
ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಆಲ್ಟೋನಾ ಮೆಡೋಸ್‌ನಲ್ಲಿರುವ ಸೆಂಟ್ರಲ್ ಸ್ಕ್ವೇರ್ ಶಾಪಿಂಗ್ ಸೆಂಟರ್‌ನ ಹೊರಗೆ ಹದಿಹರೆಯದ ಗುಂಪೊಂದು 33 ವರ್ಷದ ಭಾರತೀಯ ವ್ಯಕ್ತಿಯ ಮೇಲೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.
ಜುಲೈ 19ರ ಶನಿವಾರ ಈ ಘಟನೆ ನಡೆದಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ದಾಳಿ ವೇಳೆ ಕೈ ತುಂಡಾಗಿದ್ದು, ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಮರು ಜೋಡಿಸಿರುವುದಾಗಿ ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.
ಸೌರಭ್ ಆನಂದ್ (33) ಹಲ್ಲೆಗೊಳಗಾದ ಭಾರತೀಯ ಪ್ರಜೆ. ಈತ ಜುಲೈ 19 ರಂದು ರಾತ್ರಿ 7-30 ರ ಸುಮಾರಿಗೆ ಔಷಧಿ ತೆಗೆದುಕೊಂಡು ಫೋನ್ ನಲ್ಲಿ ಸ್ನೇಹಿತನೊಂದಿಗೆ ಮಾತನಾಡಿಕೊಂಡು ಮನೆಗೆ ನಡೆದು ಹೋಗುತ್ತಿದ್ದಾಗ ಆತನನ್ನು ಸುತ್ತುವರೆದ ಐವರ ಗ್ಯಾಂಗ್ ದಾಳಿ ಮಾಡಿದೆ.
ಗ್ಯಾಂಗ್ ನಲ್ಲಿದ್ದ ಒಬ್ಬ ಸೌರಭ್ ನ ಜೇಬುಗಳನ್ನು ಪರಿಶೀಲಿಸಿದ್ದರೆ, ಮತ್ತೋರ್ವ ತಲೆಗೆ ಪದೇ ಪದೇ ಗುದಿದ್ದಾನೆ. ಮೂರನೇಯವ ಗಂಟಲಿಗೆ ಮಚ್ಚನ್ನು ಇಟ್ಟಿದ್ದಾನೆ. ಈ ವೇಳೆ ರಕ್ಷಿಸಿಕೊಳ್ಳಲು ಮುಂದಾದಾಗ ಮಣಿಕಟ್ಟಿಗೆ ಮಚ್ಚಿನಿಂದ ದಾಳಿ ನಡೆಸಲಾಗಿದೆ. ಎರಡನೇ ಬಾರಿಗೆ ಕೈಗೆ ಹೊಡೆಯಲಾಗಿದೆ. ಮೂರು ಬಾರಿ ಮಚ್ಚಿನಿಂದ ಹೊಡೆಯಲಾಗಿದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ದಿ ಏಜ್‌ಗೆ ತಿಳಿಸಿದ್ದಾರೆ.
ಬೆನ್ನು ಮತ್ತು ಭುಜಕ್ಕೂ ಹೊಡೆಯಲಾಗಿದೆ. ಬೆನ್ನು, ತೋಳು ಮೂಳೆ ಮುರಿದ್ದು, ತಲೆಗೂ ಗಾಯವಾಗಿದೆ ಎಂದು ಆನಂದ್ ಹೇಳಿದ್ದಾರೆ.
Advertisement