
ನ್ಯೂಯಾರ್ಕ್: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರರ ಶಿಬಿರಗಳು ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದ ಉಗ್ರರ ಅಂತ್ಯಕ್ರಿಯೆಯ ನೇತೃತ್ವ ವಹಿಸಿದ್ದ ಹಫೀಜ್ ಅಬ್ದುರ್ ರೌಫ್ ಭಯೋತ್ಪಾದಕನಲ್ಲ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಸಮರ್ಥಿಸಿಕೊಂಡಿದ್ದಾರೆ.
ಹಫೀಜ್ ಅಬ್ದುರ್ ರೌಫ್ ಉಗ್ರನಲ್ಲ:
ವಿಶ್ವಸಂಸ್ಥೆಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿಲಾವಾಲ್, ಪಾಕಿಸ್ತಾನದ ಮಿಲಿಟರಿ ಮಾಧ್ಯಮ ವಿಭಾಗ, ISPR (ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್) ಈ ಹಿಂದೆ ಹೇಳಿದಂತೆ ಜಾಗತಿಕ ಉಗ್ರನೆಂದು ಘೋಷಿಸಲ್ಪಟ ವ್ಯಕ್ತಿಯಂತೆ ಇತನ ಹೆಸರು ಇದೆ. ಆದರೆ ಆತ ಭಯೋತ್ಪಾದನಲ್ಲ ಎಂದು ವಾದಿಸಿದರು.
ಅಂತ್ಯಕ್ರಿಯೆ ವೇಳೆಯಲ್ಲಿದ್ದ ರೌಫ್ ಫೋಟೋವನ್ನು ಭಾರತ ಸಾಕ್ಷ್ಯವನ್ನು ಬಳಸುತ್ತಿರುವುದನ್ನು ಉಲ್ಲೇಖಿಸಿದ ಬಿಲಾವಾಲ್, ಭಾರತದ ಸರ್ವ ಪಕ್ಷ ನಿಯೋಗ ಎಲ್ಲೆಡೆ ರೌಫ್ ಪೋಟೋವನ್ನು ತೋರಿಸಿ, ಉಗ್ರ ಎಂದು ಹೇಳುತ್ತಿದೆ. ವಾಸ್ತವವಾಗಿ ಈತ ಭಯೋತ್ಪಾದಕ ನಲ್ಲ. ಜಾಗತಿಕ ಉಗ್ರನೆಂದು ಘೋಷಿಸಲ್ಪಟ ವ್ಯಕ್ತಿಯಂತೆ ಇತನ ಹೆಸರು ಇದೆ ಎಂದು ಹೇಳಿದರು.
ಬಿಲಾವಾಲ್ ಹೇಳಿಕೆಗೂ ISPR ನ ಸಾಕ್ಷ್ಯಗಳಿಗೂ ಭಿನ್ನತೆ:
ಆದಾಗ್ಯೂ, ISPR ನ ಸ್ವಂತ ಸಾಕ್ಷ್ಯಗಳೇ ಈ ಹೇಳಿಕೆಗೆ ವಿರುದ್ಧವಾಗಿವೆ. ISPR ಹಂಚಿಕೊಂಡ CNIC (ಗಣಕೀಕೃತ ರಾಷ್ಟ್ರೀಯ ಗುರುತಿನ ಚೀಟಿ) ಜನ್ಮ ದಿನಾಂಕ ಮತ್ತು ಗುರುತಿನ ಸಂಖ್ಯೆಯು US ಖಜಾನೆ ಇಲಾಖೆಯ ವಿದೇಶಿ ಆಸ್ತಿಗಳ ನಿಯಂತ್ರಣ ಕಚೇರಿ (OFAC) ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ನಿಖರವಾಗಿ ಹೊಂದಿಕೆಯಾಗುತ್ತದೆ.
2018 ರ ಏಪ್ರಿಲ್ 2 ರಂದು ಭಯೋತ್ಪಾದಕ ಗುಂಪು ಲಷ್ಕರ್-ಎ-ತೋಯ್ಬಾದ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (PMML) ನೊಂದಿಗೆ ರೌಫ್ ನಂಟು ಹೊಂದಿದ್ದಾರೆ ಎಂಬುದನ್ನುCNIC ಕೂಡಾ ದೃಢಪಡಿಸಿದೆ.
ಸಾಕ್ಷ್ಯಾಧಾರಗಳ ಹೊರತಾಗಿಯೂ, ರೌಫ್ ಉಗ್ರನಲ್ಲಾ. ಸ್ಥಳೀಯ ಧರ್ಮ ಗುರು. ಕುಟುಂಬ ಹೊಂದಿರುವ ವ್ಯಕ್ತಿ ಎಂದು ಬಿಲಾವಲ್ ಸಮರ್ಥಿಸಿಕೊಂಡರು. ಭಯೋತ್ಪಾದನೆ ನಿಗ್ರಹಕ್ಕೆ ಈಗಲೂ ಭಾರತಕ್ಕೆ ಸಹಕಾರವನ್ನು ಪಾಕಿಸ್ತಾನ ನೀಡಲಿದೆ. ಒಂದು ವೇಳೆ ISI ಹಾಗೂ RAW ಒಟ್ಟಿಗೆ ಕುಳಿತು ಚರ್ಚಿಸಿ ಕಾರ್ಯ ನಿರ್ವಹಿಸಿದರೆ ಉಭಯ ದೇಶಗಳಲ್ಲಿ ಭಯೋತ್ಪಾದನೆಯನ್ನು ತೊಡೆದು ಹಾಕಬಹುದು ಎಂದು ಸಲಹೆ ನೀಡಿದರು.
ಪರಮಾಣು ರಾಷ್ಟ್ರಗಳ ಸಂಭಾವ್ಯ ಯುದ್ಧದ ಬೆದರಿಕೆ: ಭಯೋತ್ಪಾದಕ ಕ್ರಿಯೆಗಳಿಂದ ಪ್ರಚೋದಿಸಲ್ಪಟ್ಟ ಪರಮಾಣು ರಾಷ್ಟ್ರಗಳ ನಡುವಿನ ಸಂಭಾವ್ಯ ಯುದ್ಧದ ಅಪಾಯದಿಂದ ದಕ್ಷಿಣ ಏಷ್ಯಾದ 1.5 ರಿಂದ 1.7 ಶತಕೋಟಿ ಜನರ ಪ್ರಾಣಕ್ಕೆ ಕಂಟಕವಾಗಲು ಬಿಡಬಾರದು ಎಂದರು.
ಭಯೋತ್ಪಾದನೆ ನಿಗ್ರಹದ ಕಲೆ ಕರಗತ: ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನಿ ಸಮುದಾಯದ ಜೊತೆಗಿನ ಸಂವಾದದ ವೇಳೆ ಭುಟ್ಟೊ ಪ್ರಚೋದನಕಾರಿ ಹೇಳಿಕೆಯೊಂದನ್ನು ನೀಡಿದ್ದು, ಪಾಕಿಸ್ತಾನವು ಭಯೋತ್ಪಾದನೆ ನಿಗ್ರಹದ ಕಲೆಯನ್ನು ಕರಗತ ಮಾಡಿಕೊಂಡಿದೆ ಎಂದು ಪ್ರತಿಪಾದಿಸಿದರು.
ISIನಿಂದ ಭಾರತ ಪಾಠ ಕಲಿಯಬೇಕು: ಭಾರತವು ನಿಜವಾಗಿಯೂ ಭಯೋತ್ಪಾದನೆಯನ್ನು ಎದುರಿಸಲು ಬಯಸಿದರೆ, ಅದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನಿಂದ ಪಾಠ ಕಲಿಯಬೇಕು. "ನಾವು ಭಯೋತ್ಪಾದನೆಯನ್ನು ಹೇಗೆ ಎದುರಿಸಬೇಕೆಂದು ಕಲಿತಿದ್ದೇವೆ. ನಾವು ಪರಿಣಿತರು. ಭಾರತವು ಭಯೋತ್ಪಾದನೆ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ISI ನಿಂದ ಕಲಿಯಬೇಕು" ಎಂದು ಭುಟ್ಟೋ ಹೇಳಿದರು.
Advertisement