Cambodia-Thailand war: ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ; ಆದರೂ ಗಡಿಯಲ್ಲಿ ನಿಂತಿಲ್ಲ ಸಂಘರ್ಷ..!

ತಾತ್ವಿಕವಾಗಿ ಕದನ ವಿರಾಮ ಜಾರಿಗೆ ತರಲು ನಾವು ಒಪ್ಪಿಕೊಂಡಿದ್ದೇವೆ. ಆದರೆ, ಕಾಂಬೋಡಿಯಾ ಕಡೆಯಿಂದಲೂ ಪ್ರಾಮಾಣಿಕ ಪ್ರಯತ್ನವನ್ನು ಎದುರು ನೋಡುತ್ತಿದ್ದೇವೆ.
A Cambodian military convoy drives towards the border city of Samrong in Oddar Meanchey Province, Cambodia, on Saturday, July 26, 2025.
ಕಾಂಬೋಡಿಯಾದ ಒಡ್ಡಾರ್ ಮೀಂಚೆ ಪ್ರಾಂತ್ಯದ ಸಮ್ರಾಂಗ್ ಗಡಿ ನಗರದ ಕಡೆಗೆ ಕಾಂಬೋಡಿಯನ್ ಮಿಲಿಟರಿ ಪಡೆ ಸಾಗುತ್ತಿರುವುದು.
Updated on

ಸುರಿನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ನಂತರ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ ಅವರು, ನಮ್ಮ ದೇಶವು "ತಕ್ಷಣದ ಮತ್ತು ಬೇಷರತ್ತ್ ಕದನ ವಿರಾಮ ಅನುಸರಿಸಲು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ಇದು ಎರಡೂ ದೇಶಗಳ ಸೈನಿಕರು ಮತ್ತು ಜನರಿಗೆ ಸಕಾರಾತ್ಮಕ ಸುದ್ದಿಯಾಗಿದೆ ಎಂದು ಹನ್ ಮಾನೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮುಂದಿನ ಮಾತುಕತೆಗಳನ್ನು ನಡೆಸಲು ಮತ್ತು ಕದನ ವಿರಾಮವನ್ನು ಜಾರಿಗೆ ತರಲು ಥೈಲ್ಯಾಂಡ್ ವಿದೇಶಾಂಗ ಸಚಿವರೊಂದಿಗೆ ನೇರವಾಗಿ ಮಾತುಕತೆ ನಡೆಸುವಂತೆ ಉಪ ವಿದೇಶಾಂಗ ಸಚಿವ ಪ್ರಾಕ್ ಸೊಖೋನ್ ಅವರನ್ನು ನಿಯೋಜಿಸಿರುವುದಾಗಿ ಅವರು ಹೇಳಿದ್ದಾರೆ.

ಥಾಯ್ಲೆಂಡ್‌ನ ಹಂಗಾಮಿ ಪ್ರಧಾನಿ ಫುಮ್ಥಮ್ ವೆಚಾಯಾಚೈ ಅವರು ಪ್ರತಿಕ್ರಿಯಿಸಿ, ತಾತ್ವಿಕವಾಗಿ ಕದನ ವಿರಾಮ ಜಾರಿಗೆ ತರಲು ನಾವು ಒಪ್ಪಿಕೊಂಡಿದ್ದೇವೆ. ಆದರೆ, ಕಾಂಬೋಡಿಯಾ ಕಡೆಯಿಂದಲೂ ಪ್ರಾಮಾಣಿಕ ಪ್ರಯತ್ನವನ್ನು ಎದುರು ನೋಡುತ್ತಿದ್ದೇವೆ. ಕದನ ವಿರಾಮ ಜಾರಿಗೆ ಕಾರಣರಾದ ಡೊನಾಲ್ಡ್‌ ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆಂದು ಹೇಳಿದ್ದಾರೆ.

A Cambodian military convoy drives towards the border city of Samrong in Oddar Meanchey Province, Cambodia, on Saturday, July 26, 2025.
Thailand vs Cambodia war: ಭಾರತ-ಪಾಕ್ ಸಂಘರ್ಷಕ್ಕೆ ಹೋಲಿಸಿದ ಟ್ರಂಪ್; ಯುದ್ಧ ನಿಲ್ಲಿಸದಿದ್ರೆ ವ್ಯಾಪಾರ ಬಂದ್; ಅಮೆರಿಕಾ ಬೆದರಿಕೆ

ಗಡಿಯಲ್ಲಿ ನೆಲಬಾಂಬ್ ಸ್ಫೋಟಗೊಂಡು ಥಾಯ್ಲೆಂಡ್‌ನ ಐವರು ಸೈನಿಕರು ಗಾಯಗೊಂಡಿದ್ದರು. ಈ ಘಟನೆ ಬಳಿಕ ಗಡಿಯಲ್ಲಿ ಸಂಘರ್ಷ ಭುಗಿಲೆದ್ದಿತ್ತು. ಘರ್ಷಣೆ ಆರಂಭ ಕುರಿತು ಉಭಯ ರಾಷ್ಟ್ರಗಳು ಒಬ್ಬರನ್ನೊಬ್ಬರು ದೂಷಿಸಲು ಪ್ರಾರಂಭಿಸಿತು.

ಎರಡೂ ದೇಶಗಳು ತಮ್ಮ ರಾಯಭಾರಿಗಳನ್ನು ನೆನಪಿಸಿಕೊಂಡವು ಮತ್ತು ಥೈಲ್ಯಾಂಡ್ ಕಾಂಬೋಡಿಯಾದೊಂದಿಗಿನ ತನ್ನ ಗಡಿ ದಾಟುವಿಕೆಗಳನ್ನು ಮುಚ್ಚಿತು. ಬಳಿಕ ಉಭಯ ರಾಷ್ಟ್ರಗಳು ತಮ್ಮ ತಮ್ಮ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿತು. ಬಳಿಕ ಕಾಂಬೋಡಿಯಾದೊಂದಿಗೆ ಹಂಚಿಕೊಂಡಿದ್ದ ಈಶಾನ್ಯ ಗಡಿಯನ್ನು ಥಾಯ್ಲೆಂಡ್‌ ಬಂದ್ ಮಾಡಿತು.

ಇದರೊಂದಿಗೆ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ಎರಡು ದೇಶಗಳ ನಡುವಿನ ಕ್ಷಿಪಣಿ ದಾಳಿಯಲ್ಲಿ 33 ಜನರು ಮೃತಪಟ್ಟಿದ್ದಾರೆ. 1.68 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಗೆ ನೀಡಿದ ಬಳಿಕವು ವಿವಾದಿತ ಗಡಿಯ ಕೆಲವು ಭಾಗಗಳಲ್ಲಿ ಭಾನುವಾರವೂ ಹೋರಾಟ ಮುಂದುವರೆದಿದೆ ಎಂದು ತಿಳಿದುಬಂದಿದೆ. ಶೆಲ್ ದಾಳಿ ಮತ್ತು ಸೇನಾ ಪಡೆಗಳ ಚಲನೆಗಳ ಕುರಿತು ಎರಡೂ ರಾಷ್ಟ್ರಗಳಿಂದ ಆರೋಪಗಳು ಕೇಳಿ ಬರುತ್ತಿವೆ.

ಥಾಯ್ ಸೇನಾ ಉಪ ವಕ್ತಾರರಾದ ಕರ್ನಲ್ ರಿಚಾ ಸುಕ್ಸೊವಾನೊಂಟ್ ಅವರು ಮಾತನಾಡಿ, ಕಾಂಬೋಡಿಯಾದ ಸೇನಾಪಡೆಗಳು ಭಾನುವಾರ ಮುಂಜಾನೆ ನಾಗರಿಕರ ಮನೆಗಳು ಸೇರಿದಂತೆ ಥಾಯ್ ಪ್ರದೇಶದ ಮೇಲೆ ಮೊದಲು ಗುಂಡು ಹಾರಿಸಿದವು ಎಂದು ಹೇಳಿದ್ದಾರೆ.

A Cambodian military convoy drives towards the border city of Samrong in Oddar Meanchey Province, Cambodia, on Saturday, July 26, 2025.
Thailand vs Cambodia ಗಡಿ ಸಂಘರ್ಷ ಉಲ್ಬಣ: ಥಾಯ್ಲೆಂಡ್‌ ಪ್ರವಾಸ ಸದ್ಯಕ್ಕೆ ಬೇಡ; ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸೂಚನೆ!

ದೇಶಗಳು ಹಕ್ಕು ಸಾಧಿಸಿದ ಪ್ರಾಚೀನ ತಾ ಮುಯೆನ್ ಥಾಮ್ ದೇವಾಲಯ ಮತ್ತು ಇತರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಕಾಂಬೋಡಿಯಾ ರಾಕೆಟ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಕಾಂಬೋಡಿಯನ್ ಫಿರಂಗಿ ಮತ್ತು ರಾಕೆಟ್ ಲಾಂಚರ್‌ಗಳಿಗೆ ನಮ್ಮ ಸೇನಾಪಡೆ ಪ್ರತಿಕ್ರಿಯೆ ನೀಡಿದೆ ಎಂದು ತಿಳಿಸಿದ್ದಾರೆ.

ಕಾಂಬೋಡಿಯನ್ ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಜನರಲ್ ಮಾಲಿ ಸೋಚಿಯಾಟಾ ಅವರು ಮಾತನಾಡಿ, ಥೈಲ್ಯಾಂಡ್ ಸೇನಾಪಡೆಗಳು ಹಿಂಸಾಚಾರವನ್ನು ಹೆಚ್ಚಿಸುತ್ತಿದ್ದು, ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ನಿಷೇಧಿಸಲಾದ ಶಸ್ತ್ರಾಸ್ತ್ರಗಳಾದ ಕ್ಲಸ್ಟರ್ ಬಾಂಬ್‌ಗಳ ಬಳಕೆಯನ್ನು ಹೆಚ್ಚಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಥಾಯ್ ಪಡೆಗಳು ವಿವೇಚನಾರಹಿತ ದಾಳಿಗಳನ್ನು ನಡೆಸಿವೆ, ಇದರ ಪರಿಣಾಮವಾಗಿ ಜೀವಹಾನಿ ಮತ್ತು ನಾಗರಿಕ ಮೂಲಸೌಕರ್ಯ ನಾಶವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com