ಸಹಿ ಹಾಕ್ಲಿಲ್ಲ ಅಂದ್ರೆ 'ಬಾಂಬ್' ಹಾಕ್ತೀನಿ: ಇರಾನ್ ಗೆ Donald Trump ಎಚ್ಚರಿಕೆ!

ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್ ಜೊತೆ ಒಪ್ಪಂದಕ್ಕೆ ಬಾರದಿದ್ದರೆ ಬಾಂಬ್ ದಾಳಿ ಮತ್ತು ದುಪ್ಪಟ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
Updated on

ವಾಷಿಂಗ್ಟನ್: ಪರಮಾಣು ಬಾಂಬ್ ತಯಾರಿಕಾ ಯೋಜನೆಯಲ್ಲಿ ನಿರತವಾಗಿರುವ ಇರಾನ್ ಸರ್ಕಾರ ತನ್ನ 'ಒಪ್ಪಂದ'ಕ್ಕೆ ಸಹಿ ಹಾಕದಿದ್ದರೆ ಆ ದೇಶದ ಮೇಲೆ ಬಾಂಬ್ ಗಳ ಸುರಿಮಳೆ ಸುರಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್ ಜೊತೆ ಒಪ್ಪಂದಕ್ಕೆ ಬಾರದಿದ್ದರೆ ಬಾಂಬ್ ದಾಳಿ ಮತ್ತು ದುಪ್ಪಟ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಎನ್‌ಬಿಸಿ ನ್ಯೂಸ್‌ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, 'ಅಮೆರಿಕ ಮತ್ತು ಇರಾನಿನ ಅಧಿಕಾರಿಗಳು ಮಾತನಾಡುತ್ತಿದ್ದಾರೆ. ಇರಾನ್ ತನ್ನ ಪರಮಾಣು ಯೋಜನೆಗಳನ್ನು ಮುಂದುವರೆಸಬಾರದು. ಕೂಡಲೇ ಅವುಗಳನ್ನು ನಿಲ್ಲಿಸಬೇಕು ಎಂಬುದು ನಿಲುವಾಗಿದೆ ಎಂದು ಟ್ರಂಪ್ ಹೇಳಿದರು.

Donald Trump
Video: ಉಡಾವಣೆಯಾದ ಕೇವಲ 40 ಸೆಕೆಂಡ್ ನಲ್ಲೇ ಜರ್ಮನಿ ಬಾಹ್ಯಾಕಾಶ ರಾಕೆಟ್ ಸ್ಫೋಟ

ಸಹಿ ಹಾಕದಿದ್ದರೆ ಬಾಂಬ್ ಹಾಕ್ತೀನಿ

ಇದೇ ವೇಳೆ ಇರಾನ್ ತನ್ನ ಜೊತೆ ಒಪ್ಪಂದ ಮಾಡಿಕೊಳ್ಳದಿದ್ದರೆ, ಬಾಂಬ್ ದಾಳಿ ನಡೆಯಲಿದೆ ಎಂದ ಟ್ರಂಪ್, "ಇರಾನ್ ಒಪ್ಪಂದ ಮಾಡಿಕೊಳ್ಳದಿದ್ದರೆ, ನಾನು ನಾಲ್ಕು ವರ್ಷಗಳ ಹಿಂದೆ ಮಾಡಿದಂತೆ ಅವರ ಅವರ ವಿರುದ್ಧ ದ್ವಿತೀಯ ಸುಂಕ ವಿಧಿಸುವ ಅವಕಾಶವಿದೆ ಎಂದು ಹೇಳಿದರು.

ಇರಾನ್ ವಿರುದ್ಧ ಟ್ರಂಪ್ ಕ್ರಮ ಮೊದಲೇನಲ್ಲ

2017-21ರ ತಮ್ಮ ಮೊದಲ ಅವಧಿಯಲ್ಲಿ, ಟ್ರಂಪ್ ತಮ್ಮ ಮೊದಲ ಅವಧಿಯಲ್ಲೂ, ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಅಮೆರಿಕ ಹೇರಿದ್ದ ನಿರ್ಬಂಧಗಳ ಪರಿಹಾರಕ್ಕಾಗಿ ಇರಾನ್ ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಲಾಗಿತ್ತು. ಅಲ್ಲಗೆ ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015 ರ ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿದಿತ್ತು. ಮಾತ್ರವಲ್ಲದೇ ಟ್ರಂಪ್ ಕೂಡ ಅಮೆರಿಕದ ವ್ಯಾಪಕ ನಿರ್ಬಂಧಗಳನ್ನು ಮತ್ತೆ ಇರಾನ್ ಮೇಲೆ ಹೇರಿದರು.

Donald Trump
ಮತ್ತೊಂದು ಭೀಕರ ಅಪಘಾತ: ಮನೆಗೆ ಅಪ್ಪಳಿಸಿದ ವಿಮಾನ, ಎಲ್ಲಾ ಪ್ರಯಾಣಿಕರು ಸಾವು! Video

ಪರಮಾಣು ಯೋಜನೆಗೆ ಇರಾನ್ ವೇಗ

ಅತ್ತ ಟ್ರಂಪ್ ಇರಾನ್ ಮೇಲೆ ಕ್ರಮ ಕೈಗೊಳ್ಳತ್ತಲೇ ಇತ್ತ ಇಸ್ಲಾಮಿಕ್ ಗಣರಾಜ್ಯ ದೇಶ ಇರಾನ್ ಕೂರ ತನ್ನ ಪರಮಾಣು ಯೋಜನೆಗಳಿಗೆ ವೇಗ ನೀಡಿತು. ಯುರೇನಿಯಂ ಪುಷ್ಟೀಕರಣದ ತನ್ನ ಉಲ್ಬಣಗೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ಒಪ್ಪಿಕೊಂಡ ಮಿತಿಗಳನ್ನು ಮೀರಿತು. ಒಪ್ಪಂದ ಮಾಡಿಕೊಳ್ಳಿ ಅಥವಾ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಅವರ ಎಚ್ಚರಿಕೆಯನ್ನೂ ಇರಾನ್ ಇಲ್ಲಿಯವರೆಗೆ ತಿರಸ್ಕರಿಸಿದೆ.

ಹೊಸ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳುವಂತೆ ಟೆಹ್ರಾನ್‌ಗೆ ಒತ್ತಾಯಿಸುವ ಟ್ರಂಪ್ ಅವರ ಪತ್ರಕ್ಕೆ ಇರಾನ್ ಒಮಾನ್ ಮೂಲಕ ಪ್ರತಿಕ್ರಿಯೆಯನ್ನು ಕಳುಹಿಸಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಗುರುವಾರ ಅಧಿಕೃತ ಐಆರ್‌ಎನ್‌ಎ ಸುದ್ದಿ ಸಂಸ್ಥೆ ಹೇಳಿರುವುದಾಗಿ ಉಲ್ಲೇಖಿಸಿದೆ.

ಆರೋಪ-ಸ್ಪಷ್ಟನೆ

ನಾಗರಿಕ ಪರಮಾಣು ಇಂಧನ ಕಾರ್ಯಕ್ರಮಕ್ಕೆ ಸಮರ್ಥನೀಯವೆಂದು ಹೇಳುವುದಕ್ಕಿಂತ ಹೆಚ್ಚಿನ ಮಟ್ಟದ ವಿದಳನ ಶುದ್ಧತೆಗೆ ಯುರೇನಿಯಂ ಅನ್ನು ಪುಷ್ಟೀಕರಿಸುವ ಮೂಲಕ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ರಹಸ್ಯ ಕಾರ್ಯಸೂಚಿಯನ್ನು ಇರಾನ್ ಹೊಂದಿದೆ ಎಂದು ಪಾಶ್ಚಿಮಾತ್ಯ ಶಕ್ತಿಗಳು ಆರೋಪಿಸುತ್ತವೆ. ಆದರೆ ತನ್ನ ಪರಮಾಣು ಕಾರ್ಯಕ್ರಮವು ಸಂಪೂರ್ಣವಾಗಿ ನಾಗರಿಕ ಇಂಧನ ಉದ್ದೇಶಗಳಿಗಾಗಿ ಮಾತ್ರ ನಡೆಸಲಾಗುತ್ತಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com