
ನ್ಯೂಯಾರ್ಕ್: ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನ್ನು ನಿಷೇಧಿಸುವ ಫೆಡರಲ್ ಕಾನೂನು ಜಾರಿಗೆ ಬರುವ ಮುನ್ನ ಪ್ರಮುಖ ಅಪ್ಲಿಕೇಶನ್ ಸ್ಟೋರ್ ಗಳಿಂದ ಟಿಕ್‌ಟಾಕ್‌ನ ಅಪ್ಲಿಕೇಶನ್ ನ್ನು ತೆಗೆದುಹಾಕಲಾಗಿದೆ.
ಭಾರತೀಯ ಕಾಲಮಾನ ಕಳೆದ ರಾತ್ರಿ 10:50 ರ ಹೊತ್ತಿಗೆ, ಆಪಲ್ ಮತ್ತು ಗೂಗಲ್ ಅಪ್ಲಿಕೇಶನ್ ಸ್ಟೋರ್ ಗಳಲ್ಲಿ ಅಪ್ಲಿಕೇಶನ್ ಕಂಡುಬಂದಿಲ್ಲ, ಇವು ಟಿಕ್‌ಟಾಕ್‌ನ ಚೀನಾ ಮೂಲದ ಕಂಪನಿ ಬೈಟ್‌ಡ್ಯಾನ್ಸ್ ಪ್ಲಾಟ್‌ಫಾರ್ಮ್ ನ್ನು ಮಾರಾಟ ಮಾಡಬೇಕು ಅಥವಾ ಯುಎಸ್ ನಿಷೇಧವನ್ನು ಎದುರಿಸಬೇಕು ಎಂಬ ಕಾನೂನಿನಡಿಯಲ್ಲಿ ಪ್ಲಾಟ್ ಫಾರ್ಮ್ ಒದಗಿಸುವುದನ್ನು ನಿಷೇಧಿಸಲಾಗಿತ್ತು.
ನಿನ್ನೆ ಸಂಜೆ ಬಳಕೆದಾರರು ಟಿಕ್‌ಟಾಕ್ ಅಪ್ಲಿಕೇಶನ್ ನ್ನು ತೆರೆದಾಗ, ವೀಡಿಯೊಗಳಲ್ಲಿ ಸ್ಕ್ರೋಲ್ ಮಾಡುವುದನ್ನು ತಡೆಯುವ ಕಂಪನಿಯಿಂದ ಪಾಪ್-ಅಪ್ ಸಂದೇಶ ಬಂತು. ಟಿಕ್‌ಟಾಕ್ ನ್ನು ನಿಷೇಧಿಸುವ ಕಾನೂನನ್ನು ಯುಎಸ್‌ನಲ್ಲಿ ಜಾರಿಗೆ ತರಲಾಗಿದೆ ಎಂದು ಸಂದೇಶದಲ್ಲಿತ್ತು. ಇನ್ನು ನೀವು ಟಿಕ್ ಟಾಕ್ ಬಳಸಲು ಸಾಧ್ಯವಿಲ್ಲ ಎಂದು ಅದರಲ್ಲಿ ಹೇಳಲಾಗಿತ್ತು.
ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಟಿಕ್‌ಟಾಕ್ ನ್ನು ಮರುಸ್ಥಾಪಿಸುವ ಪರಿಹಾರಕ್ಕಾಗಿ ನಮ್ಮೊಂದಿಗೆ ಕೆಲಸ ಮಾಡುವುದಾಗಿ ಹೇಳಿರುವುದು ನಮ್ಮ ಅದೃಷ್ಟ, ದಯವಿಟ್ಟು ಟ್ಯೂನ್ ಆಗಿರಿ! ಎಂದು ಸಂದೇಶ ಹೇಳುತ್ತದೆ.
ಆ ಪ್ರಕಟಣೆ ಹೊರಡುವ ಮೊದಲು, ಕಂಪನಿಯು ಬಳಕೆದಾರರಿಗೆ ಮತ್ತೊಂದು ಸಂದೇಶದಲ್ಲಿ ತನ್ನ ಸೇವೆ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಹೇಳಿತ್ತು ಮತ್ತು ಸಾಧ್ಯವಾದಷ್ಟು ಬೇಗ ತನ್ನ ಯುಎಸ್ ಸೇವೆಯನ್ನು ಪುನಃಸ್ಥಾಪಿಸಲು ಕೆಲಸ ಮಾಡುವುದಾಗಿ ತಿಳಿಸಿತ್ತು.
ಕಳೆದ ವರ್ಷ ಅಧ್ಯಕ್ಷ ಜೊ ಬೈಡನ್ ಅವರು ಸಹಿ ಮಾಡಿದ ಫೆಡರಲ್ ಕಾನೂನು, ಬೈಟ್‌ಡ್ಯಾನ್ಸ್ ಟಿಕ್‌ಟಾಕ್‌ನ ಯುಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಪಾಲನ್ನು ಹಿಂತೆಗೆದುಕೊಳ್ಳಬೇಕೆಂದು ಅಥವಾ ನಿಷೇಧವನ್ನು ಎದುರಿಸಬೇಕೆಂದು ಸೂಚಿಸಲಾಗಿತ್ತು.
Advertisement