
ತೆಹ್ರಾನ್: ಇಸ್ರೇಲ್- ಅಮೆರಿಕಾದೊಂದಿಗೆ ಕದನ ವಿರಾಮ ಘೋಷನೆಯಾದ ನಂತರವೂ ಇರಾನ್ ವಿರುದ್ಧ ಕದನ ವಿರಾಮ ಉಲ್ಲಂಘನೆ ಆರೋಪ ಕೇಳಿಬಂದಿದೆ.
ಇರಾನ್‌ನ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ರೇಲ್ ಭರವಸೆ ನೀಡುತ್ತಿದ್ದಂತೆ, ಇರಾನ್ ಸೇನೆ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿರುವುದನ್ನು ನಿರಾಕರಿಸಿದೆ.
ISNA ಸುದ್ದಿ ಸಂಸ್ಥೆ ಟೆಲಿಗ್ರಾಮ್‌ನಲ್ಲಿ ಈ ಬಗ್ಗೆ ವರದಿ ಮಾಡಿದ್ದು, "ಜಿಯೋನಿಸ್ಟ್ ಆಡಳಿತದ ಮೇಲೆ ಕದನ ವಿರಾಮ ಹೇರಿದ ನಂತರ ಇರಾನ್ ಆಕ್ರಮಿತ ಪ್ರದೇಶಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಎಂಬ ಸುದ್ದಿಯನ್ನು ನಿರಾಕರಿಸಲಾಗಿದೆ." ಎಂದು ಹೇಳಿದೆ.
ಕದನ ವಿರಾಮ ಪ್ರಾರಂಭವಾದ ಕೆಲವು ಗಂಟೆಗಳ ನಂತರ ಇರಾನ್‌ನಿಂದ ಕ್ಷಿಪಣಿ ದಾಳಿಗಳು ನಡೆದಿವೆ ಎಂದು ಇಸ್ರೇಲ್ ಹೇಳಿದೆ. ಈಗ, ಇಸ್ರೇಲ್ ಪ್ರತಿಕ್ರಿಯೆಯಾಗಿ ಇರಾನ್ ಮೇಲೆ ದಾಳಿ ಮಾಡಲು ಆದೇಶಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Advertisement