
ಫ್ಲೋರಿಡಾ: ವ್ಯಕ್ತಿಯೋರ್ವ ಸುಮಾರು 9ಲಕ್ಷ ರೂ ಮೌಲ್ಯ ಮಾಂಸ ಉತ್ಪನ್ನಗಳ ಮೇಲೆ ಮೂತ್ರವಿಸರ್ಜನೆ ಮಾಡಿದ ಆರೋಪದ ಮೇರೆಗೆ ಬಂಧನಕ್ಕೀಡಾಗಿದ್ದಾನೆ.
ಅಮೆರಿಕದ ಫ್ಲೋರಿಡಾದಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ರೂ. 9 ಲಕ್ಷ ಮೌಲ್ಯದ ($10,500) ಮಾಂಸ ಉತ್ಪನ್ನಗಳ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಬಂಧಿಸಲಾಗಿದೆ.
ಒರ್ಲ್ಯಾಂಡೊ ಪ್ರದೇಶದ ಪಟ್ಟಣದ ಲೇಡಿ ಲೇಕ್‌ನಲ್ಲಿರುವ ಸ್ಯಾಮ್ಸ್ ಕ್ಲಬ್‌ನ ಹಜಾರ 18 ರಲ್ಲಿ ಈ ಘಟನೆ ನಡೆದಿದೆ. 70 ವರ್ಷ ವಯಸ್ಸಿನ ಪ್ಯಾಟ್ರಿಕ್ ಫ್ರಾನ್ಸಿಸ್ ಮಿಚೆಲ್ ಎಂಬಾತ ಸುಮಾರು ಸ್ಪ್ಯಾಮ್ ಮತ್ತು ವಿಯೆನ್ನಾ ಸಾಸೇಜ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಪ್ಯಾಟ್ರಿಕ್ ಫ್ರಾನ್ಸಿಸ್ ಮಿಚೆಲ್ 188 ಬೃಹತ್ ವಿಯೆನ್ನಾ ಸಾಸೇಜ್‌ಗಳನ್ನು ಮತ್ತು 345 ಯೂನಿಟ್ ಸ್ಪ್ಯಾಮ್ ಕ್ಲಾಸಿಕ್ ತಿನಿಸುಗಳನ್ನು ಮೂತ್ರ ವಿಸರ್ಜನೆ ಮಾಡಿ ಹಾಳು ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿ ಮಿಚೆಲ್ ಮಾಲ್ ಬಳಿ ವಿಶ್ರಾಂತಿ ಪಡೆಯುತ್ತಿದ್ದ. ಇದನ್ನು ಗಮನಿಸಿದ ವ್ಯಕ್ತಿ ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದು, ಕೂಡಲೇ ಸಿಬ್ಬಂದಿ ಅತನನ್ನು ಎಚ್ಚರಿಸಿದ್ದು, ಇದರಿಂದ ಆಕ್ರೋಶಕೊಂಡ ಮಿಚೆಲ್ ಮಾಲ್ ಒಳಗೇ ಹೋಗಿ ಮಾಸ ಉತ್ಪನ್ನಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಸಿಸಿಟಿವಿಯಲ್ಲಿ ವ್ಯಕ್ತಿಯ ದುಷ್ಕೃತ್ಯ ಸೆರೆಯಾಗಿದೆ ಎಂದು ಹೇಳಲಾಗಿದೆ.
ದುಷ್ಕೃತ್ಯ ಸ್ಪಷ್ಟವಾಗುತ್ತಿದ್ದಂತೆಯೇ ಪೀಡ್‌ಮಾಂಟ್‌ನಲ್ಲಿರುವ ಅವರ ಮನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರಸ್ತುತ ಲೇಕ್ ಕೌಂಟಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದುಷ್ಕೃತ್ಯದ ಅಪರಾಧ ಆರೋಪದಲ್ಲಿ ಮಿಚೆಲ್ ನಿರಪರಾಧಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿ ಅವರನ್ನು ಕ್ರಿಮಿನಲ್ ಡಿಫೆನ್ಸ್ ಅಟಾರ್ನಿ ಬಾಬಿ ರುಮಲ್ಲಾ ಪ್ರತಿನಿಧಿಸುತ್ತಿದ್ದಾರೆ.
Advertisement