
ನವದೆಹಲಿ: ಟೀನೇಜ್ ಹುಡುಗನಜೊತೆ ಅಕ್ರಮ ಸಂಬಂಧ ಹೊಂದಿ ಗರ್ಭವತಿಯಾದ ಕಾರಣ ಐಸ್ ಲ್ಯಾಂಡ್ ಸಚಿವೆಯೊಬ್ಬರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಹೌದು.. ಐಸ್‌ಲ್ಯಾಂಡ್‌ನ ಮಕ್ಕಳ ಸಚಿವೆ ಅಸ್ತಿಲ್ಡರ್ ಲೋವಾ ಥೋರ್ಸ್‌ಡೋಟ್ಟಿರ್ (Asthildur Loa Thorsdottir) ಅವರು ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, 3 ದಶಕಗಳ ಹಿಂದೆ ತಾವು ಟೀನೇಜ್ ಹುಡುಗೊಂದಿಗೆ ಮಗು ಪಡೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಪ್ರಸ್ತುತ 55 ವರ್ಷದ ಅಸ್ತಿಲ್ಡರ್ ಲೋವಾ ಥೋರ್ಸ್‌ಡೋಟ್ಟಿರ್ ತಮ್ಮ 22 ವಯಸ್ಸಿನಲ್ಲಿ 15 ವರ್ಷದ ಹುಡುಗನೊಂದಿಗೆ ಅಕ್ರಮ ಸಂಬಂಧದಿಂದ ಮಗು ಪಡೆದಿದ್ದರು ಎಂದು ಹೇಳಲಾಗಿದೆ. ಈ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿ ಥೋರ್ಸ್‌ಡೋಟ್ಟಿರ್ ವಿವಾದಕ್ಕೆ ಸಿಲುಕಿದ್ದರು.
ಇದೀಗ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ವಿವಾದಗಳಿಂದ ದೂರ ಉಳಿಯಲು ಥೋರ್ಸ್‌ಡೋಟ್ಟಿರ್ ನಿರ್ಧರಿಸಿದ್ದಾರೆ.
ಮೂಲಗಳ ಪ್ರಕಾರ ಥೋರ್ಸ್‌ಡೋಟ್ಟಿರ್ ಭಾಗವಹಿಸುತ್ತಿದ್ದ ಧಾರ್ಮಿಕ ಸಭೆಯಲ್ಲಿ ತಮಗೆ ಆ ಟೀನೇಜ್ ಹುಡುಗನ ಪರಿಚಯವಾಗಿತ್ತು ಎಂದು ಥೋರ್ಸ್‌ಡೋಟ್ಟಿರ್ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ನನಗೆ 22 ವರ್ಷ ಮತ್ತು ಆತನಿಗೆ 15 ವರ್ಷ ವಯಸ್ಸಾಗಿತ್ತು. ಇಬ್ಬರೂ ಪರಸ್ಪರ ಆಕರ್ಷಿತಗೊಂಡಿದ್ದೆವು. ನನ್ನ ಕಷ್ಟಕರ ಸಮಯದಲ್ಲಿ ಆತನ ಮನೆಯಲ್ಲಿ ಆಶ್ರಯ ಪಡೆದಿದ್ದೆವು. ನನ್ನ 23ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ ಐಸ್ಯ್ ಲ್ಯಾಂಡ್ ನಲ್ಲಿ ಒಪ್ಪಿಗೆಯ ದೈಹಿಕ ಸಂಪರ್ಕದ ವಯಸ್ಸು 15 ವರ್ಷ ಆಗಿದ್ದು, ವ್ಯಕ್ತಿ ಮಾರ್ಗದರ್ಶಕ ಅಥವಾ ಶಿಕ್ಷಕರಾಗಿದ್ದರೆ ಅಥವಾ ಅವರು ನಿಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದರೆ ಅಥವಾ ನಿಮಗಾಗಿ ಕೆಲಸ ಮಾಡುತ್ತಿದ್ದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಸಾಧಿಸುವುದು ಕಾನೂನುಬಾಹಿರವಾಗಿದೆ. ಒಂದು ವೇಳೆ ತಪ್ಪಿತಸ್ಥರೆಂದು ಕಂಡುಬಂದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
Advertisement