ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾ ದುರಂತ; ಒಂದೇ ರನ್ ವೇ ನಲ್ಲಿ ಎರಡೆರಡು ವಿಮಾನ, ಪೈಲಟ್ ಸಮಯ ಪ್ರಜ್ಞೆಗೆ 'ಸೆಲ್ಯೂಟ್'

ಚಿಕಾಗೋದ ಮಿಡ್‌ವೇ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದ ಎದುರು ಮತ್ತೊಂದು ವಿಮಾನ ಏಕಾಏಕಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು.
Pilot Aborts Landing To Avoid Collision With Another Jet On Runway In Chicago
ಚಿಕಾಗೋ ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ
Updated on

ಚಿಕಾಗೋ: ಅಮೆರಿಕದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಮಹಾ ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಪ್ರಯಾಣಿಕ ವಿಮಾನದ ಪೈಲಟ್ ಸಮಯ ಪ್ರಜ್ಞೆಗೆ ಎಲ್ಲರೂ ಸೆಲ್ಯೂಟ್ ಹೇಳುತ್ತಿದ್ದಾರೆ.

ಹೌದು.. ಚಿಕಾಗೋದ ಮಿಡ್‌ವೇ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದ ಎದುರು ಮತ್ತೊಂದು ವಿಮಾನ ಏಕಾಏಕಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ಕೂಡಲೇ ಸಂಭಾವ್ಯ ಅಪಾಯ ಮನಗಂಡ ಪೈಲಟ್ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಿದ್ದು, ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತ ತಪ್ಪಿದಂತಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿರುವಂತೆ ಸೌತ್ ವೆಸ್ಟ್​ ವಿಮಾನವು ಇಳಿಯಲು ಪ್ರಯತ್ನಿಸುತ್ತಿರುವಾಗ ಅದೇ ರನ್ ವೇ ಮತ್ತೊಂದು ಭಾಗದಲ್ಲಿ ಮತ್ತೊಂದು ಪುಟ್ಟ ಚಾರ್ಟೆಡ್ ವಿಮಾನ ಅಡ್ಡ ಬಂದಿದೆ. ಕೂಡಲೇ ಪ್ರಯಾಣಿಕ ವಿಮಾನದ ಪೈಲಟ್ ವಿಮಾನವನ್ನು ನೋಡಿ ವಿಮಾನವನ್ನು ಸಂಪೂರ್ಣವಾಗಿ ಕೆಳಗಿಳಿಸದೇ ಮತ್ತೆ ಆಕಾಶಕ್ಕೆ ಹಾರಿಸಿದ್ದಾನೆ. ಆ ಮೂಲಕ ಆಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ. ವಿಮಾನವು ರನ್‌ವೇ ಮೇಲೆ ಇಳಿಯಲು ಕೇವಲ 50 ಅಡಿ ದೂರದಲ್ಲಿದ್ದಾಗ ಅದನ್ನು ಪೈಲಟ್ ಬಲವಂತವಾಗಿ ಮೇಲಕ್ಕೆ ಟೇಕ್ ಆಫ್ ಮಾಡಿಸಿದ್ದಾರೆ ಎಂದು ವರದಿಯಾಗಿದೆ.

ಬಳಿಕ ವಿಮಾನವನ್ನು ಮತ್ತೆ ರನ್ ವೇನತ್ತ ತಿರುಗಿಸಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ವಿಮಾನ ಕೆಳಗಿಳಿಸಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲರ್ ಹಾಗೂ ಪೈಲಟ್​ತುರ್ತು ನಿರ್ಧಾರದಿಂದ ಅಪಘಾತ ತಪ್ಪಿದೆ. ಇನ್ನೊಂದು ವಿಮಾನವು ರನ್‌ವೇಗೆ ತಪ್ಪಾಗಿ ಪ್ರವೇಶಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Pilot Aborts Landing To Avoid Collision With Another Jet On Runway In Chicago
ಸುಡಾನ್ ಮಿಲಿಟರಿ ವಿಮಾನ ಅಪಘಾತ: ಸೇನಾ ಅಧಿಕಾರಿಗಳು, ನಾಗರಿಕರು ಸೇರಿದಂತೆ 10 ಜನರ ಸಾವು

9 ಬಾರಿ ಎಚ್ಚರಿಕೆ

ಇನ್ನು ಮಿಡ್‌ವೇ ಏರ್ ಟ್ರಾಫಿಕ್ ಕಂಟ್ರೋಲ್ ಮಾಹಿತಿಯನ್ನು ಸರಿಪಡಿಸಿ, ಜೆಟ್‌ನ ಪೈಲಟ್‌ಗೆ ರನ್‌ವೇ 31 ರಲ್ಲಿ ಇಳಿಯದಂತೆ ಪೈಲಟ್ ಬರೊಬ್ಬರಿ ಕನಿಷ್ಠ ಒಂಬತ್ತು ಬಾರಿ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಅದಾಗ್ಯೂ ಪೈಲಟ್ ಆ ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ.

ಫ್ಲೈಟ್‌ರಾಡರ್ 24 ಪ್ರಕಾರ, ನೈಋತ್ಯ ವಿಮಾನವು ನೆಬ್ರಸ್ಕಾದ ಒಮಾಹಾದಿಂದ ಆಗಮಿಸುತ್ತಿತ್ತು. ಮತ್ತು ಖಾಸಗಿ ಜೆಟ್, ಬೊಂಬಾರ್ಡಿಯರ್ ಚಾಲೆಂಜರ್ 350, ಟೆನ್ನೆಸ್ಸೀಯ ನಾಕ್ಸ್‌ವಿಲ್ಲೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಅಮೆರಿಕದಲ್ಲಿ ವಿಮಾನ ದುರಂತಗಳ ಸರಣಿಯೇ ದಾಖಲಾಗಿದ್ದು, ಈ ಪೈಕಿ ಕಳೆದ ತಿಂಗಳು ಸೇನಾ ಹೆಲಿಕಾಪ್ಟರ್ ಮತ್ತು ಪ್ರಯಾಣಿಕ ಜೆಟ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 67 ಜನರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com