Trump ಅಧಿಕಾರ ಸ್ವೀಕಾರ ಬೆನ್ನಲ್ಲೇ ಅಕ್ರಮ ವಲಸಿಗರ ವಿರುದ್ಧ ಸಮರ: ಗುರುದ್ವಾರಗಳ ಮೇಲೆ ಅಮೆರಿಕ ಅಧಿಕಾರಿಗಳ ತಪಾಸಣೆ!

ಅಮೆರಿಕದ ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿರುವ ಗುರುದ್ವಾರಗಳಲ್ಲಿ ಅಕ್ರಮ ವಲಸಿಗರನ್ನು ಪರಿಶೀಲಿಸಲು ಅಮೆರಿಕದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
US officials conduct raids in gurdwaras in New York
ಅಮೆರಿಕ ಗುರುದ್ವಾರಗಳ ಮೇಲೆ ಅಧಿಕಾರಿಗಳ ದಾಳಿ
Updated on

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿದ್ದು, ಇದರ ಮೊದಲ ಹಂತವಾಗಿ ಅಮೆರಿಕದಲ್ಲಿರುವ ಗುರುದ್ವಾರಗಳ ಮೇಲೆ ದಾಳಿ ನಡೆಸಿ ಅಕ್ರಮ ವಲಸಿಗರ ಕುರಿತು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹೌದು.. ಅಮೆರಿಕದ ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿರುವ ಗುರುದ್ವಾರಗಳಲ್ಲಿ ಅಕ್ರಮ ವಲಸಿಗರನ್ನು ಪರಿಶೀಲಿಸಲು ಅಮೆರಿಕದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. "ಅಕ್ರಮ" ವಲಸಿಗರ ಉಪಸ್ಥಿತಿಯನ್ನು ಪರಿಶೀಲಿಸಲು ಅಮೆರಿಕದ ಗೃಹ ಭದ್ರತಾ ಇಲಾಖೆಯ (DHS) ವಲಸೆ ಜಾರಿ ಅಧಿಕಾರಿಗಳು ಭಾನುವಾರ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಗುರುದ್ವಾರಗಳಿಗೆ ಭೇಟಿ ನೀಡಿದರು.

"ಈ ಕ್ರಮವು CBP ಮತ್ತು ICE ಯಲ್ಲಿರುವ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ನಮ್ಮ ವಲಸೆ ಕಾನೂನುಗಳನ್ನು ಜಾರಿಗೊಳಿಸಲು ಮತ್ತು ನಮ್ಮ ದೇಶಕ್ಕೆ ಅಕ್ರಮವಾಗಿ ಬಂದಿರುವ ಕೊಲೆಗಾರರು ಮತ್ತು ಅತ್ಯಾಚಾರಿಗಳು ಸೇರಿದಂತೆ ಕ್ರಿಮಿನಲ್ ವಿದೇಶಿಯರನ್ನು ಹಿಡಿಯಲು ಅಧಿಕಾರ ನೀಡುತ್ತದೆ" ಎಂದು DHS ವಕ್ತಾರರು ಹೇಳಿದ್ದಾರೆ.

ಅಂತೆಯೇ "ಬಂಧನವನ್ನು ತಪ್ಪಿಸಿಕೊಳ್ಳಲು ಅಪರಾಧಿಗಳು ಇನ್ನು ಮುಂದೆ ಅಮೆರಿಕದ ಶಾಲೆಗಳು ಮತ್ತು ಚರ್ಚ್‌ಗಳಲ್ಲಿ, ಗುರುದ್ವಾರಗಳಲ್ಲಿ ಅಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಟ್ರಂಪ್ ಆಡಳಿತವು ನಮ್ಮ ಧೈರ್ಯಶಾಲಿ ಕಾನೂನು ಜಾರಿ ಸಂಸ್ಥೆಗಳ ಕೈಗಳನ್ನು ಕಟ್ಟಿಹಾಕುವುದಿಲ್ಲ ಮತ್ತು ಬದಲಿಗೆ ಅವರು ಸಾಮಾನ್ಯ ಜ್ಞಾನವನ್ನು ಬಳಸುತ್ತಾರೆ ಎಂದು ನಂಬುತ್ತದೆ" ಎಂದು ವಕ್ತಾರರು ತಮ್ಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

US officials conduct raids in gurdwaras in New York
ಬಾಂಗ್ಲಾದ ಯೂನಸ್ ಸರ್ಕಾರಕ್ಕೆ ಟ್ರಂಪ್ ದೊಡ್ಡ ಹೊಡೆತ: ಅಮೆರಿಕದ ನೆರವು ಪಡೆಯುವ ಎಲ್ಲಾ ಮಾರ್ಗಗಳು ಬಂದ್!

ವ್ಯಾಪಕ ವಿರೋಧ

ಇನ್ನು ಅಮೆರಿಕ ಸರ್ಕಾರದ ಈ ನಡೆಗೆ ಅಮೆರಿಕದಲ್ಲಿರುವ ಸಿಖ್ ಧರ್ಮೀಯರು ವಿರೋಧ ವ್ಯಕ್ತಪಡಿಸಿದ್ದು, ಅಂತಹ ಕ್ರಮಗಳು ತಮ್ಮ ನಂಬಿಕೆಯ ಪಾವಿತ್ರ್ಯಕ್ಕೆ ಬೆದರಿಕೆ ಎಂದು ಕೆಲ ಸಿಖ್ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಟ್ರಂಪ್ ಆಡಳಿತದಿಂದ "ಅಕ್ರಮ" ಜರಿದಿರುವ ಸಿಖ್ ಸಂಘಟನೆಗಳು, ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಗುರಿಪಡಿಸಿದ ಕ್ರಮವನ್ನು ಪ್ರಾರಂಭಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮೊದಲು, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಧಾರ್ಮಿಕ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ವಲಸೆ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಲು ನಿರಾಕರಿಸಿದರು. ಅಂತೆಯೇ ಅಂತಹ ಕ್ರಮಗಳು ವಲಸೆಗೆ "ವಿಶಿಷ್ಟವಲ್ಲ" ಎಂದು ಹೇಳಿದರು. "ನೀವು ಹಿಂಸಾತ್ಮಕ ಅಪರಾಧಕ್ಕೆ ಶಿಕ್ಷೆಗೊಳಗಾದ ವ್ಯಕ್ತಿಯನ್ನು ಹೊಂದಿದ್ದರೆ, ಅವರು ಅಕ್ರಮ ವಲಸಿಗರಾಗಿರಲಿ ಅಥವಾ ಇಲ್ಲದಿರಲಿ, ನೀವು ಹೋಗಿ ಸಾರ್ವಜನಿಕ ಸುರಕ್ಷತೆಯನ್ನು ರಕ್ಷಿಸಲು ಆ ವ್ಯಕ್ತಿಯನ್ನು ಕರೆತರಬೇಕು" ಎಂದು ವ್ಯಾನ್ಸ್ ಎಚ್ಚರಿಸಿದ್ದಾರೆ.

"ಸೂಕ್ಷ್ಮ" ಪ್ರದೇಶಗಳ ಕುರಿತು ಹಿಂದಿನ ಮಾರ್ಗಸೂಚಿಗಳನ್ನು ರದ್ದುಗೊಳಿಸುವ ಟ್ರಂಪ್ ಆಡಳಿತದ ಬಗ್ಗೆ ಸಿಖ್ ಅಮೇರಿಕನ್ ಕಾನೂನು ರಕ್ಷಣಾ ಮತ್ತು ಶಿಕ್ಷಣ ನಿಧಿ (ಎಸ್‌ಎಎಲ್‌ಡಿಎಫ್) ತೀವ್ರ ಕಳವಳ ವ್ಯಕ್ತಪಡಿಸಿದೆ. "ಸೂಕ್ಷ್ಮ ಪ್ರದೇಶಗಳಿಗೆ ರಕ್ಷಣೆಗಳನ್ನು ತೆಗೆದುಹಾಕಿ ನಂತರ ಗುರುದ್ವಾರಗಳಂತಹ ಪೂಜಾ ಸ್ಥಳಗಳನ್ನು ಗುರಿಯಾಗಿಸುವ ಗೃಹ ಭದ್ರತಾ ಇಲಾಖೆಯ ನಿರ್ಧಾರದಿಂದ ನಾವು ತೀವ್ರವಾಗಿ ಗಾಬರಿಗೊಂಡಿದ್ದೇವೆ.

ಈ ಕ್ರಮಗಳು ಸಿಖ್ ನಂಬಿಕೆಯ "ಪಾವಿತ್ರ್ಯ"ಕ್ಕೆ ಧಕ್ಕೆ ತರುತ್ತವೆ ಮತ್ತು ಅಮೆರಿಕದಲ್ಲಿರುವ ವಲಸೆ ಸಮುದಾಯಗಳಿಗೆ "ನಕಾರಾತ್ಮಕ ಸಂದೇಶ"ವನ್ನು ರವಾನಿಸುತ್ತವೆ" ಎಂದು ಎಸ್‌ಎಎಲ್‌ಡಿಎಫ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕಿರಣ್ ಕೌರ್ ಗಿಲ್ ಹೇಳಿದ್ದಾರೆ.

US officials conduct raids in gurdwaras in New York
ಟ್ರಂಪ್ ಗಡಿಪಾರು ಕಾರ್ಯಾಚರಣೆ ಭಾಗವಾಗಿ ನೂರಾರು ವಲಸಿಗರ ಬಂಧನ, ಅಮೆರಿಕದಿಂದ ಹೊರಕ್ಕೆ!

ಸಿಖ್ ಸಂಘಟನೆಗಳ ಆಕ್ರೋಶ

ಅಂತೆಯೇ "ನಿರ್ದೇಶನ ಹೊರಡಿಸಿದ ಕೆಲವೇ ದಿನಗಳಲ್ಲಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶಗಳಲ್ಲಿನ ಗುರುದ್ವಾರಗಳಿಗೆ ಡಿಎಚ್‌ಎಸ್ ಅಧಿಕಾರಿಗಳು ಭೇಟಿ ನೀಡುತ್ತಾರೆ ಎಂಬ ಸಮುದಾಯ ವರದಿಗಳೊಂದಿಗೆ ನೀತಿಯಲ್ಲಿನ ಈ ತೊಂದರೆದಾಯಕ ಬದಲಾವಣೆ ಬಂದಿದೆ" ಎಂದು ಎಸ್‌ಎಎಲ್‌ಡಿಎಫ್ ಹೇಳಿದೆ.

ಹೊಸ ನಿರ್ದೇಶನವು ಸಿಖ್ಖರು ತಮ್ಮ ನಂಬಿಕೆಗೆ ಅನುಗುಣವಾಗಿ ಪರಸ್ಪರ ಒಟ್ಟುಗೂಡುವ ಮತ್ತು ಸಹವಾಸ ಮಾಡುವ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ ಎಂದು ಸಿಖ್ ಒಕ್ಕೂಟ ಹೇಳಿದೆ. "ನಮ್ಮ ಗುರುದ್ವಾರಗಳು ಸರ್ಕಾರಿ ಕಣ್ಗಾವಲು ಮತ್ತು ವಾರಂಟ್‌ಗಳೊಂದಿಗೆ ಅಥವಾ ಇಲ್ಲದೆ ಸಶಸ್ತ್ರ ಕಾನೂನು ಜಾರಿ ಸಂಸ್ಥೆಗಳ ದಾಳಿಗೆ ಒಳಗಾಗಬಹುದು ಎಂಬ ಕಲ್ಪನೆಯು ಸಿಖ್ ನಂಬಿಕೆ ಸಂಪ್ರದಾಯಕ್ಕೆ ಸ್ವೀಕಾರಾರ್ಹವಲ್ಲ" ಎಂದು ಅದು ಹೇಳಿದೆ.

ಅಂತೆಯೇ ಸಿಖ್ಖರು ನೋಂದಾಯಿಸಿರಲಿ ಅಥವಾ ಇಲ್ಲದಿರಲಿ.. ಗುರುದ್ವಾರ ಮೇಲಿನ ಇಂತಹ ದಾಳಿಗಳು ಮತ್ತು ಕಣ್ಗಾವಲಿನ ಬಗ್ಗೆ ಕಾಳಜಿ ವಹಿಸಿದರೆ, ಗುರುದ್ವಾರಗಳಿಗೆ ಬರುವವರ ಸಂಖ್ಯೆಯೇ ಕಡಿಮೆಯಾಗುತ್ತದೆ. ಅಗತ್ಯ ಧಾರ್ಮಿಕ ಆಚರಣೆಗಳನ್ನು ಅರ್ಥಪೂರ್ಣ ರೀತಿಯಲ್ಲಿ ನಿರ್ವಹಿಸಲು ಅಸಮರ್ಥವಾಗಬಹುದು" ಎಂದು ಸಿಖ್ ಒಕ್ಕೂ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com