Horrific: 280 ಜನರಿದ್ದ ಬೋಟ್ ನಲ್ಲಿ ಭೀಕರ ಅಗ್ನಿ ಅವಘಡ; ಜೀವ ಉಳಿಸಿಕೊಳ್ಳಲು ನೀರಿಗೆ ಹಾರಿದ ಪ್ರಯಾಣಿಕರು! video

ಇಂಡೋನೇಷ್ಯಾದ ಪ್ರಯಾಣಿಕರ ದೋಣಿ KM ಬಾರ್ಸಿಲೋನಾ VA ಹಡಗಿನಲ್ಲಿ ಭಾನುವಾರ ಅಗ್ನಿ ದುರಂತ ಸಂಭವಿಸಿದೆ.
massive fire engulfs ferry in Indonesia
ಇಂಡೋನೇಷ್ಯಾ ಹಡಗು ದುರಂತ
Updated on

ಕೌಲಾಲಂಪುರ: ಇಂಡೋನೇಷ್ಯಾದ ಭೀಕರ ಹಡಗು ದುರಂತ ಸಂಭವಿಸಿದ್ದು, 280 ಮಂದಿ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ.

ಇಂಡೋನೇಷ್ಯಾದ ಪ್ರಯಾಣಿಕರ ದೋಣಿ KM ಬಾರ್ಸಿಲೋನಾ VA ಹಡಗಿನಲ್ಲಿ ಭಾನುವಾರ ಅಗ್ನಿ ದುರಂತ ಸಂಭವಿಸಿದೆ. ಇಂದು ಮಧ್ಯಾಹ್ನ ಉತ್ತರ ಸುಲವೇಸಿ ಪ್ರಾಂತ್ಯದ ತಾಲಿಸ್ ದ್ವೀಪದ ಬಳಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.

ಬೆಂಕಿಯ ಕೆನ್ನಲಾಗಿ ವ್ಯಾಪಕವಾಗುತ್ತಿದ್ದಂತೆಯೇ ಆತಂಕಗೊಂಡ ಪ್ರಯಾಣಿಕರು ಹಡಗಿನಿಂದ ನೀರಿಗೆ ಹಾರುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಪ್ರಯಾಣಿಕರು ಆತಂಕಗೊಂಡು ಲೈಫ್ ಜಾಕೆಟ್‌ಗಳನ್ನು ಧರಿಸಿ, ಸಹಾಯಕ್ಕಾಗಿ ಕೂಗುತ್ತಾ, ದಟ್ಟವಾದ ಕಪ್ಪು ಹೊಗೆ ಮತ್ತು ಜ್ವಾಲೆಗಳ ನಡುವೆಯೇ ನೀರಿಗೆ ಹಾರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಮೂಲಗಳ ಪ್ರಕಾರ ಈ ಹಡಗಿನಲ್ಲಿ ಸುಮಾರು 280 ರಿಂದ 300 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬೆಂಕಿ ಕಾಣಿಸಿಕೊಂಡಾಗ ಹಡಗು ತಲೌಡ್ ದ್ವೀಪದಿಂದ ಮನಾಡೊ ನಗರಕ್ಕೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

massive fire engulfs ferry in Indonesia
Horror: ರಾಂಗ್ ರೂಟ್ ನಲ್ಲಿ ಬಂದ ಕಾರುಚಾಲಕ; ಪ್ರಶ್ನಿಸಿದ ಹೋಮ್ ಗಾರ್ಡ್ ನ 5 ಕಿಮೀ ಎಳೆದೊಯ್ದ! Video

ರಕ್ಷಣಾ ಕಾರ್ಯಾಚರಣೆ

ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ, ನೌಕಾಪಡೆ, ಕರಾವಳಿ ಕಾವಲು ಪಡೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳೀಯ ಮೀನುಗಾರರ ಜೊತೆಗೆ, ಹಡಗಿನಲ್ಲಿರುವವರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಶೋಧ ಮತ್ತು ರಕ್ಷಣಾ ಪ್ರಯತ್ನಗಳನ್ನು ಸಂಘಟಿಸಲು ಲಿಕುಪಾಂಗ್ ಬಂದರಿನಲ್ಲಿ ಕಮಾಂಡ್ ಪೋಸ್ಟ್ ಅನ್ನು ಸ್ಥಾಪಿಸಲಾಗಿದೆ. ಈ ವರೆಗೂ ಸುಮಾರು 150 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪ್ರಾಂತೀಯ ಶೋಧ ಮತ್ತು ರಕ್ಷಣಾ ಕಚೇರಿಯ ಹಿರಿಯ ಅಧಿಕಾರಿ ವೆರಿ ಅರಿಯಂಟೊ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com