
ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದಾಗಿ ಈವರೆಗೂ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವಾರು ಕಟ್ಟಡಗಳು ನಾಶವಾಗಿವೆ.
ಮ್ಯಾನ್ಮಾರ್ ಭೂಪಂಕದಿಂದ (Myanmar Earthquake) ಅಕ್ಷಶಃ ತತ್ತರಿಸಿ ಹೋಗಿದ್ದು, ಮಾರ್ಚ್ 28ರಂದು ಮ್ಯಾನ್ಮಾರ್‌ನಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಸತತ ಭೂಕಂಪಗಳು ಸಂಭವಿಸಿದವು.
ಭೂಕಂಪನದಿಂದಾಗಿ ರಾಜಧಾನಿ ನೇಪಿಡಾವ್‌ನಲ್ಲಿರುವ ಆಸ್ಪತ್ರೆಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಿದೆ. ನೂರಾರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಏದುರಾಗಿದೆ.
ಒಮ್ಮೆಲೆ ಸಮುದ್ರವಾದ ಸ್ವಿಮ್ಮಿಂಗ್ ಪೂಲ್
ಇನ್ನು ಭೂಕಂಪನದ ವೇಳೆ ಬ್ಯಾಂಕಾಕ್‌ನ ಹೋಟೆಲ್‌ನ ಮೇಲ್ಛಾವಣಿಯ ಸ್ವಿಮಿಂಗ್ ಪೂಲ್ನಲ್ಲಿ ನೀರು ಕೆಳಗೆ ಧುಮ್ಮಿಕ್ಕುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದೇ ಇದೇ ಸ್ವಿಮ್ಮಿಂಗ್ ಪೂಲ್ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಅತ್ಯಂತ ಶಾಂತವಾಗಿದ್ದ ಸ್ವಿಮ್ಮಿಂಗ್ ಪೂಲ್ ನಲ್ಲಿನ ನೀರು ಭೂಕಂಪನದ ವೇಳೆ ಸಮುದ್ರದ ಅಲೆಗಳಂತೆ ಮಾರ್ಪಟ್ಟಿತು. ಈ ವೇಳೆ ನೀರು ಕೆಳಗೆ ಧುಮ್ಮಿಕ್ಕಿತು. ಈ ಕುರಿತ ವಿಡಿಯೋಗಳು ವ್ಯಾಪಕ ವೈರಲ್ ಆಗಿತ್ತು.
Romance ನಲ್ಲಿ ಮೈ ಮರೆತಿದ್ದ ಜೋಡಿಗೆ ಶಾಕ್
ಇನ್ನು ಇದೇ ಸ್ವಿಮ್ಮಿಂಗ್ ಪೂಲ್ ನಲ್ಲಿ ಜೋಡಿಯೊಂದು ಲೌಂಜರ್‌ಗಳ ಮೇಲೆ ತೇಲುತ್ತಿತ್ತು. ಆದರೆ ಈ ವೇಳೆ ಭೂಕಂಪ ಸಂಭವಿಸುತ್ತಿದ್ದಂತೆ, ನೀರು ಏರಿಳಿತಗೊಳ್ಳಲು ಪ್ರಾರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ, ಬೃಹತ್ ಅಲೆಗಳು ರೂಪುಗೊಂಡವು, ಕೊಳದ ಅಂಚುಗಳ ಮೇಲೆ ಅಪ್ಪಳಿಸಿದವು.
ಅಷ್ಟು ಹೊತ್ತು ರೊಮ್ಯಾನಲ್ಲಿ ಬಿಸಿಯಾಗಿದ್ದ ಈ ಜೋಡಿ ಏಕಾಏಕಿ ಪ್ರಾಣ ಉಳಿಸಿಕೊಳ್ಳಲು ಪರದಾಡಿತು. ನಿಶ್ಚಿಂತೆಯಿಂದ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಲಗಿದ್ದ ಜೋಡಿ ಭೂಕಂಪದಿಂದ ತತ್ತರಿಸಿ ಹೋಯಿತು. ಶಾಂತವಾಗಿದ್ದ ಈಜುಕೊಳವು ವಿಪತ್ತಾಗಿ ಮಾರ್ಪಟ್ಟ ಭಯಾನಕ ಕ್ಷಣವನ್ನು ಸೆರೆಹಿಡಿದಿರುವ ವೀಡಿಯೊ ಈಗ ವೈರಲ್ ಆಗಿದೆ.
Advertisement