

ಕ್ಯಾಲಿಫೋರ್ನಿಯಾ: ಅಮೆರಿಕದ ಲಾಸ್ ಎಂಜಲೀಸ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಗೇಮ್ ತಯಾರಿಕಾ ವಿನ್ಸ್ ಜಾಂಪೆಲ್ಲಾ ನಿಧನರಾಗಿದ್ದಾರೆ.
Call Of Duty ತಯಾರಕ ವಿನ್ಸ್ ಜಾಂಪೆಲ್ಲಾ ಅವರ ದುಬಾರಿ ಫೆರಾರಿ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತು ಅದರೊಳಗಿದ್ದ ವಿನ್ಸ್ ಜಾಂಪೆಲ್ಲಾ ಕಾರಿನೊಳಗೇ ಸಾವನ್ನಪ್ಪಿದ್ದಾರೆ.
ಲಾಸ್ ಏಂಜಲೀಸ್‌ನ ಉತ್ತರಕ್ಕೆ ಸ್ಯಾನ್ ಗೇಬ್ರಿಯಲ್ ಪರ್ವತಗಳಲ್ಲಿನ ಅತೀ ಹೆಚ್ಚು ತಿರುವುಗಳನ್ನು ಹೊಂದಿರುವ ರಸ್ತೆಯಾದ ಏಂಜಲೀಸ್ ಕ್ರೆಸ್ಟ್ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
2026 ಫೆರಾರಿ 296 ಜಿಟಿಎಸ್ ಕಾರು ಸ್ಥಳೀಯ ಸಮಯ ಸುಮಾರು ಮಧ್ಯಾಹ್ನ 12:45 ಕ್ಕೆ ಟ್ರ್ಯಾಕ್‌ನಿಂದ ಹೊರಟು ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು.
ಈ ವೇಳೆ ಎಲೆಕ್ಟ್ರಾನಿಕ್ ಆರ್ಟ್ಸ್ (EA) ಕಾರ್ಯನಿರ್ವಾಹಕ ಮತ್ತು ರೆಸ್ಪಾನ್ ಎಂಟರ್‌ಟೈನ್‌ಮೆಂಟ್ ಮುಖ್ಯಸ್ಥ 55 ವರ್ಷದ ವಿನ್ಸ್ ಜಾಂಪೆಲ್ಲಾ ನಿಧನರಾಗಿದ್ದಾರೆ.
ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಕಾರಿನೊಳಗಿದ್ದ ಮತ್ತೋರ್ವ ಪ್ರಯಾಣಿಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರೂ ಕೂಡ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಹೇಳಲಾಗಿದೆ.
ಪ್ರಸ್ತುತ ಕ್ಯಾಲಿಫೋರ್ನಿಯಾ ಹೆದ್ದಾರಿ ಗಸ್ತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅಪಘಾತದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿಪರೀತ ತಿರುವುಗಳಿದ್ದ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಕಾರು ತಡೆಗೋಡೆಗೆ ಢಿಕ್ಕಿಯಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ದಾಖಲಾಗಿದೆ.
Advertisement