

ದಕ್ಷಿಣ ಆಫ್ರಿಕಾವು ಇತ್ತೀಚಿನ ವರ್ಷಗಳಲ್ಲಿ ಬಾರ್‌ಗಳಲ್ಲಿ (ಷೆಬೀನ್ಸ್ ಅಥವಾ ಟ್ಯಾವೆರ್‌ಗಳು ಎಂದೂ ಕರೆಯುತ್ತಾರೆ) ಅನೇಕ ಸಾಮೂಹಿಕ ಗುಂಡಿನ ದಾಳಿ ಪ್ರಕರಣಗಳು ನಡೆದಿವೆ. ಈ ತಿಂಗಳ ಆರಂಭದಲ್ಲಿ ರಾಜಧಾನಿಯ ಬಳಿ ಪರವಾನಗಿ ಪಡೆಯದ ಬಾರ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಇದರ ಪರಿಣಾಮವಾಗಿ ಕನಿಷ್ಠ 12 ಜನರು ಸಾವಿಗೀಡಾದರು ಮತ್ತು 13 ಜನರು ಗಾಯಗೊಂಡರು.

Deadly Shooting at South African Pub Leaves Nine Dead, Ten Wounded
ಸಿಡ್ನಿ ಬಾಂಡಿ ಬೀಚ್ ಗುಂಡಿನ ದಾಳಿ: 'ಬೆಂಕಿಯ ಮೇಲೆ ತುಪ್ಪ' ಸುರಿದ ನೆತನ್ಯಾಹು; ಹೇಳಿದ್ದೇನು?

2022ರಲ್ಲಿ ಜೋಹಾನ್ಸ್‌ಬರ್ಗ್‌ನ ಸೊವೆಟೊ ಪಟ್ಟಣದಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿಯಲ್ಲಿ 16 ಜನರು ಸಾವಿಗೀಡಾಗಿದ್ದರು. ಅದೇ ದಿನ, ಮತ್ತೊಂದು ಪ್ರಾಂತ್ಯದ ಬಾರ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ನಾಲ್ಕು ಜನರು ಮೃತಪಟ್ಟಿದ್ದರು.

2024 ರಲ್ಲಿ ಸುಮಾರು 26,000 ನರಹತ್ಯೆಗಳು ಅಥವಾ ದಿನಕ್ಕೆ ಸರಾಸರಿ 70 ಕ್ಕಿಂತ ಹೆಚ್ಚು ನಡೆದಿದ್ದು, ದಕ್ಷಿಣ ಆಫ್ರಿಕಾವು ವಿಶ್ವದಲ್ಲೇ ಅತಿ ಹೆಚ್ಚು ನರಹತ್ಯೆ ದರಗಳನ್ನು ಹೊಂದಿದೆ. ನರಹತ್ಯೆಗೆ ಬಂದೂಕುಗಳೇ ಪ್ರಮುಖ ಕಾರಣವಾಗಿವೆ.

62 ಮಿಲಿಯನ್ ಜನಸಂಖ್ಯೆಯಿರುವ ರಾಷ್ಟ್ರವು ತುಲನಾತ್ಮಕವಾಗಿ ಕಠಿಣ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿದ್ದರೂ, ಅಕ್ರಮ ಬಂದೂಕುಗಳನ್ನು ಬಳಸಿ ಅನೇಕ ಕೊಲೆಗಳನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com