
ಮಾಸ್ಕೋ: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಶುಕ್ರವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವಲ್ಲೇ ಇರಾನ್'ಗೆ ರಷ್ಯಾ ಬೆಂಬಲ ವ್ಯಕ್ತಪಡಿಸಿದೆ. ಅಲ್ಲದೆ, ಮಿಲಿಟರಿ ಹಸ್ತಕ್ಷೇಪದ ವಿರುದ್ಧ ಅಮೆರಿಕಾಕ್ಕೆ ಎಚ್ಚರಿಕೆಯನ್ನೂ ನೀಡಿದೆ.
ಇಸ್ರೇಲ್-ಇರಾನ್ ಸಮರಕ್ಕೆ ಅಮೆರಿಕಾ ಪ್ರವೇಶ ಖಚಿತವಾಗಿರುವ ಹಿನ್ನೆಲೆಯಲ್ಲಿ ರಷ್ಯಾ ಕೂಡ ಇದೀಗ ಎಂಟ್ರಿ ಕೊಡ್ಡಿದ್ದು, ಈ ಬೆಳವಣಿಗೆ ಮತ್ತೊಂದು ಸುತ್ತಿನ ಶೀತಲ ಸಮರಕ್ಕೆ ನಾಂದಿ ಹಾಡುವ ಆತಂತಕಕ್ಕೆ ಕಾರಣವಾಗಿದೆ.
ರಷ್ಯಾ ವಿದೇಶಾಂಗ ಇಲಾಖೆ ವಕ್ತಾರೆ ಮಾರಿಯಾ ಜಖರೋವಾ ಅವರ ಅವರ ಮಾತನಾಡಿ, ಇಸ್ರೇಲ್ ಪರವಾಗಿ ನೇರವಾಗಿ ಧುಮಕದಂತೆ ಅಮೆರಿಕಾಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಪರಿಸ್ಥಿತಿಯಲ್ಲಿ ಸೇನಾ ಹಸ್ತಕ್ಷೇಪ ಮಾಡದಂತೆ ವಾಷಿಂಗ್ಟನ್'ಗೆ ಎಚ್ಚರಿಸುತ್ತಿದ್ದೇವೆ. ಒಂದೊಮ್ಮೆ ಈ ಅಪಾಯಕಾರಿ ಹೆಜ್ಜೆ ಇಟ್ಟಿದ್ದೇ ಆದರೆ, ಅನಿರೀಕ್ಷಿತ ಕೆಟ್ಟ ಪರಿಣಾಮ ಎದುರಿಸುವುದು ಖಂಡಿತ ಎಂದು ಹೇಳಿದ್ದಾರೆ.
ನಾನು ಏನು ಮಾಡುತ್ತೇನೋ ಗೊತ್ತಿಲ್ಲ ಎಂದು ಇರಾನ್'ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ರಷ್ಯಾ ಪ್ರತಿಕ್ರಿಯೆ ನೀಡಿದೆ.
ಈಗಾಗಲೇ ಇಸ್ರೇಲ್'ಗೆ ಬೆಂಬ ನೀಡಿರುವ ಅಮೆರಿಕಾ, ಕದನಕ್ಕಿಳಿಯುವ ಸೂಚನೆಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಇರಾನ್ ಬೆನ್ನಿಗೆ ರಷ್ಯಾ ನಿಲ್ಲಲು ಮುಂದಾಗದ್ದು, ಈ ಬೆಳವಣಿಗೆ ಹೀಗೆಯೇ ಮುಂದುವರೆದರೆ ಶೀತಲ ಸಮಪ ಉತ್ತುಂಗಕ್ಕೆ ತಲುಪಿ ಇಡೀ ವಿಶ್ವವನ್ನೇ ಅಸ್ತಿರಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇರಾನ್‌ಗೆ ಎರಡು ದಿನದ ಹಿಂದಷ್ಟೇ ಟ್ರಂಪ್ ನೇರ ಎಚ್ಚರಿಕೆ ನೀಡುವ ಮೂಲಕ ಹಿಂದೆ ಸರಿಯುವಂತೆ ಹೇಳಿದ್ದರು. ಆದರೆ ಇದಕ್ಕೆ ಬಗ್ಗದ ಇರಾನ್ ಸರ್ವೋಚ್ಛ ನಾಯಕ ಖಮೇನಿ ನೀವು ಕೂಡ ನಿಮ್ಮ ಪಾಡಿಗೆ ಸೈಲೆಂಟ್ ಆಗಿದ್ರೆ ಒಳ್ಳೆಯದು, ಇಲ್ಲದಿದ್ದರೆ ಅಮೆರಿಕ ಕೂಡ ಪರಿಣಾಮ ಎದುರಿಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ,
ಇದರ ಬೆನ್ನಲ್ಲೇ ಇರಾನ್ ವಿರುದ್ಧ ಗುಡುಗಿದ್ದ ಟ್ರಂಪ್, ಹಿಂದೆ ಸರಿಯದಿದ್ದರೆ ನಾನು ಏನು ಮಾಡುತ್ತೇನೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.
ಟ್ರಂಪ್ ಹೇಳಿಕೆ ಬೆನ್ನಲ್ಲೇ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಮಿಲಿಟರಿ ಪಡೆಗಳನ್ನು ಸ್ಥಳಾಂತರಿಸುತ್ತಿದೆ. ಮೂರನೇ ನೌಕಾ ವಿಧ್ವಂಸಕ ನೌಕೆ ಪೂರ್ವ ಮೆಡಿಟರೇನಿಯನ್ ಸಮುದ್ರವನ್ನು ಪ್ರವೇಶಿಸಿದೆ. ಮತ್ತೊಂದು ವಿಮಾನವಾಹನ ನೌಕೆ ಗುಂಪು ಅರೇಬಿಯನ್ ಸಮುದ್ರಕ್ಕೆ ತೆರಳುತ್ತಿದೆ ಎನ್ನಲಾಗುತ್ತಿದೆ.
ಇದು ಕೇವಲ ರಕ್ಷಣಾತ್ಮಕ ಕ್ರಮವಾಗಿದೆ ಎಂಬ ಚರ್ಚೆ ಇದೆ. ಇರಾನ್ ಇಸ್ರೇಲ್ ಮೇಲೆ ಬಹುದೊಡ್ಡ ದಾಳಿ ನಡೆಸಿದರೆ ಅಮೆರಿಕ ರಣರಂಗಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
Advertisement