ನೇಪಾಳ: ಕೆರೆಗೆ ಉರುಳಿ ಬಿದ್ದ ಕಾರು, ನಾಲ್ವರು ಭಾರತೀಯರ ಸಾವು

ದಕ್ಷಿಣ ನೇಪಾಳದ ರೌತಹತ್ ಜಿಲ್ಲೆಯಲ್ಲಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ, ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಠ್ಮಂಡು: ದಕ್ಷಿಣ ನೇಪಾಳದ ರೌತಹತ್ ಜಿಲ್ಲೆಯಲ್ಲಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ, ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಚಾಲಕ ಮತ್ತು ಕಾರಿನಲ್ಲಿದ್ದ ಇತರರು ಕುಡಿದಿದ್ದರೆಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.

ಮೃತರು ಬಿಹಾರ ಮೂಲದವರಾಗಿದ್ದು, ದೀನಾನಾಥ್ ಸಾಹ್ (25), ಅರುಣ್ ಸಾಹ್ (30), ದಿಲೀಪ್ ಮಹತೋ (28) ಮತ್ತು ಅಮಿತ್ ಮಹತೋ (27) ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com