
ನ್ಯೂಯಾರ್ಕ್: ಅಮೆರಿಕದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹೈದರಾಬಾದ್ ಮೂಲದ ಕುಟುಂಬವೊಂದು ಸಜೀವ ದಹನವಾಗಿದೆ.
ಮೃತರನ್ನು ವೆಂಕಟ್ ಬೇಜುಗಮ್, ಅವರ ಪತ್ನಿ ತೇಜಸ್ವಿನಿ ಚೊಲ್ಲೇತಿ, ಹಾಗೂ ಅವರ ಇಬ್ಬರು ಮಕ್ಕಳಾದ ಸಿದ್ಧಾರ್ಥ್ ಮತ್ತು ಮೃದಾ ಬೇಜುಗಮ್ ಅವರು ಮೃತ ನಾಲ್ವರು. ವೆಂಕಟ್ ಮತ್ತು ತೇಜಸ್ವಿನಿ ಇತ್ತೀಚೆಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ಹೈದರಾಬಾದ್‌ನಿಂದ ರಜೆಯ ಮೋಜಿಗೆಂದು ಡಲ್ಲಾಸ್‌ಗೆ ಹೋಗಿದ್ದರು. ಅವರೆಲ್ಲರು ಕಾರಿನಲ್ಲಿ ಅಟ್ಲಾಂಟಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ, ಒಂದು ವಾರ ಅಟ್ಲಾಂಟಾದಲ್ಲಿ ಇದ್ದರು.
ಬಳಿಕ ಡಲ್ಲಾಸ್‌ಗೆ ಹಿಂತಿರುಗುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಧ್ಯರಾತ್ರಿ ಡಲ್ಲಾಸ್‌ಗೆ ಹಿಂತಿರುಗುವಾಗ ಗ್ರೀನ್ ಕೌಂಟಿ ಪ್ರದೇಶದಲ್ಲಿ ತಪ್ಪು ದಾರಿಯಲ್ಲಿ ಬಂದ ಮಿನಿ ಟ್ರಕ್, ದಂಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೆಂಕಿ ಹೊತ್ತಿಕೊಂಡು ಇಡೀ ಕುಟುಂಬ ಸಜೀವ ದಹನವಾಗಿದೆ.
ತೀವ್ರ ಮಟ್ಟದಲ್ಲಿ ದೇಹ ಸುಟ್ಟಿರುವುದರಿಂದ ಮೇಲ್ನೋಟಕ್ಕೆ ಚಹರೆ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಡಿಎನ್ಎ ಪರೀಕ್ಷೆ, ಹಲ್ಲಿನ ಪರೀಕ್ಷೆ ಸೇರಿದಂತೆ ಫೋರೆನ್ಸಿಕ್ ಪರೀಕ್ಷೆ ನಡೆಸಲಾಗುತ್ತಿದ್ದು, ಈ ನಾಲ್ವರ ಗುರುತು ಖಚಿತವಾದ ಬಳಿಕ ಸಂಬಂಧಿಕರಿಗೆ ಮೃತದೇಹಗಳನ್ನು ಒಪ್ಪಿಸುವ ಸಾಧ್ಯತೆ ಇದೆ.
Advertisement