
ಬ್ರೆಸಿಲಿಯಾ: ಬ್ರೆಜಿಲ್ ನ ಪ್ರವಾಸಿ ತಾಣದಲ್ಲಿ ಭೀಕರ ದುರಂತ ಸಂಭವಿಸಿದ್ದು, ಹಾಟ್ ಏರ್ ಬಲೂನ್ ಆಗಸದಲ್ಲಿಯೇ ಸ್ಫೋಟಗೊಂಡ ಪರಿಣಾಮ 8 ಮಂದಿ ದಾರುಣ ಸಾವನ್ನಪ್ಪಿದ್ದಾರೆ.
ಬ್ರೆಜಿಲ್‌ನ ದಕ್ಷಿಣ ರಾಜ್ಯ ಸಾಂತಾ ಕ್ಯಾಟರೀನಾದಲ್ಲಿನ ಪ್ರೈಯಾ ಗ್ರ್ಯಾಂಡೇ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಸುಮಾರು 21 ಮಂದಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹಾಟ್ ಏರ್ ಬಲೂನ್ ಆಗಸದಲ್ಲಿಯೇ ಸ್ಫೋಟಗೊಂಡಿದೆ. ಪರಿಣಾಮ ಸ್ಫೋಟದಲ್ಲಿ 8 ಜನರು ಸಾವನ್ನಪ್ಪಿದ್ದು, 21 ಮಂದಿಗೆ ಗಾಯಗೊಂಡಿದ್ದಾರೆ. ಏರ್ ಬಲೂನ್ ಸ್ಫೋಟದ ಈ ಭಯಾನಕ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೂನ್ 21 ಶನಿವಾರ ಬೆಳಗ್ಗೆ ಸುಮಾರು 21 ಮಂದಿ ಪ್ರವಾಸಿಗರನ್ನು ಹತ್ತಿಸಿಕೊಂಡ ಹಾಟ್ ಏರ್ ಬಲೂನ್ ಆಗಸಕ್ಕೇರಿದ್ದು, ಈ ವೇಳೆ ಹಾಟ್ ಏರ್ ಬಲೂನ್ ಆಕಾಶದಲ್ಲಿ ಹಾರಾಡುತ್ತಿರುವಾಗಲೇ ದೊಡ್ಡ ಸ್ಪೋಟ ಸಂಭವಿಸಿದೆ. ಬೆಳಗ್ಗೆ ಬಲೂನ್ ಆಗಸದಲ್ಲಿ ಹಾರಾಟ ನಡೆಸುವಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತುಕೊಂಡಿದೆ. ಬೆಂಕಿಯ ತೀವ್ರತೆಗೆ 8 ಮಂದಿ ಸಾವನ್ನಪ್ಪಿದ್ದು, 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬ್ರೆಜಿಲ್ ನ ಸಾಂತಾ ಕ್ಯಾಟರೀನಾ ಪ್ರವಾಸಿ ತಾಣಗಳಿಗೇ ಖ್ಯಾತಿ ಗಳಿಸಿದ್ದು, ಇಲ್ಲಿಗೆ ಜನರು ಹಾಟ್ ಏರ್ ಬಲೂನ್‌ನಲ್ಲಿ ಸವಾರಿ ಮಾಡಲೆಂದೆ ಜನರು ಅಲ್ಲಿಗೆ ಬರ್ತಾರೆ. ಬಲೂನ್ ಬ್ಲ್ಯಾಸ್ಟ್ ಆಗಿರುವ ಭೀಕರ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಆಕಾಶದಲ್ಲಿ 30 ಕ್ಕೂ ಹೆಚ್ಚು ಬಲೂನ್‌ಗಳು ಹಾರುತ್ತಿದ್ದಾಗ ಒಂದು ಬಲೂನ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಗ್ಯಾಸ್ ಟಾರ್ಚ್‌ನಿಂದ ಬೆಂಕಿ
ಅಪಘಾತದಿಂದ ಬದುಕುಳಿದ ಬಲೂನಿನ ಪೈಲಟ್ ಘಟನೆಯ ಭೀಕರತೆ ಬಗ್ಗೆ ವಿವರಿಸಿದ್ದಾರೆ. ಹಾಟ್ ಏರ್ ಬಲೂನ್ ಬುಟ್ಟಿಯಲ್ಲಿ ಇರಿಸಲಾಗಿದ್ದ ಹೆಚ್ಚುವರಿ ಗ್ಯಾಸ್ ಟಾರ್ಚ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ, ಅವರು ಬಲೂನನ್ನು ಕೆಳಕ್ಕೆ ಇಳಿಸಲು ಪ್ರಯತ್ನಿಸಿದ್ದು, ಅಷ್ಟರಲ್ಲಾಗಲೇ ಬೆಂಕಿ ಇಡೀ ಬಲೂನಿಗೆ ವ್ಯಾಪಿಸಿದೆ. ಈ ವೇಳೆ ಅದರೊಳಗಿದ್ದವರು ಬೆಗನೇ ಕೆಳಗೆ ಜಿಗಿಯಿರಿ ಎಂದು ಕೂಗಿದ್ದಾರೆ. ಈ ವೇಳೆ ಕೆಲವರು ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಬಲೂನ್ ನಲ್ಲಿದ್ದವರು ಬೆಂಕಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
Advertisement