ಟ್ರಂಪ್ ಗಡಿಪಾರು ಕಾರ್ಯಾಚರಣೆ ಭಾಗವಾಗಿ ನೂರಾರು ವಲಸಿಗರ ಬಂಧನ, ಅಮೆರಿಕದಿಂದ ಹೊರಕ್ಕೆ!

"ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಕಾರ್ಯಾಚರಣೆ ನಡೆಯುತ್ತಿದೆ" ಎಂದು ಕ್ಯಾರೋಲಿನ್ ಲೀವಿಟ್ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್‌ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭರವಸೆಯ ಸಾಮೂಹಿಕ ಗಡಿಪಾರು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ನೂರಾರು ವಲಸಿಗರನ್ನು ಗುರುವಾರ ಬಂಧಿಸಲಾಯಿತು ಮತ್ತು ಇತರರನ್ನು ಮಿಲಿಟರಿ ವಿಮಾನಗಳ ಮೂಲಕ ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದು ಶ್ವೇತಭವನ ತಿಳಿಸಿದೆ.

ಟ್ರಂಪ್ ಅವರು ಎರಡನೇ ಬಾರಿ ಅಧಿಕಾರಕ್ಕೆ ಮರಳಿದ ನಂತರ ಮೊದಲ ಪ್ರವಾಸದಲ್ಲಿ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ಕ್ಯಾಲಿಫೋರ್ನಿಯಾ ಮತ್ತು ಉತ್ತರ ಕೆರೊಲಿನಾಗೆ ಶುಕ್ರವಾರ ತೆರಳಲು ಸಿದ್ಧರಾಗುತ್ತಿದ್ದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಟ್ರಂಪ್ ಆಡಳಿತವು ಗುರುವಾರ "538 ಅಕ್ರಮ ವಲಸೆ ಅಪರಾಧಿಗಳನ್ನು ಬಂಧಿಸಿದೆ" ಮತ್ತು "ನೂರಾರು" ಜನರನ್ನು ಮಿಲಿಟರಿ ವಿಮಾನಗಳ ಮೂಲಕ ಗಡಿಪಾರು ಮಾಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್
ಅಮೆರಿಕ ಎದುರಿಸುತ್ತಿರುವ ಪ್ರತಿಯೊಂದು ಬಿಕ್ಕಟ್ಟನ್ನೂ ಸರಿಪಡಿಸಲು ಐತಿಹಾಸಿಕ ವೇಗದಲ್ಲಿ ಕೆಲಸ ಮಾಡುತ್ತೇವೆ: Donald Trump

"ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಕಾರ್ಯಾಚರಣೆ ನಡೆಯುತ್ತಿದೆ" ಎಂದು ಕ್ಯಾರೋಲಿನ್ ಲೀವಿಟ್ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗುರುವಾರ, ನ್ಯೂಜೆರ್ಸಿಯ ನ್ಯೂವಾರ್ಕ್ ನಗರದ ಡೆಮಾಕ್ರಟಿಕ್ ಮೇಯರ್ ರಾಸ್ ಬರಾಕಾ ಅವರು, ವಲಸೆ ಮತ್ತು ಕಸ್ಟಮ್ಸ್ ಜಾರಿ(ICE) ಏಜೆಂಟ್‌ಗಳು "ಸ್ಥಳೀಯ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ... ದಾಖಲೆರಹಿತ ನಿವಾಸಿಗಳು ಮತ್ತು ನಾಗರಿಕರನ್ನು ವಾರಂಟ್ ನೀಡದೆ ಬಂಧಿಸಿದ್ದಾರೆ" ಎಂದು ಹೇಳಿದ್ದಾರೆ. ಅಲ್ಲದೆ ದಾಳಿಯ ಸಮಯದಲ್ಲಿ ಬಂಧಿಸಲ್ಪಟ್ಟವರಲ್ಲಿ ಒಬ್ಬರು ಯುಎಸ್ ಮಿಲಿಟರಿ ಮಾಜಿ ಅಧಿಕಾರಿ ಎಂದು ಬರಾಕಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com