Covid ನಂತರ ಅಮೆರಿಕಕ್ಕೆ ಮತ್ತೊಂದು ಗಂಡಾಂತರ: ಹಕ್ಕಿ ಜ್ವರದ ಹೊಸ ತಳಿ ಪತ್ತೆ, ಓರ್ವ ಸಾವು; H5N9 ಬಗ್ಗೆ ತಜ್ಞರ ಕಳವಳ!

ಕ್ಯಾಲಿಫೋರ್ನಿಯಾದ ಬಾತುಕೋಳಿ ಫಾರ್ಮ್‌ನಲ್ಲಿ ಹಕ್ಕಿ ಜ್ವರದ ಹೊಸ ತಳಿ ಪತ್ತೆಯಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಾತುಕೋಳಿಗಳಲ್ಲಿ ಈ ರೂಪಾಂತರ ಪತ್ತೆಯಾಗಿರುವುದು ಇದೇ ಮೊದಲು ಎಂದು ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ.
ಹಕ್ಕಿ ಜ್ವರದ ಹೊಸ ತಳಿ
ಹಕ್ಕಿ ಜ್ವರದ ಹೊಸ ತಳಿAFP
Updated on

ಪ್ಯಾರಿಸ್: ಕ್ಯಾಲಿಫೋರ್ನಿಯಾದ ಬಾತುಕೋಳಿ ಫಾರ್ಮ್‌ನಲ್ಲಿ ಹಕ್ಕಿ ಜ್ವರದ ಹೊಸ ತಳಿ ಪತ್ತೆಯಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಾತುಕೋಳಿಗಳಲ್ಲಿ ಈ ರೂಪಾಂತರ ಪತ್ತೆಯಾಗಿರುವುದು ಇದೇ ಮೊದಲು ಎಂದು ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ. ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (WOAH) ವರದಿಯ ಪ್ರಕಾರ, ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿರುವ ವಾಣಿಜ್ಯ ಬಾತುಕೋಳಿ ಫಾರ್ಮ್‌ನಲ್ಲಿ 'ಹೆಚ್ಚು ರೋಗಕಾರಕ ಏವಿಯನ್ ಇನ್ಫ್ಲುಯೆನ್ಸ (HPAI) H5N9 ದೃಢಪಟ್ಟಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಾತುಕೋಳಿಗಳಲ್ಲಿ HPAI H5N9 ನ ತಳಿ ದೃಢಪಟ್ಟಿದೆ ಎಂದು ವಿಶ್ವಾದ್ಯಂತ ಪ್ರಾಣಿ ರೋಗಗಳನ್ನು ಮೇಲ್ವಿಚಾರಣೆ ಮಾಡುವ ಪ್ಯಾರಿಸ್ ಮೂಲದ WOAH ಹೇಳಿದೆ. ಜನವರಿ 13ರಂದು ಈ ತಳಿ ಪತ್ತೆಯಾಗಿದ್ದು ಹರಡುವಿಕೆಯ ಮೂಲ ತಿಳಿದಿಲ್ಲ. ಸದ್ಯ ಫಾರ್ಮ್‌ನಲ್ಲಿರುವ ಎಲ್ಲಾ 119,000 ಬಾತುಕೋಳಿಗಳನ್ನು ಕೊಲ್ಲಲಾಗಿದೆ ಎಂದು WOAH ಹೇಳಿದೆ. ಅಮೆರಿಕದಲ್ಲಿ ಪ್ರಾಣಿಗಳಲ್ಲಿ ವ್ಯಾಪಕವಾಗಿ ಹರಡಿರುವ ಹಕ್ಕಿ ಜ್ವರದ H5N1 ತಳಿಯೂ ಸಹ ಫಾರ್ಮ್‌ನಲ್ಲಿ ಪತ್ತೆಯಾಗಿದೆ ಎಂದು ಸಂಸ್ಥೆ ಹೇಳಿದೆ. ಅಮೆರಿಕದ ಪ್ರಾಣಿ ಆರೋಗ್ಯ ಅಧಿಕಾರಿಗಳು, ಸಾಂಕ್ರಾಮಿಕದ ಕುರಿತು ತನಿಖೆ ನಡೆಸುತ್ತಿದ್ದು ಏಕಾಏಕಿ ಕಣ್ಗಾವಲು ಹೆಚ್ಚಿಸಿದ್ದಾರೆ ಎಂದು WOAH ತಿಳಿಸಿದೆ.

ವಿಪರ್ಯಾಸವೆಂದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಅಮೆರಿಕ ಹೊರನಡೆಯುವ ನಿರ್ಧಾರದ ಬೆನ್ನಲ್ಲೇ ದೇಶದಲ್ಲಿ ಹಕ್ಕಿ ಜ್ವರದ ಹೊಸ ತಳಿಯು ಪತ್ತೆಯಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ವಿಶ್ವಾದ್ಯಂತ ಪ್ರತಿಕ್ರಿಯೆಯನ್ನು ಸಂಘಟಿಸುವ ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಗೆ ಅಮೆರಿಕ ಅತಿದೊಡ್ಡ ದಾನಿಯಾಗಿದೆ. ಹಕ್ಕಿ ಜ್ವರದಿಂದ ಮಾನವರಿಗೆ ಉಂಟಾಗುವ ಸಂಭಾವ್ಯ ಸಾಂಕ್ರಾಮಿಕ ಬೆದರಿಕೆಯ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿರುತ್ತಾರೆ. H5N9 ಮೊದಲಿಗೆ ಹಸುಗಳಲ್ಲಿ ಹರಡಿ ನಂತರ ಜನರಿಗೆ ಸೋಂಕು ತಗುಲಿ ರೂಪಾಂತರಗೊಳ್ಳುವ ಲಕ್ಷಣಗಳು ಕಾಣುತ್ತಿವೆ.

ಕಣ್ಗಾವಲು ಹೆಚ್ಚಿಸಲು ಮತ್ತು ಏಕಾಏಕಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವಂತೆ WOAH ತಿಂಗಳುಗಳಿಂದ ಅಮೆರಿಕದ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಅಮೆರಿಕ ಮತ್ತು WHO ಇನ್ನು ಮುಂದೆ ಸಹಕರಿಸದಿದ್ದರೆ, ನಿರ್ಣಾಯಕ ಡೇಟಾವನ್ನು ಹಂಚಿಕೊಳ್ಳದಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಸ್‌ಗಳ ಹರಡುವಿಕೆಯನ್ನು ಪತ್ತೆಹಚ್ಚುವುದು ಹೆಚ್ಚು ಕಷ್ಟಕರವಾಗಿರುತ್ತದೆ ಎಂದು ಸಂಸ್ಥೆ ಹೇಳಿದೆ.

ಹಕ್ಕಿ ಜ್ವರದ ಹೊಸ ತಳಿ
Trump ಅಧಿಕಾರ ಸ್ವೀಕಾರ ಬೆನ್ನಲ್ಲೇ ಅಕ್ರಮ ವಲಸಿಗರ ವಿರುದ್ಧ ಸಮರ: ಗುರುದ್ವಾರಗಳ ಮೇಲೆ ಅಮೆರಿಕ ಅಧಿಕಾರಿಗಳ ತಪಾಸಣೆ!

ಅದಾಗಲೇ 67 ಜನರಲ್ಲಿ ಜ್ವರ ಕಾಣಿಸಿಕೊಂಡಿದ್ದು ಒಬ್ಬರು ಮೃತಪಟ್ಟಿದ್ದಾರೆ!

ಅಮೆರಿಕದಲ್ಲಿ ಅರವತ್ತೇಳು ಜನರಿಗೆ ಹಕ್ಕಿ ಜ್ವರ ತಗುಲಿದ್ದು, ಅವರ ಪೈಕಿ ಜನವರಿ ಆರಂಭದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ ತಿಳಿಸಿದೆ. ಇನ್ನು ಇಲ್ಲಿಯವರೆಗೆ ಸೋಂಕಿತ ಪ್ರಾಣಿಯಿಂದ ಮನುಷ್ಯರಿಗೆ ಸೋಂಕು ತಗುಲಿದ್ದು, ಜನರಿಂದ ಜನರಿಗೆ ಹರಡಿದ ಪ್ರಕರಣ ಯಾವುದು ವರದಿಯಾಗಿಲ್ಲ ಎಂದು WHO ಒತ್ತಿ ಹೇಳಿದೆ. ಆದರೆ ಒಬ್ಬ ವ್ಯಕ್ತಿಯು ಹಕ್ಕಿ ಜ್ವರ ಮತ್ತು ಕಾಲೋಚಿತ ಜ್ವರ ಎರಡರಿಂದಲೂ ಸೋಂಕಿಗೆ ಒಳಗಾಗಿದ್ದರೆ, ಹಕ್ಕಿ ಜ್ವರ ವೈರಸ್ ಮಾನವರಲ್ಲಿ ಸಾಂಕ್ರಾಮಿಕ ತಳಿಯಾಗಿ ರೂಪಾಂತರಗೊಳ್ಳಬಹುದು. ಮುಂದೆ ಇದು ಸಾಂಕ್ರಾಮಿಕ ರೋಗವಾಗಿ ಪರಿವರ್ತನೆಗೊಳ್ಳಬಹುದು ಎಂಬ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com