
ಟೆಹರಾನ್: ಇಸ್ರೇಲ್-ಇರಾನ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್'ಗೆ ಬೆಂಬಲ ವ್ಯಕ್ತಪಡಿಸಿ ಇರಾನ್ ಮೇಲೆ ದಾಳಿ ನಡೆಸುವ ಮೂಲಕ ಸಂಘರ್ಷಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ ಕೊಟ್ಟಿದ್ದು, ಅಮೆರಿಕಾ ದಾಳಿಗೆ ಇರಾನ್ ತೀವ್ರವಾಗಿ ಕಿಡಿಕಾರಿದೆ.
ಅಮೆರಿಕದ ಈ ದಾಳಿಯಲ್ಲಿ, ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ಸ್ಥಾವರಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಹೇಳಲಾಗುತ್ತಿದ್ದು, ಅಮೆರಿಕಾದ ಈ ದಾಳಿಗಳನ್ನು ಇರಾನ್ ದೃಢಪಡಿಸಿದೆ.
ಅಲ್ಲದೆ, ಇರಾನ್ ಡೊನಾಲ್ಡ್ ಟ್ರಂಪ್‌ಗೆ ನೇರ ಎಚ್ಚರಿಕೆ ನೀಡಿರುವ ಇರಾನ್, ಯುದ್ಧ ನೀವು ಪ್ರಾರಂಭಿಸಿದ್ದೀರಿ, ಈಗ ನಾವು ಅದನ್ನು ಕೊನೆಗೊಳಿಸುತ್ತೇವೆ ಎಂದು ಖಮೇನಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನ ಸರ್ಕಾರಿ ದೂರದರ್ಶನ ಅಮೆರಿಕಾಗೆ ನೇರ ಎಚ್ಚರಿಕೆ ನೀಡಿದ್ದು, ಡೊನಾಲ್ಡ್ ಟ್ರಂಪ್‌ಗೆ ನೀವೇ ಅದನ್ನು ಪ್ರಾರಂಭಿಸಿದ್ದೀರಿ, ಈಗ ನಾವು ಅದನ್ನು ಕೊನೆಗೊಳಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದೆ.
ಅಮೆರಿಕಾ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾದ ಅಮೆರಿಕಾ, ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ ಮಾಡುವ ಮೂಲಕ ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಕಾನೂನು ಮತ್ತು ಎನ್‌ಪಿಟಿಯ ಗಂಭೀರ ಉಲ್ಲಂಘನೆ ಮಾಡಿದೆ. ಇಂದು ಬೆಳಿಗ್ಗೆ ನಡೆದ ದಾಳಿಗೆ ಪರಿಣಾಮ ಎದುರಿಸಬೇಕಾಗುತ್ತದೆ. ಇರಾನ್ ತನ್ನ ಸಾರ್ವಭೌಮತ್ವ, ಹಿತಾಸಕ್ತಿ ಮತ್ತು ಜನರನ್ನು ರಕ್ಷಿಸಿಕೊಳ್ಳಲು ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿದೆ ಎಂದು ಹೇಳಿದ್ದಾರೆ.
ಇರಾನ್‌ನ ಮೂರು ಪ್ರಮುಖ ಅಣ್ವಸ್ತ್ರ ಕೇಂದ್ರಗಳಾದ ಫೋರ್ಡೋ, ನತಾಂಜ್, ಮತ್ತು ಎಸ್ಫಹಾನ್ ಮೇಲೆ ದಾಳಿ ನಡೆಸಿತು, ಇದು ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಇರಾನ್, ಅಮೆರಿಕಾದ ಮಿಲಿಟರಿ ತಾಣಗಳು, ವಿಶೇಷವಾಗಿ ಇರಾಕ್ ಮತ್ತು ಪರ್ಷಿಯನ್ ಗಲ್ಫ್‌ನಲ್ಲಿರುವ ತಾಣಗಳ ಮೇಲೆ ಕ್ಷಿಪಣಿ ದಾಳಿಗಳನ್ನು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಇರಾನ್-ಬೆಂಬಲಿತ ಹೌತಿ ಮಿಲಿಷಿಯಾ ಮತ್ತು ಇರಾಕ್‌ನ ಶಿಯಾ ಗುಂಪುಗಳು ಅಮೆರಿಕ ತಾಣಗಳ ಮೇಲೆ ದಾಳಿಗೆ ಸಿದ್ಧವಿವೆ ಎನ್ನಲಾಗಿದೆ.
ಈ ನಡುವೆ ಅಮೆರಿಕದ ದಾಳಿಯ ನಂತರ ಇರಾನ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇರಾನ್ ಅನೇಕ ಪ್ರದೇಶಗಳಲ್ಲಿ ವಾಯುದಾಳಿಯ ಸೈರನ್‌ಗಳು ಮೊಳಗುತ್ತಿರುವುದು ಕಂಡುಬಂದಿದೆ. ಅದೇ ಸಮಯದಲ್ಲಿ, ಇಸ್ರೇಲ್‌ನಲ್ಲಿ ಭದ್ರತಾ ಪರಿಸ್ಥಿತಿಯನ್ನು ಕೂಡ ಹೆಚ್ಚಿಸಲಾಗಿದೆ.
ಇನ್ನು ಇರಾನ್‌ನ ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ನಂತರ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಸಂಪೂರ್ಣ ಮುಚ್ಚಿದೆ. ಗಡಿಭಾಗದ ಬಂಕರ್‌ಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ, ಸೈನ್ಯವು ಯುದ್ಧದ ಸ್ಥಿತಿಯಲ್ಲಿದೆ.
ಇರಾನ್ ದಾಳಿಯ ಪರಿಣಾಮ ಟೆಲ್ ಅವೀವ್ ಮತ್ತು ಹೈಫಾ ನಗರಗಳಲ್ಲಿನ ಮೂಲಸೌಕರ್ಯಗಳಿಗೆ ದೊಡ್ಡ ಹಾನಿಯಾಗಿದೆ. ಅನೇಕ ಕಟ್ಟಡಗಳು ಹಾನಿಗೊಳ್ಳುವ ಮೂಲಕ ನೂರಾರು ಜನರಿಗೆ ವೈದ್ಯಕೀಯ ಸಹಾಯವನ್ನು ನೀಡಲಾಗುತ್ತಿದೆ.
Advertisement