'ಭಾಯಿಜಾನ್ ನಾನು ಜೈಶಂಕರ್ ಜೊತೆ ಮಾತನಾಡಬೇಕೇ?': ಕದನ ವಿರಾಮಕ್ಕೂ ಮುನ್ನ ನಡೆದಿದ್ದೇನು?; Pak ಉಪ ಪ್ರಧಾನಿ ಶಾಕಿಂಗ್ ಹೇಳಿಕೆ, Video!

ಭಾರತದ ಪ್ರತೀಕಾರದ ಆಪರೇಷನ್ ಸಿಂಧೂರ್ ದಾಳಿಗಳು ಪಾಕಿಸ್ತಾನವನ್ನು ದಿಗ್ಭ್ರಮೆಗೊಳಿಸಿತ್ತು ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆಯ ಹೊಸ ಕಥೆ ಬೆಳಕಿಗೆ ಬಂದಿತು.
Ishaq Dar
ಇಶಾಕ್ ದಾರ್
Updated on

ನವದೆಹಲಿ: ಭಾರತದ ಪ್ರತೀಕಾರದ ಆಪರೇಷನ್ ಸಿಂಧೂರ್ ದಾಳಿಗಳು ಪಾಕಿಸ್ತಾನವನ್ನು ದಿಗ್ಭ್ರಮೆಗೊಳಿಸಿತ್ತು ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆಯ ಹೊಸ ಕಥೆ ಬೆಳಕಿಗೆ ಬಂದಿತು.

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದ ಎರಡು ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ಮಾಡಿತು. ಅದರ ನಂತರ ಪಾಕಿಸ್ತಾನವು ಕದನ ವಿರಾಮಕ್ಕಾಗಿ ಭಾರತಕ್ಕೆ ಮನವಿ ಮಾಡಬೇಕಾಯಿತು. ಈ ದಾಳಿಯು ಪಾಕಿಸ್ತಾನವನ್ನು ಆಘಾತಗೊಳಿಸಿತು. ಆದರೆ ದಾಳಿಗಳನ್ನು ನಿಲ್ಲಿಸುವಂತೆ ಭಾರತೀಯ ವಿದೇಶಾಂಗ ಸಚಿವರನ್ನು ವಿನಂತಿಸುವಂತೆ ಸೌದಿ ಅರೇಬಿಯಾವನ್ನು ಕೇಳಬೇಕಾಯಿತು.

ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಪಾಕಿಸ್ತಾನ ಜಿಯೋ ಟಿವಿ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ, ಕಳೆದ ತಿಂಗಳು ರಾವಲ್ಪಿಂಡಿ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿರುವ ಪಾಕಿಸ್ತಾನದ ಎರಡು ಪ್ರಮುಖ ವಾಯುನೆಲೆಗಳ ಮೇಲೆ (ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ ಮತ್ತು ರಫಿಕಿ ವಾಯುನೆಲೆ ಎಂದೂ ಕರೆಯುತ್ತಾರೆ) ಭಾರತ ದಾಳಿ ಮಾಡಿದೆ ಎಂದು ಹೇಳಿದರು.

ದುರದೃಷ್ಟವಶಾತ್, ಭಾರತ ಮತ್ತೊಮ್ಮೆ ಬೆಳಗಿನ ಜಾವ 2:30ಕ್ಕೆ ಕ್ಷಿಪಣಿ ದಾಳಿ ನಡೆಸಿತು. ಅವರು ನೂರ್ ಖಾನ್ ವಾಯುನೆಲೆ ಮತ್ತು ರಫೀಕಿ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿತ್ತು. ಇದಾದ 45 ನಿಮಿಷಗಳಲ್ಲಿ ಸೌದಿ ರಾಜಕುಮಾರ ಫೈಸಲ್ ನನಗೆ ಕರೆ ಮಾಡಿದರು ಎಂದು ದಾರ್ ಹೇಳಿದರು.

Ishaq Dar
Israel-Iran ಯುದ್ಧ 8ನೇ ದಿನಕ್ಕೆ: ಇರಾನ್ ಬೆಂಬಲಕ್ಕೆ ನಿಂತ ರಷ್ಯಾ, ಸೇನಾ ಹಸ್ತಕ್ಷೇಪ ಮಾಡದಂತೆ ಅಮೆರಿಕಾಗೆ ಎಚ್ಚರಿಕೆ

ಮೇ 7 ಮತ್ತು 8 ರ ರಾತ್ರಿ, ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು. ಈ ಕಾರ್ಯಾಚರಣೆಯು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು. ಇದರ ನಂತರ ಎರಡೂ ಕಡೆಯಿಂದ ದಾಳಿಗಳು ಮತ್ತು ಪ್ರತಿದಾಳಿಗಳು ನಡೆದವು.

ಇದರ ನಂತರ ಮೇ 10ರ ಮಧ್ಯಾಹ್ನದವರೆಗೆ ಭಾರತವು ಪಾಕಿಸ್ತಾನದ ಅನೇಕ ಆಕ್ರಮಣಕಾರಿ ಮಿಲಿಟರಿ ಕ್ರಮಗಳಿಗೆ ಸೂಕ್ತ ಉತ್ತರವನ್ನು ನೀಡಿತು. ಇದರ ನಂತರ, ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಅವರು ಮಧ್ಯಾಹ್ನ 3:35ಕ್ಕೆ ತಮ್ಮ ಭಾರತೀಯ ಪ್ರತಿರೂಪ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರಿಗೆ ಕರೆ ಮಾಡಿ ಕದನ ವಿರಾಮವನ್ನು ಪ್ರಸ್ತಾಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com