

ಟೆಕ್ಸಾಸ್: ಯುವ ವೈದ್ಯಕೀಯ ರೋಗಿ ಮತ್ತಿತರ ಏಳು ಜನರನ್ನು ಹೊತ್ತೊಯ್ಯುತ್ತಿದ್ದ ಮೆಕ್ಸಿಕನ್ ನೌಕಾಪಡೆಯ ಚಿಕ್ಕ ವಿಮಾನವೊಂದು ಗಾಲ್ವೆಸ್ಟನ್ ಬಳಿ ಅಪಘಾತಕ್ಕೀಡಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್ ಸಮುದ್ರದಲ್ಲಿ ಹುಡುಕಾಟ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಾಲ್ವರು ನೌಕಪಡೆಯ ಅಧಿಕಾರಿಗಳು, ನಾಲ್ವರು ನಾಗರಿಕರು ಮತ್ತು ಒಂದು ಮಗು ವಿಮಾನದಲ್ಲಿದ್ದರು ಎನ್ನಲಾಗಿದೆ. ಆದರೆ ಅವರಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ ಎಂದು ಮೆಕ್ಸಿಕೊದ ನೌಕಾಪಡೆಯು ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗೆ ಹೇಳಿಕೆಯಲ್ಲಿ ತಿಳಿಸಿದೆ.
ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಪೆಟಿ ಆಫೀಸರ್ (U.S. Coast Guard Petty) ಲ್ಯೂಕ್ ಬೇಕರ್ ಖಚಿತಪಡಿಸಿದ್ದಾರೆ. ಅಪಘಾತಕ್ಕೆ ಕಾರಣ ತನಿಖೆ ನಡೆಯುತ್ತಿದೆ.
ಸೋಮವಾರ ಮಧ್ಯಾಹ್ನ ಹೂಸ್ಟನ್‌ನ ಆಗ್ನೇಯಕ್ಕೆ 50 ಮೈಲಿಗಳು (80.5 ಕಿಲೋಮೀಟರ್) ದೂರದಲ್ಲಿರುವ ಟೆಕ್ಸಾಸ್ ಕರಾವಳಿ ಬಳಿ ಈ ದುರ್ಘಟನೆ ಸಂಭವಿಸಿದೆ.
ವೈದ್ಯಕೀಯ ಕಾರ್ಯಾಚರಣೆಗೆ ನೆರವಾಗುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೆಕ್ಸಿಕೊದ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
Advertisement