
ಬೋನಿ ಬ್ಲೂ ಸೆಕ್ಸ್ ಮ್ಯಾರಥಾನ್ ನಲ್ಲಿ ಭಾಗವಹಿಸಲು ಸಾಲಿನಲ್ಲಿ ಕಾಯುತ್ತಿದ್ದ ಗಂಡಸರು ತಮ್ಮ ಮುಖಗಳನ್ನು ಮುಚ್ಚಿಕೊಂಡಿರಬಹುದು. ಆದರೆ ನೀವು ನಿಮ್ಮ ತಾಯಿಯಿಂದ ನಿಮ್ಮನ್ನು ಮರೆಮಾಡಲು ಸಾಧ್ಯವಿಲ್ಲ. ಹೌದು... ಬೋನಿ ಬ್ಲೂ ಜೊತೆ ಸೆಕ್ಸ್ ಮಾಡಲು ಹೋಗಿದ್ದ 19 ವರ್ಷದ ಯುವಕನನ್ನು ಆತನ ತಾಯಿ ಗುರುತಿಸಿ ಆತನನ್ನು ಅಲ್ಲಿಂದ ಎಳೆದುಕೊಂಡು ಹೋಗಿರುವ ವಿಡಿಯೋವೊಂದು ವೈರಲ್ ಆಗಿದೆ.
ದಿ ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, 19 ವರ್ಷದ ಯುವಕನನ್ನು OnlyFans ನೀಲಿತಾರೆಯ ಸೆಕ್ಸ್ ಮ್ಯಾರಥಾನ್ ನಿಂದ ಹೊರಬರುವಂತೆ ಒತ್ತಾಯಿಸಲಾಯಿತು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ನೀವು ಒಳ್ಳೆ ತಾಯಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಬೋನಿ ಬ್ಲೂ 12 ಗಂಟೆಗಳಲ್ಲಿ 1,057 ಪುರುಷರ ಜೊತೆ ಸೆಕ್ಸ್ ಮಾಡುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.
ಇನ್ನು ಬೋನಿ ಬ್ಲೂ ಜೊತೆ ಸೆಕ್ಸ್ ಮಾಡಲು ಹೋಗಿದ್ದ ಯುವಕ ಮತ್ತು ತಾಯಿಯ ನಡುವಿನ ಸಂಪೂರ್ಣ ವಾಗ್ವಾದವನ್ನು ಟಿಕ್‌ಟಾಕ್ ಖ್ಯಾತಿಯ ಬ್ರಾಂಡನ್ ಬೀವಿಸ್ ಚಿತ್ರೀಕರಿಸಿದ್ದಾರೆ. ತನ್ನ ಮಗ ಏನು ಮಾಡಲಿದ್ದಾನೆಂದು ಅರಿತುಕೊಂಡ ತಾಯಿ ಕೋಪಗೊಂಡ ತಕ್ಷಣ, ಆತನನ್ನು ಸರದಿಯಿಂದ ಹೊರಗೆಳೆದು ಬಟ್ಟೆ ಧರಿಸಲು ಕೇಳಿಕೊಂಡಳು ಎಂದು ವರದಿಯಾಗಿದೆ. ನೀನು ಬಟ್ಟೆ ಹಾಕಿಕೋ, ಇಲ್ಲದಿದ್ದರೆ ನಾನು ಪೊಲೀಸರಿಗೆ ಕರೆ ಮಾಡುತ್ತೇನೆ ಎಂದು ಮಹಿಳೆ ಕೂಗುತ್ತಿರುವುದು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಕೇಳಿಬಂದಿದೆ.
ಇನ್ನು ಕೆಲವರು ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆಕೆ ತನ್ನ ಮಗನನ್ನು ಬಿಟ್ಟು ಹೋಗಲು ನಿರಾಕರಿಸಿದಳು. ಏತನ್ಮಧ್ಯೆ, ಆ ಯುವಕ ತನ್ನ ತಾಯಿಯೊಂದಿಗೆ ಜಗಳವಾಡಿ, ಸೆಕ್ಸ್ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳುವುದಾಗಿ ಒತ್ತಾಯಿಸಿದನು. ಈ ವೇಳೆ ಯುವಕ ನನಗೆ 19 ವರ್ಷವಾಗಿದೆ. ನಾನು ಏನು ಬೇಕಾದರೂ ಮಾಡಬಹುದು. ನಾನು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದೇನೆ. ಎಂದು ಯುವಕ ತನ್ನ ತಾಯಿಗೆ ಹೇಳಿದನೆಂದು ವರದಿಯಾಗಿದೆ. ಆದಾಗ್ಯೂ, ಮಗನನ್ನು ತಾಯಿ ಎಳೆದುಕೊಂಡು ಹೊರಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
Advertisement