ಸೇನಾ ದಿನಾಚರಣೆಗೆ ಪಾಕ್ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಗೆ ಅಮೆರಿಕಾ ಆಹ್ವಾನ: ಯಾರ ವಿರುದ್ಧ ಟ್ರಂಪ್ ಒಳಸಂಚು?

ಭಾರತದ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ಎದುರಿಸಲು ಪಾಕಿಸ್ತಾನಕ್ಕೆ ಒತ್ತಡ ಹೇರಲು ಅಮೆರಿಕ ಈ ಉನ್ನತ ಮಟ್ಟದ ಮಿಲಿಟರಿ ಕಾರ್ಯಕ್ರಮವನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ.
 Asim Munir
ಅಸಿಮ್ ಮುನೀರ್
Updated on

ವಾಷಿಂಗ್ಟನ್: ಅಮೆರಿಕ ಸೇನೆಯ 250ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಭಾಗವಹಿಸಲು ಅಮೆರಿಕದಿಂದ ಆಹ್ವಾನ ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ (COAS) ಜನರಲ್ ಸೈಯದ್ ಅಸಿಮ್ ಮುನೀರ್ ಜೂನ್ 12 ರಂದು ವಾಷಿಂಗ್ಟನ್, ಡಿಸಿಗೆ ಭೇಟಿ ನೀಡಲಿದ್ದಾರೆ.

ಆಪರೇಷನ್ ಸಿಂದೂರ್ ನಲ್ಲಿ ಹೀನಾಯ ಸೋಲನುಭವಿಸಿದ ಪಾಕಿಸ್ತಾನಿ ಸೇನಾ ಫೀಲ್ಡ್ ಮಾರ್ಷಲ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಅಮೆರಿಕದಲ್ಲಿ ನಡೆಯುವ ಸೇನಾ ದಿನಾಚರಣೆ ಜೊತೆಗೆ ಡೊನಾಲ್ಡ್ ಟ್ರಂಪ್ ಹುಟ್ಟು ಹಬ್ಬ ಆಚರಣೆಯಲ್ಲಿಯೂ ಭಾಗವಹಿಸುವ ಸಾಧ್ಯತೆಯಿದೆ.

ಭಾರತದ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ಎದುರಿಸಲು ಪಾಕಿಸ್ತಾನಕ್ಕೆ ಒತ್ತಡ ಹೇರಲು ಅಮೆರಿಕ ಈ ಉನ್ನತ ಮಟ್ಟದ ಮಿಲಿಟರಿ ಕಾರ್ಯಕ್ರಮವನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ಪಾಕಿಸ್ತಾನದಲ್ಲಿ ಈ ಆಹ್ವಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ, ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸೇನಾ ಮುಖ್ಯಸ್ಥರ ಅಮೆರಿಕ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸಲು ಯೋಜಿಸುತ್ತಿದೆ.

ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರು ಅಭಿವೃದ್ಧಿ ಹೊಂದುತ್ತಿರುವ ಬಗ್ಗೆಯೂ ಈ ಭೇಟಿಯ ಸಮಯದಲ್ಲಿ ಚರ್ಚಿಸಬಹುದು ಎಂದು ವರದಿ ಹೇಳಿದೆ. ಅಫ್ಘಾನಿಸ್ತಾನ ಮತ್ತು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

 Asim Munir
Operation Sindoor ನಿಂದ ಕಂಗೆಟ್ಟ ಪಾಕಿಸ್ತಾನ: ದಿವಾಳಿ ಅಂಚಿನಲ್ಲಿದ್ದರೂ ರಕ್ಷಣಾ ಬಜೆಟ್ ಶೇ.20 ರಷ್ಟು ಏರಿಕೆ, ಉಳಿದೆಲ್ಲಾ ಖರ್ಚುಗಳಿಗೆ ಕತ್ತರಿ!

ಪಾಕಿಸ್ತಾನವು ಚೀನಾದೊಂದಿಗೆ ಹೊಂದಿರುವ ನಿಕಟ ಸಂಬಂಧಗಳಿಂದಾಗಿ ಅಮೆರಿಕ ಈ ಆಹ್ವಾನವನ್ನು ನೀಡಿದೆ, ವಾಷಿಂಗ್ಟನ್ ಇದನ್ನು ವ್ಯಾಪಾರದಲ್ಲಿ ಮಾತ್ರವಲ್ಲದೆ ಆರ್ಥಿಕ, ತಾಂತ್ರಿಕ, ಮಿಲಿಟರಿ ಮತ್ತು ಭೌಗೋಳಿಕ ರಾಜಕೀಯ ಕ್ಷೇತ್ರಗಳಲ್ಲಿಯೂ ತನ್ನ ಪ್ರತಿಸ್ಪರ್ಧಿ ಎಂದು ಪರಿಗಣಿಸುತ್ತದೆ.

ಪಾಕಿಸ್ತಾನವು ಚೀನಾದೊಂದಿಗೆ ಹೊಂದಿರುವ ನಿಕಟ ಸಂಬಂಧ ಭಾರತಕ್ಕೆ ಮಾತ್ರವಲ್ಲದೆ ಅಮೆರಿಕಕ್ಕೂ ಕಳವಳಕ್ಕೆ ಕಾರಣವಾಗಿದೆ. ಎರಡೂ ದೇಶಗಳ ನಡುವೆ ಆಳವಾಗುತ್ತಿರುವ ಮಿಲಿಟರಿ, ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರವು ದಕ್ಷಿಣ ಏಷ್ಯಾ ಮತ್ತು ಅದರಾಚೆಗಿನ ಶಕ್ತಿ ಮತ್ತು ಸ್ಥಿರತೆಯ ಸಮತೋಲನದ ಮೇಲೆ ಪರಿಣಾಮ ಬೀರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com