'37 ಗಂಟೆ ಸತತ ಪಯಣ, ಆಗಸದಲ್ಲಿಯೇ ಇಂಧನ ಭರ್ತಿ': Iran ಪರಮಾಣು ಘಟಕದ ಮೇಲೆ ದಾಳಿ ಮಾಡಿದ B-2 Spirit ರೋಚಕ ಪಯಣ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಮುಂಜಾನೆ ಇರಾನ್‌ನ ಪರಮಾಣು ಘಟಕಗಳ ಮೇಲೆ ಪ್ರಬಲ ದಾಳಿ ನಡೆಸಿದ್ದು, ಈ ದಾಳಿಗಾಗಿ ಅಮೆರಿಕ ಸೇನೆ ತನ್ನ ಬಲಿಷ್ಠ ಬಿ-2 ಸ್ಪಿರಿಟ್ ಬಾಂಬರ್‌ ಯುದ್ಧ ವಿಮಾನವನ್ನು ಬಳಕೆ ಮಾಡಿತ್ತು.
US Bomber B 2 Spirit
B-2 Spirit ರೋಚಕ ಪಯಣ
Updated on

ವಾಷಿಂಗ್ಟನ್: ಇರಾನ್‌ನ ಪರಮಾಣು ನೆಲೆಗಳನ್ನು ಹೊಡೆದುರುಳಿಸಲು ಅಮೆರಿಕ ಸೇನೆ ಬಳಸಿದ B-2 Spirit ಯುದ್ಧ ವಿಮಾನ ಇರಾನ್ ಗೆ ಪಯಣಿಸಲು ಮಾಡಿದ ಸಾಹಸದ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಹೌದು.. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಮುಂಜಾನೆ ಇರಾನ್‌ನ ಪರಮಾಣು ಘಟಕಗಳ ಮೇಲೆ ಪ್ರಬಲ ದಾಳಿ ನಡೆಸಿದ್ದು, ಈ ದಾಳಿಗಾಗಿ ಅಮೆರಿಕ ಸೇನೆ ತನ್ನ ಬಲಿಷ್ಠ ಬಿ-2 ಸ್ಪಿರಿಟ್ ಬಾಂಬರ್‌ ಯುದ್ಧ ವಿಮಾನವನ್ನು ಬಳಕೆ ಮಾಡಿತ್ತು.

ಈ ಪ್ರಬಲ ಯುದ್ದ ವಿಮಾನ ಅಮೆರಿಕದ ಮಿಸೌರಿಯಿಂದ ಸುಮಾರು 37 ಗಂಟೆಗಳ ಕಾಲ ನಿರಂತರವಾಗಿ ಹಾರಾಟ ನಡೆಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಆಗಸದಲ್ಲೇ ಇಂಧನ ಭರ್ತಿ

ಇನ್ನು ಈ ಸತತ 37 ಗಂಟೆಗಳ ಪಯಣಕ್ಕಾಗಿ ಬಿ 2 ಸ್ಪಿರಿಟ್ ಯುದ್ಧ ವಿಮಾನಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಲಾಗಿತ್ತು. ಹಲವಾರು ಬಾರಿ ಮಧ್ಯದಲ್ಲೇ ಯುದ್ಧ ವಿಮಾನಕ್ಕೆ ಇಂಧನ ತುಂಬಿಸಲಾಗಿತ್ತು.

US Bomber B 2 Spirit
Israel-Iran War: ಇಸ್ರೇಲ್ ಪರ ಬೇಹುಗಾರಿಕೆ; ಇರಾನ್ ಸೇನಾ ಅಧಿಕಾರಿಗಳ ಹತ್ಯೆಗೆ ಕಾರಣವಾಗಿದ್ದ 'ಲೇಡಿ ಕಿಲ್ಲರ್'ಗೆ ಬಲೆ; ಗೂಢಾಚಾರಿಗೆ ನೇಣು!

ಇರಾನ್ ಅಣು ಸ್ಥಾವರಗಳ ಮೇಲೆ ದಾಳಿ

ಈ 37 ಗಂಟೆಗಳ ನಿರಂತರ ಪಯಣದ ಬಳಿಕ B 2 ಸ್ಪಿರಿಟ್ ಯುದ್ಧ ವಿಮಾನ ಇರಾನಿನ ಮೂರು ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ದಾಳಿ ಮಾಡಿತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಫೋರ್ಡೋ ಅಣು ಸ್ಥಾವರ ನಾಶವಾಗಿದೆ ಎಂದು ಘೋಷಿಸಿದರು.

ಅಂದಹಾಗೆ ಇರಾನ್ ನ ಅತ್ಯಂತ ಸುರಕ್ಷಿತ ಪರಮಾಣು ನೆಲೆ ಎಂದೇ ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿದ್ದ ಫೋರ್ಡೋ ಅಣು ಸ್ಥಾವರ, ಇರಾನ್ ನ ಭಾರೀ ಕೋಟೆಯ ಭೂಗತ ಅಣು ಸೌಲಭ್ಯವಾಗಿತ್ತು. ಇಂತಹ ಭದ್ರನೆಲೆಯನ್ನೇ ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.

ಬಂಕರ್-ಬಸ್ಟರ್ ಬಾಂಬ್‌ಗಳು ಮತ್ತು ಟೊಮಾಹಾಕ್ ಕ್ಷಿಪಣಿಗಳ ಸಂಯೋಜನೆಯೊಂದಿಗೆ ನಡೆಸಲಾದ ದಾಳಿಗಳು, ವರ್ಷಗಳಲ್ಲಿ ಇರಾನ್ ವಿರುದ್ಧದ ಅತ್ಯಂತ ನೇರವಾದ ಅಮೆರಿಕ ಮಿಲಿಟರಿ ಕ್ರಮವಾಗಿತ್ತು. ಫೋರ್ಡೋ ಮೇಲೆ ಆರು ಬಂಕರ್-ಬಸ್ಟರ್ ಬಾಂಬ್‌ಗಳನ್ನು ಬೀಳಿಸಲಾಗಿದೆ ಮತ್ತು ಸುಮಾರು 30 ಟೊಮಾಹಾಕ್ ಕ್ಷಿಪಣಿಗಳು ಇತರ ಪರಮಾಣು ಸ್ಥಾಪನೆಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆದಿವೆ ಎಂದು ಟ್ರಂಪ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com