
ನವದೆಹಲಿ: ಬಾಹ್ಯಾಕಾಶ ಯೋಜನೆ ಆರಂಭಿಸುವ ಯುರೋಪ್ ಕನಸಿಗೆ ಆರಂಭದಲ್ಲೇ ಪೆಟ್ಟು ಬಿದ್ದಿದ್ದು, ಪರೀಕ್ಷಾರ್ಥ ಉಡಾವಣಾ ರಾಕೆಟ್ ಉಡಾವಣೆಗೊಂಡ ಕೇವಲ 40 ಸೆಕೆಂಡ್ ನಲ್ಲೇ ಸ್ಫೋಟಗೊಂಡಿದೆ.
ಭಾನುವಾರ ನಾರ್ವೇಜಿಯನ್ ಬಾಹ್ಯಾಕಾಶ ಬಂದರಿನಿಂದ ಉಡಾವಣೆಯಾದ ಪರೀಕ್ಷಾರ್ಥ ರಾಕೆಟ್ ಕೇವಲ 40 ಸೆಕೆಂಡುಗಳ ನಂತರ ನೆಲಕ್ಕೆ ಬಿದ್ದು ಸ್ಫೋಟಗೊಂಡಿದೆ. ಈ ಪರೀಕ್ಷಾರ್ಥ ರಾಕೆಟ್ ಅನ್ನು ಜರ್ಮನ್ ಸ್ಟಾರ್ಟ್ಅಪ್ ಇಸಾರ್ ಏರೋಸ್ಪೇಸ್ (Isar Aerospace) ತಯಾರಿಸಿತ್ತು. ಮತ್ತು ಇದನ್ನು ಸಂಸ್ಥೆ ಆರಂಭಿಕ ಪರೀಕ್ಷೆ ಎಂದು ವಿವರಿಸಿತ್ತು.
ಸಿಬ್ಬಂದಿ ರಹಿತ ಸ್ಪೆಕ್ಟ್ರಮ್ ರಾಕೆಟ್ ಅನ್ನು ಯುರೋಪಿನ ಮೊದಲ ಬಾಹ್ಯಾಕಾಶ ರಾಕೆಟ್ ಮತ್ತು ಮೊದಲ ಬಾಹ್ಯಾಕಾಶ ಪ್ರಯತ್ನ ಎಂದು ಪರಿಗಣಿಸಲಾಗಿದೆ. ಸ್ವೀಡನ್ ಮತ್ತು ಬ್ರಿಟನ್ ಸೇರಿದಂತೆ ಹಲವಾರು ರಾಷ್ಟ್ರಗಳು ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಪಾಲನ್ನು ಬಯಸುತ್ತಿವೆ. ಈ ನಿಟ್ಟಿನಲ್ಲಿ ಇಸಾರ್ ಏರೋಸ್ಪೇಸ್ (Isar Aerospace) ರಾಕೆಟ್ ನಿರ್ಣಾಯಕ ಪ್ರಯತ್ನ ಎಂದು ಪರಿಗಣಿಸಲಾಗಿತ್ತು.
ಕಲಿಕೆಯ ಭಾಗ ಎಂದ ಸಂಸ್ಥೆ
ಇನ್ನು ರಾಕೆಟ್ ವೈಫಲ್ಯವನ್ನು ಒಪ್ಪಿಗೊಂಡ ಇಸಾರ್ ಏರೋಸ್ಪೇಸ್ (Isar Aerospace) ಸಂಸ್ಥೆ ಆರಂಭಿಕ ಉಡಾವಣೆಯು ಅಕಾಲಿಕವಾಗಿ ಕೊನೆಗೊಳ್ಳಬಹುದು ಎಂದು ಎಚ್ಚರಿಸಿತ್ತು. ಅಲ್ಲದೆ ಈ ಪರೀಕ್ಷೆಯು ತನ್ನ ತಂಡವು ಕಲಿಯಬಹುದಾದ ವ್ಯಾಪಕ ಡೇಟಾವನ್ನು ಉತ್ಪಾದಿಸಿದೆ ಎಂದು ಹೇಳಿದೆ. ಕಂಪನಿಯ ಆಂತರಿಕವಾಗಿ ಅಭಿವೃದ್ಧಿಪಡಿಸಿದ ರಾಕೆಟ್ ಎಲ್ಲಾ ವ್ಯವಸ್ಥೆಗಳ ಮೊದಲ ಸಂಯೋಜಿತ ಪರೀಕ್ಷೆಯಲ್ಲಿ ಉಡಾವಣಾ ವಾಹನದ ಡೇಟಾವನ್ನು ಸಂಗ್ರಹಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು ಎಂದು ಬವೇರಿಯನ್ ಇಸಾರ್ ಏರೋಸ್ಪೇಸ್ ಕಳೆದ ವಾರ ಹೇಳಿದೆ.
ನಾರ್ವೆಯ ಆರ್ಕ್ಟಿಕ್ ಆಂಡೋಯಾ ಸ್ಪೇಸ್‌ಪೋರ್ಟ್‌ನಿಂದ ಉಡಾವಣೆಗೊಂಡ ಸ್ಪೆಕ್ಟ್ರಮ್ ಅನ್ನು ಒಂದು ಮೆಟ್ರಿಕ್ ಟನ್ ತೂಕದ ಸಣ್ಣ ಮತ್ತು ಮಧ್ಯಮ ಗಾತ್ರದ ಉಪಗ್ರಹಗಳಿಗಾಗಿ ವಿನ್ಯಾಸಗೊಳಿಸಲಾಗಿತ್ತು. ಆದರೂ ಅದು ತನ್ನ ಮೊದಲ ಪ್ರಯಾಣದಲ್ಲಿ ರಾಕೆಟ್ ಪೇಲೋಡ್ ಅನ್ನು ಹೊತ್ತೊಯ್ಯುವಲ್ಲಿ ವಿಫಲವಾಯಿತು.
Advertisement