ಭ್ರಷ್ಟಾಚಾರ ಪ್ರಕರಣ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 14 ವರ್ಷ, ಪತ್ನಿ ಬುಶ್ರಾಗೆ 7 ವರ್ಷ ಜೈಲು ಶಿಕ್ಷೆ

ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ಗಳಷ್ಟು ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) 2023ರ ಡಿಸೆಂಬರ್‌ನಲ್ಲಿ 72 ವರ್ಷದ ಇಮ್ರಾನ್ ಖಾನ್, 50 ವರ್ಷದ ಬುಶ್ರಾ ಬೀಬಿ ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಪತ್ನಿ ಬುಶ್ರಾ ಬೀಬಿಯೊಂದಿಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌
ಪತ್ನಿ ಬುಶ್ರಾ ಬೀಬಿಯೊಂದಿಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌
Updated on

ಇಸ್ಲಾಮಾಬಾದ್: 190 ಮಿಲಿಯನ್ ಪೌಂಡ್‌ಗಳ ಅಲ್ ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರು ತಪ್ಪಿತಸ್ಥರೆಂದು ಶುಕ್ರವಾರ ತೀರ್ಪು ನೀಡಿರುವ ಪಾಕಿಸ್ತಾನದ ನ್ಯಾಯಾಲಯ, ಇಬ್ಬರಿಗೆ ಕ್ರಮವಾಗಿ 14 ವರ್ಷ ಮತ್ತು ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಇಂದು ತೀರ್ಪನ್ನು ಪ್ರಕಟಿಸಿದ್ದಾರೆ. ಈ ಹಿಂದೆ ವಿವಿಧ ಕಾರಣಗಳಿಂದಾಗಿ ಮೂರು ಬಾರಿ ತೀರ್ಪನ್ನು ಮುಂದೂಡಲಾಗಿತ್ತು. ಆದಿಲಾ ಜೈಲಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಲಾಗಿದೆ.

ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ಗಳಷ್ಟು ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) 2023ರ ಡಿಸೆಂಬರ್‌ನಲ್ಲಿ 72 ವರ್ಷದ ಇಮ್ರಾನ್ ಖಾನ್, 50 ವರ್ಷದ ಬುಶ್ರಾ ಬೀಬಿ ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು.

ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಉದ್ಯಮಿ ಸೇರಿದಂತೆ ಇತರರು ದೇಶದಿಂದ ಪರಾರಿಯಾಗಿರುವ ಕಾರಣದಿಂದಾಗಿ ಇಮ್ರಾನ್ ಖಾನ್ ಮತ್ತು ಬೀಬಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪತ್ನಿ ಬುಶ್ರಾ ಬೀಬಿಯೊಂದಿಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌
ಹೊಸ ಪ್ರತಿಭಟನಾ ಕಾನೂನಿನಡಿ ಇಮ್ರಾನ್ ಖಾನ್ ಪಕ್ಷದ ಆರು ಸಂಸದರ ಬಂಧನ!

ಉದ್ಯಮಿಯೊಬ್ಬರ ಜೊತೆಗಿನ ವ್ಯವಹಾರದ ಇತ್ಯರ್ಥದ ನಂತರ 50 ಶತಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆಯು ಪಾಕಿಸ್ತಾನಕ್ಕೆ ಹಿಂದಿರುಗಿಸಿತ್ತು. ಈ ಹಣವನ್ನು ಇಮ್ರಾನ್ ಖಾನ್ ದಂಪತಿ ಮತ್ತು ಇತರರು ದುರುಪಯೋಗಪಡಿಸಿಕೊಂಡಿದ್ದಾರೆ. ದೇಶದ ಖಜಾನೆಗೆ ಸೇರಬೇಕಿದ್ದ ಈ ಹಣವನ್ನು ಬೀಬಿ ಮತ್ತು ಖಾನ್‌ ಅವರಿಗೆ ವಿಶ್ವವಿದ್ಯಾಲಯ ಸ್ಥಾಪಿಸಲು ಸಹಾಯ ಮಾಡಿದ್ದ ಉದ್ಯಮಿಯ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಅಲ್ ಖಾದಿರ್ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಬೀಬಿ ಅವರು ಝೀಲಂನಲ್ಲಿರುವ ಅಲ್-ಖಾದಿರ್ ವಿಶ್ವವಿದ್ಯಾಲಯಕ್ಕಾಗಿ 458 ಕನಾಲ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಈ ಪ್ರಕರಣದಲ್ಲಿ ಹಲವು ಲಾಭ ಪಡೆದ ಆರೋಪ ಕೇಳಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com