ಪಾಕಿಸ್ತಾನಿ ನಟಿ Humaira Asghar ನಿಗೂಢ ಸಾವು; Karachi ಫ್ಲಾಟ್ ನಲ್ಲಿ ಶವ ಪತ್ತೆ..; ಬಯಲಾಗಿದ್ದೇ ರೋಚಕ!

ಹುಮೈರಾ ಅಸ್ಗರ್‌ ಅಲಿ ಅವರ ಮೃತದೇಹ ಜು. 8ರಂದು ಕರಾಚಿಯ ಡಿಫೆನ್ಸ್‌ ಹೌಸಿಂಗ್‌ ಅಥಾರಟಿ (Defence Housing Authority)ಯ ಫೇಸ್‌ VIರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು.
Pakistani Actress Humaira Asghar
ಪಾಕ್ ನಟಿ ಹುಮೈರಾ ಅಸ್ಘರ್
Updated on

ಕರಾಚಿ: ಪಾಕಿಸ್ತಾನದ ಜನಪ್ರಿಯ ನಟಿ, ಮಾಡೆಲ್‌ ಹುಮೈರಾ ಅಸ್ಗರ್‌ ಅಲಿ ನಿಗೂಢವಾಗಿ ಮೃತಪಟ್ಟಿದ್ದು, ಕರಾಚಿಯಲ್ಲಿರುವ ಅವರ ಫ್ಲಾಟ್ ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

32 ವರ್ಷದ ಹುಮೈರಾ ಅಸ್ಗರ್‌ ಅಲಿ ಅವರ ಮೃತದೇಹ ಜು. 8ರಂದು ಕರಾಚಿಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದ್ದು, ಸುಮಾರು 9 ತಿಂಗಳ ಹಿಂದೆಯೇ ಆಕೆ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ.

ಹುಮೈರಾ ಅಸ್ಗರ್‌ ಅಲಿ ಅವರ ಮೃತದೇಹ ಜು. 8ರಂದು ಕರಾಚಿಯ ಡಿಫೆನ್ಸ್‌ ಹೌಸಿಂಗ್‌ ಅಥಾರಟಿ (Defence Housing Authority)ಯ ಫೇಸ್‌ VIರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು.

9 ತಿಂಗಳ ಮೊದಲೇ ಸಾವನ್ನಪ್ಪಿರುವ ಶಂಕೆ

ಇನ್ನು ಕೊಳೆತ ಸ್ಥಿತಿಯಲ್ಲಿದ್ದ ನಟಿ ಹುಮೈರಾ ಅವರ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಮೈರಾ ಅವರ ದೇಹದ ಸ್ಥಿತಿ ನೋಡಿದರೆ ಸುಮಾರು 9 ತಿಂಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಮೈರಾ ಹಲವು ಸಮಯಗಳಿಂದ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡುವಂತೆ ಮಾಲೀಕರು ಕೋರ್ಟ್‌ ಸಂಪರ್ಕಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲಿಸಲು ಮನೆ ಬಾಗಿಲು ತೆರೆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

Pakistani Actress Humaira Asghar
ಅಕ್ರಮ ಸಂಬಂಧ ಶಂಕೆ: ಕನ್ನಡ ಕಿರುತೆರೆ ನಟಿ ಹತ್ಯೆಗೆ ಯತ್ನ; ಪೆಪ್ಪರ್‌ ಸ್ಪ್ರೇ ಹೊಡೆದು ಚಾಕು ಇರಿದ ಪತಿರಾಯ!

ಯಾರು ಈ ಹುಮೈರಾ ಅಸ್ಗರ್‌ ಅಲಿ?

ಹುಮೈರಾ ಅಸ್ಗರ್‌ ಅಲಿ ನಟಿ, ಮಾಡೆಲ್‌ ಮತ್ತು ರಿಯಾಲಿಟಿ ಶೋ ಕಲಾವಿದೆ. ಲಾಹೋರ್‌ನಲ್ಲಿ ಜನಿಸಿದ ಇವರು ಮಾಡೆಲ್‌ ಆಗಿ 2013ರಲ್ಲಿ ಬಣ್ಣದ ಲೋಕ್ಕೆ ಕಾಲಿಟ್ಟಿದ್ದರು. ಬಳಿಕ ಕಿರುತೆರೆ ಪ್ರವೇಶಿಸಿದ್ದರು. 'ಲಾಲಿ, ಬೆನಾಮ್, ಚಲ್‌ ದಿಲ್‌ ಮೇರೆ ಮತ್ತು ಸಿರಾತ್-ಎ-ಮುಸ್ತಕೀಮ್ ಎಂಬ ಮುಂತಾದ ಶೋಗಳ ಮೂಲಕ ಖ್ಯಾತಿ ಪಡೆದಿದ್ದರು. 2022ರ ಪಾಕಿಸ್ತಾನಿ ರಿಯಾಲಿಟಿ ಶೋ ʼತಮಾಷಾ ಘರ್‌ʼ ಅವರಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತ್ತು. 2023ರಲ್ಲಿ ಅವರಿಗೆ ರಾಷ್ಟ್ರೀಯ ಮಹಿಳಾ ನಾಯಕತ್ವ ಪ್ರಶಸ್ತಿಯನ್ನು ನೀಡಲಾಗಿತ್ತು.

2015ರಲ್ಲಿ ತೆರೆಕಂಡ ʼಜಲೈಬೀʼ ಚಿತ್ರದ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸಿದ್ದರು. 2021ರಲ್ಲಿ ರಿಲೀಸ್‌ ಆದ ʼಲವ್‌ ವಾಕ್ಸಿನ್‌ʼ ಸಿನಿಮಾದ ಬಳಿಕ ಅವರು ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಅವರ ಸಾವು ನಿಗೂಢವಾಗಿದ್ದು, ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅವರ ಅಕಾಲಿಕ ಮರಣ ಮನರಂಜನ ಕ್ಷೇತ್ರಕ್ಕೆ ಬಹುದೊಡ್ಡ ಆಘಾತ ತಂದಿತ್ತಿದೆ. ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಟಿ ಸಾವು ಬಯಲಾಗಿದ್ದೇ ರೋಚಕ

ಇನ್ನು ಈ ನಟಿ ಹುಮೈರಾ ಅಸ್ಘರ್ ಅಲಿ ಸಾವು ಪ್ರಕರಣ ಬಯಲಾಗಿದ್ದೇ ರೋಚಕ. ಕರಾಚಿಯ ಡಿಫೆನ್ಸ್‌ ಹೌಸಿಂಗ್‌ ಅಥಾರಟಿ (Defence Housing Authority)ಯ ಫೇಸ್‌ VIರ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ನಟಿ ಹುಮೈರಾ ಕಳೆದ ಹಲವು ತಿಂಗಳುಗಳಿಂದ ಫ್ಲಾಟ್ ಬಾಡಿಗೆ ನೀಡಿರಲಿಲ್ಲ. ಈ ಕುರಿತು ಮನೆ ಮಾಲೀಕರು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಕ್ಕಿರಲಿಲ್ಲ. ಹೀಗಾಗಿ ಮನೆ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ಹುಮೈರಾ ಹಲವು ಸಮಯಗಳಿಂದ ಬಾಡಿಗೆ ಪಾವತಿಸಿರಲಿಲ್ಲ. ಇದರಿಂದ ಬೇಸತ್ತು ಮಾಲಕ ಫ್ಲ್ಯಾಟ್‌ ಖಾಲಿ ಮಾಡಿಸುಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯವು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡುವಂತೆ ಗಿಜ್ರಿ ಪೊಲೀಸರಿಗೆ ಸೂಚಿಸಿತು.

ಅದರಂತೆ ಅಧಿಕಾರಿಗಳು ಜು. 8ರ ಅಪರಾಹ್ನ 3:15ರ ಸುಮಾರಿಗೆ ಫ್ಲ್ಯಾಟ್‌ಗೆ ಆಗಮಿಸಿದ್ದರು. ಈ ವೇಳೆ ಫ್ಲ್ಯಾಟ್‌ಗೆ ಬೀಗ ಹಾಕಲಾಗಿತ್ತು. ಫ್ಲ್ಯಾಟ್‌ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಪೊಲೀಸರು ಬೀಗ ಒಡೆದು ಒಳ ಪ್ರವೇಶಿಸಿದರು. ಈ ವೇಳೆ ನಟಿಯ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಯಾವುದೇ ದುಷ್ಕೃತ್ಯ ನಡೆದ ಲಕ್ಷಣಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಫೊರೆನ್ಸಿಕ್‌ ತಜ್ಞರು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಹುಮೈರಾ ಅವರ ದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ (Jinnah Postgraduate Medical Centre) ಕೊಂಡೊಯ್ಯಲಾಗಿದೆ. ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಇದಕ್ಕಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Pakistani Actress Humaira Asghar
Shocking: ಹೆಂಡತಿ ಕಾಟಕ್ಕೆ ಬೇಸತ್ತು 4ನೇ ಅಂತಸ್ತಿನಿಂದ ಕೆಳಗೆ ಹಾರಿದ ಪತಿ, ದುರಂತ ಸಾವು.. Video Viral!

ಶವ ಸ್ವೀಕರಿಸಲು ಕುಟುಂಬ ನಿರಾಕರಣೆ

ಇನ್ನು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಹಸ್ತಾಂತರಿಸಲು ನಟಿ ಕುಟುಂಬಸ್ಥರನ್ನು ಪೊಲೀಸರು ಸಂಪರ್ಕಿಸಿದ್ದು ಈ ವೇಳೆ ಕುಟುಂಬಸ್ಥರು ಶವ ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ನಟಿ ಹುಮೈರಾ ಬಹಳ ವರ್ಷಗಳ ಹಿಂದೆಯೇ ತಮ್ಮ ಸಂಬಂಧ ಕಡಿದುಕೊಂಡು ಹೋಗಿದ್ದಾರೆ. ಹೀಗಾಗಿ ಅವರ ಶವ ನಮಗೆ ಬೇಡ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಪೊಲೀಸರು ಅವರ ಮನವೊಲಿಸುಲ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com