Thailand vs Cambodia war: ಭಾರತ-ಪಾಕ್ ಸಂಘರ್ಷಕ್ಕೆ ಹೋಲಿಸಿದ ಟ್ರಂಪ್; ಯುದ್ಧ ನಿಲ್ಲಿಸದಿದ್ರೆ ವ್ಯಾಪಾರ ಬಂದ್; ಅಮೆರಿಕಾ ಬೆದರಿಕೆ

ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ, ಅದನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಇಲ್ಲಿ ಕೂಡ ಶಾಂತಿಯನ್ನು ಸ್ಥಾಪಿಸಬಹುದು.
Donald trump
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ಯುನೈಟೆಡ್ ಕಿಂಗ್ಡಮ್: ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಗಡಿ ಸಂಘರ್ಷವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಹೋಲಿಕೆ ಮಾಡಿದ್ದು, ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.

ಸ್ಕಾಟ್ಲೆಂಡ್‌ಗೆ ಭೇಟಿ ನೀಡುತ್ತಿರುವ ಟ್ರಂಪ್ ಅವರು, ಈ ನಡುವೆ ಸಾಮಾಜಿಕ ಜಾಲತಾಣ ಟ್ರೂತ್'ನಲ್ಲಿ ಪೋಸ್ಟ್‌ ಮಾಡಿ, ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಗಡಿ ಸಂಘರ್ಷ ಕುರಿತು ಮಾತನಾಡಿದ್ದಾರೆ.

ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ, ಅದನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಇಲ್ಲಿ ಕೂಡ ಶಾಂತಿಯನ್ನು ಸ್ಥಾಪಿಸಬಹುದು ಎಂದು ಹೇಳಿದ್ದಾರೆ.

ಈ ಬೆದರಿಕೆಯಿಂದ ಎರಡೂ ದೇಶಗಳು ಶಾಂತಿ ಮಾತುಕತೆಗೆ ಒಲವು ತೋರುವ ಸಾಧ್ಯತೆಯಿದೆ. ಮುಂದಿನ ಬೆಳವಣಿಗೆಗಳಿಗಾಗಿ ಕಾಯುತ್ತೇವೆ ಎಂದು ತಿಳಿಸಿದ್ದಾರೆ.

ಕಾಂಬೋಡಿಯಾ ಮತ್ತು ಥೈಲ್ಯಾಂಡ್ ರಾಷ್ಟ್ರಗಳ ನಾಯಕರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದು, ತಕ್ಷಣವೇ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿದೆ.

Donald trump
Thailand vs Cambodia war: ಬೌದ್ಧ ರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ Hindu Temple ಕಾರಣ?

ಥೈಲ್ಯಾಂಡ್ ಜೊತೆಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಕಾಂಬೋಡಿಯಾದ ಪ್ರಧಾನಿಯೊಂದಿಗೆ ಮಾತನಾಡಿದ್ದೇನೆ. ನಮ್ಮ ನಡುವಿನ ಮಾತುಕತೆ ಉತ್ತಮವಾಗಿತ್ತು. ಕಾಂಬೋಡಿಯಾದಂತೆಯೇ ಥೈಲ್ಯಾಂಡ್ ಕೂಡ ತಕ್ಷಣದ ಕದನ ವಿರಾಮ ಮತ್ತು ಶಾಂತಿಯನ್ನು ಬಯಸುತ್ತದೆ ಎಂಬು ಭಾವಿಸುತ್ತೇನೆ. ಮಾತುಕತೆ ನಡೆಸಲಾಗಿದ್ದು, ಕದನ ವಿರಾಮ, ಶಾಂತಿ ಸ್ಥಾಪನೆಯನ್ನು ಶೀಘ್ರದಲ್ಲೇ ನೋಡುವ ವಿಶ್ವಾಸವಿದೆ ಎಂದಿದ್ದಾರೆ.

ಇದೇ ವೇಳೆ ಉಭಯ ರಾಷ್ಟ್ರಗಳು ಯುದ್ಧ ನಿಲ್ಲಿಸದಿದ್ದರೆ, ಎರಡೂ ರಾಷ್ಟ್ರಗಳೊಂದಿಗಿನ ಯಾವುದೇ ವ್ಯಾಪಾರ ಒಪ್ಪಂದಗಳ ಮಾಡಿಕೊಳ್ಳುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.

ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ತೀವ್ರ ಸೇನಾ ಸಂಘರ್ಷ ಆರಂಭವಾಗಿದ್ದು, ಕಾಂಬೋಡಿಯಾ ಮೇಲೆ ಥಾಯ್ಲೆಂಡ್ ವಾಯುದಾಳಿ ನಡೆಸುತ್ತಿದೆ.

Donald trump
Watch | ಥೈಲ್ಯಾಂಡ್-ಕಾಂಬೋಡಿಯಾ ನಡುವೆ ಗಡಿಯಲ್ಲಿ ಭಾರೀ ಹೋರಾಟ ಆರಂಭ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com