Russia-Ukraine War: ಮಿಲಿಟರಿ ದಾಳಿ ಸ್ಥಗಿತಕ್ಕೆ ರಷ್ಯಾ–ಉಕ್ರೇನ್ ಒಪ್ಪಿಗೆ!; Putin-Zelenskyy 'ಹಠಮಾರಿಗಳು'; Donald Trump ಅಸಮಾಧಾನ!

ಸೌದಿ ಅರೇಬಿಯಾದಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಕಪ್ಪು ಸಮುದ್ರದಲ್ಲಿ ಹಡಗುಗಳ ಸುರಕ್ಷಿತ ಸಂಚಾರ ಧೃಡಪಡಿಸಲು ಅಮೆರಿಕ ಉಕ್ರೇನ್ ಮತ್ತು ರಷ್ಯಾ ಜೊತೆ ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಹಾಕಿದೆ ಎನ್ನಲಾಗಿದೆ.
Donald Trump putin
ಡೊನಾಲ್ಡ್ ಟ್ರಂಪ್,ಪುಟಿನ್ ಮತ್ತು ಝೆಲೆನ್ಸ್ಕಿ
Updated on

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಸುದೀರ್ಘ ಯುದ್ಧ ಮತ್ತು ಮಿಲಿಟರಿ ದಾಳಿ ಕೊನೆಗೊಳಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ಹೇಳಲಾಗಿದೆ.

ಸೌದಿ ಅರೇಬಿಯಾದಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಕಪ್ಪು ಸಮುದ್ರದಲ್ಲಿ ಹಡಗುಗಳ ಸುರಕ್ಷಿತ ಸಂಚಾರ ಧೃಡಪಡಿಸಲು ಅಮೆರಿಕ ಉಕ್ರೇನ್ ಮತ್ತು ರಷ್ಯಾ ಜೊತೆ ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಹಾಕಿದೆ ಎನ್ನಲಾಗಿದೆ.

ಕಪ್ಪು ಸಮುದ್ರದಲ್ಲಿ ಹಡಗುಗಳ ಮೇಲೆ ಮಿಲಿಟರಿ ದಾಳಿ ನಡೆಸದಿರಲು ರಷ್ಯಾ ಮತ್ತು ಉಕ್ರೇನ್ ಒಪ್ಪಿಕೊಂಡಿವೆ. ಈ ಮಾಹಿತಿಯನ್ನು ಶ್ವೇತಭವನ ನೀಡಿದ್ದು, ಇದಲ್ಲದೆ, ಎರಡೂ ದೇಶಗಳು ಪರಸ್ಪರರ ಇಂಧನ ಸೌಲಭ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಸಹ ಒಪ್ಪಿಕೊಂಡಿವೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಇದರಿಂದ ಹಡಗುಗಳು ಈ ಪ್ರದೇಶದಲ್ಲಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಬಹುದು. ಈ ಒಪ್ಪಂದಗಳು ಜಾರಿಗೆ ಬಂದರೆ, ರಷ್ಯಾ ಮತ್ತು ಉಕ್ರೇನ್ ನಡುವಿನ ವ್ಯಾಪಾರ ಕದನ ವಿರಾಮದತ್ತ ಇದುವರೆಗಿನ ಸ್ಪಷ್ಟ ಪ್ರಗತಿಯಾಗಲಿದೆ ಎನ್ನಲಾಗಿದೆ.

Donald Trump putin
ಸಹಿ ಹಾಕ್ಲಿಲ್ಲ ಅಂದ್ರೆ 'ಬಾಂಬ್' ಹಾಕ್ತೀನಿ: ಇರಾನ್ ಗೆ Donald Trump ಎಚ್ಚರಿಕೆ!

Putin-Zelenskyy ವಿರುದ್ಧ Donald Trump ಅಸಮಾಧಾನ

ಇತ್ತ ಯುದ್ಧ ಕೊನೆಗೊಳಿಸಲು ಕದನ ವಿರಾಮವನ್ನು ರೂಪಿಸಲು ರಷ್ಯಾ ಮತ್ತು ಉಕ್ರೇನಿಯನ್ ನಾಯಕರು ಹೆಣಗಾಡುತ್ತಿರುವಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಮತ್ತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಬ್ಬರನ್ನೂ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಕದನ ವಿರಾಮ ವಿಚಾರದಲ್ಲಿ "ನಾವು ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದೇವೆ"..ಇಬ್ಬರ ನಡುವೆ "ಅಗಾಧ ದ್ವೇಷವಿದೆ". ಪುಟಿನ್ ಝೆಲೆನ್ಸ್ಕಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಕ್ಕೆ ಅವರು "ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಈಗಾಗಲೇ ತೀವ್ರ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಸೇರಿಸುವುದನ್ನು ಮತ್ತು ಅದರ ತೈಲ ರಫ್ತನ್ನು ದುರ್ಬಲಗೊಳಿಸಲು ಸುಂಕಗಳನ್ನು ಬಳಸುವುದನ್ನು ಪರಿಗಣಿಸುವುದಾಗಿ ಟ್ರಂಪ್ ಹೇಳಿದರು.

ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಝೆಲೆನ್ಸ್ಕಿ ಕಾನೂನು ಬದ್ಧತೆಯನ್ನು ಹೊಂದಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ತಕರಾರು ತೆಗೆದಿದ್ದಾರೆ. ಅಲ್ಲದೆ ಉಕ್ರೇನ್‌ಗೆ ಬಾಹ್ಯ ಆಡಳಿತದ ಅಗತ್ಯವಿದೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ.

ಯುದ್ಧ ಕೊನೆಗಾಣಿಸುವಲ್ಲಿ ಪ್ರಮುಖ ಹೆಜ್ಜೆ

ಉಕ್ರೇನ್ ಮತ್ತು ರಷ್ಯಾ ನಡುವಿನ ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಮಾತುಕತೆಯತ್ತ ಒಂದು ಪ್ರಮುಖ ಹೆಜ್ಜೆ ಎಂದು ಅಮೆರಿಕ ಬಣ್ಣಿಸಿದೆ. ಆದರೆ ರಷ್ಯಾದ ಯುದ್ಧನೌಕೆಯ ಚಲನೆ ಕಪ್ಪು ಸಮುದ್ರ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಕಪ್ಪು ಸಮುದ್ರದಲ್ಲಿ ಪ್ರಯಾಣಿಸುವ ಹಡಗುಗಳ ಭದ್ರತೆಗೆ ಮಾಸ್ಕೋ, ಕೀವ್ ಮತ್ತು ವಾಷಿಂಗ್ಟನ್ ಕೂಡ ಒಪ್ಪಿಕೊಂಡಿವೆ ಎಂದು ಶ್ವೇತಭವನ ತಿಳಿಸಿದೆ. ಇದೇ ವೇಳೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ನಂಬಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳಿದೆ.

ಅಂದಹಾಗೆ ಕಪ್ಪು ಸಮುದ್ರ ಯುರೋಪ್ ಮತ್ತು ಏಷ್ಯಾದ ನಡುವೆ ಇದೆ. ಇದು ಹಲವು ದೇಶಗಳನ್ನು ಸಂಪರ್ಕಿಸುತ್ತದೆ. ಇದರ ಜೊತೆಗೆ, ಇದು ಒಂದು ಪ್ರಮುಖ ಸಮುದ್ರ ಸಾರಿಗೆ ಮಾರ್ಗವನ್ನು ಒದಗಿಸುತ್ತದೆ. ಇದು ರಷ್ಯಾ ಮತ್ತು ನ್ಯಾಟೋ ನಡುವೆ ಕಾರ್ಯತಂತ್ರದ ಬಫರ್ ಆಗಿ ಕಾರ್ಯನಿರ್ವಹಿಸುವುದಲ್ಲದೆ, ಭೂ-ಕಾರ್ಯತಂತ್ರದ ಪ್ರದೇಶವಾಗಿಯೂ ಕಾರ್ಯನಿರ್ವಹಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com