ಅಲಸ್ಕಾದಲ್ಲಿ ಅಮೆರಿಕದ F-35 ಯುದ್ಧ ವಿಮಾನ ಪತನ: ಅಂತಿಮ ಕ್ಷಣದ Video

ಅಮೆರಿಕದ ಅಲಾಸ್ಕಾದ ಐಲ್ಸನ್ ವಾಯುಪಡೆ ನೆಲೆಯಲ್ಲಿ ತರಬೇತಿ ಸಮಯದಲ್ಲಿ ಅಮೆರಿಕ ವಾಯುಪಡೆಯ ಎಫ್ 35 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ.
F-35 Fighter Jet Crashed In Alaska
ಎಫ್ 35 ಯುದ್ಧ ವಿಮಾನ ಪತನ
Updated on

ಅಲಸ್ಕಾ: ತರಬೇತಿ ವೇಳೆ ಅಮೆರಿಕ ವಾಯುಸೇನೆಯ F-35 ಯುದ್ಧ ವಿಮಾನ ಪತನವಾಗಿದ್ದು, ವಿಮಾನ ಪತನದ ಅಂತಿಮ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಮಂಗಳವಾರ ಅಮೆರಿಕದ ಅಲಾಸ್ಕಾದ ಐಲ್ಸನ್ ವಾಯುಪಡೆ ನೆಲೆಯಲ್ಲಿ ತರಬೇತಿ ಸಮಯದಲ್ಲಿ ಅಮೆರಿಕ ವಾಯುಪಡೆಯ ಎಫ್ 35 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಸಿಂಗಲ್ ಸೀಟಿನ ಎಫ್ -35 ಯುದ್ಧ ವಿಮಾನವನ್ನು ಹಾರಿಸುತ್ತಿದ್ದ ಪೈಲಟ್ ಎಮರ್ಜೆನ್ಸಿ ಎಕ್ಸಿಟ್ ಮೂಲಕ ವಿಮಾನದಿಂದ ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ವಿಮಾನವು ಆಗಸದಿಂದ ಲಂಬವಾಗಿ ನೆಲಕ್ಕೆ ಅಪ್ಪಳಿಸಿದ್ದು, ವಿಮಾನ ಪತನಗೊಳ್ಳುವ ಮೊದಲಿನ ವಿಡಿಯೋ ಇದಾಗಿದೆ.

ಅಪಘಾತದ ನಂತರ ದೊಡ್ಡ ಸ್ಫೋಟ ಸಂಭವಿಸಿದ್ದು, ಬೆಂಕಿ ಗಾಳಿಯಲ್ಲಿ ಹಲವಾರು ಮೀಟರ್‌ಗಳಷ್ಟು ಮೇಲಕ್ಕೆ ಹಾರಿದೆ. ಸಮಯಕ್ಕೆ ಸರಿಯಾಗಿ ವಿಮಾನದಿಂದ ಹೊರ ಹೊರ ಜಿಗಿದ ಪೈಲಟ್ ಪ್ಯಾರಾಚೂಟ್ ಸಹಾಯದಿಂದ ನೆಲದ ಮೇಲೆ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಪ್ರಸ್ತುತ ಅವರನ್ನು ಬ್ಯಾಸೆಟ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ

ಎಫ್ 35 ಯುದ್ಧ ವಿಮಾನವು ತರಬೇತಿ ಬಳಿಕ ಲ್ಯಾಂಡ್ ಆಗುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಪತನವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com