ಅಪರೂಪದ ಭೂ ಖನಿಜ ಒಪ್ಪಂದ: ಅಮೆರಿಕ-ಉಕ್ರೇನ್ ಸಹಿ

ಜನವರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ, ಅಮೆರಿಕ ಮತ್ತು ಉಕ್ರೇನ್ ನೈಸರ್ಗಿಕ ಸಂಪನ್ಮೂಲಗಳ ಕುರಿತು ಒಪ್ಪಂದಕ್ಕೆ ಸಹಿ ಹಾಕಲು ಪ್ರಯತ್ನಿಸುತ್ತಿವೆ.
ಅಪರೂಪದ ಭೂ ಖನಿಜ ಒಪ್ಪಂದ: ಅಮೆರಿಕ-ಉಕ್ರೇನ್ ಸಹಿ
Updated on

ವಾಷಿಂಗ್ಟನ್: ಅಮೆರಿಕ ಮತ್ತು ಉಕ್ರೇನ್ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಉಕ್ರೇನ್‌ನ ಅಪರೂಪದ ಭೂ ಖನಿಜಗಳನ್ನು ಪಡೆಯಲು ಅಮೆರಿಕಕ್ಕೆ ಅವಕಾಶ ನೀಡಿದೆ. ಇದಕ್ಕೆ ಪ್ರತಿಯಾಗಿ ದೇಶದಲ್ಲಿ ಹೂಡಿಕೆ ನಿಧಿಯನ್ನು ರಚಿಸುವುದಕ್ಕೆ ಉಕ್ರೇನ್ ಗೆ ಅಮೆರಿಕ ಅವಕಾಶ ನೀಡಿದೆ.

ಜನವರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ, ಅಮೆರಿಕ ಮತ್ತು ಉಕ್ರೇನ್ ನೈಸರ್ಗಿಕ ಸಂಪನ್ಮೂಲಗಳ ಕುರಿತು ಒಪ್ಪಂದಕ್ಕೆ ಸಹಿ ಹಾಕಲು ಪ್ರಯತ್ನಿಸುತ್ತಿವೆ. ಎರಡು ರಾಷ್ಟ್ರಗಳ ನಡುವಿನ ಒಪ್ಪಂದವು ಇತ್ತೀಚೆಗೆ ಉಭಯ ನಾಯಕರ ಮಧ್ಯೆ ನಡೆದ ಚರ್ಚೆಗಳ ನಂತರ ಮಹತ್ವದ ಬೆಳವಣಿಗೆ ನಡೆದಿದೆ.

ಆರ್ಥಿಕ ಪಾಲುದಾರಿಕೆ ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಮೊನ್ನೆ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಯುಎಸ್ ವಾಣಿಜ್ಯ ಇಲಾಖೆ ತಿಳಿಸಿದೆ.ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಅಧ್ಯಕ್ಷರು ಹೇಳಿದಂತೆ, ಅಮೆರಿಕ ಉಕ್ರೇನ್ ಗೆ ಸಹಾಯ ಮಾಡಲು ಬದ್ಧವಾಗಿದೆ. ಈ ಒಪ್ಪಂದವು ಟ್ರಂಪ್ ಆಡಳಿತವು ದೀರ್ಘಾವಧಿಯಲ್ಲಿ ಮುಕ್ತ, ಸಾರ್ವಭೌಮ ಮತ್ತು ಸಮೃದ್ಧ ಉಕ್ರೇನ್ ನ್ನು ಕೇಂದ್ರೀಕರಿಸಿದ ಶಾಂತಿ ಪ್ರಕ್ರಿಯೆಗೆ ಬದ್ಧವಾಗಿದೆ ಎಂದು ರಷ್ಯಾಕ್ಕೆ ಸ್ಪಷ್ಟವಾಗಿ ಸಂದೇಶ ರವಾನಿಸುತ್ತದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಅಪರೂಪದ ಭೂ ಖನಿಜ ಒಪ್ಪಂದ: ಅಮೆರಿಕ-ಉಕ್ರೇನ್ ಸಹಿ
ಉಕ್ರೇನ್ ನಲ್ಲಿ 30 ದಿನಗಳ ಕದನ ವಿರಾಮಕ್ಕೆ ಅಮೆರಿಕ ಪ್ರಸ್ತಾವನೆ: ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು?

ಉಕ್ರೇನ್ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಲು ಉಕ್ರೇನ್‌ನ ಆರ್ಥಿಕ ಸಚಿವೆ ಯೂಲಿಯಾ ಸ್ವೈರಿಡೆಂಕೊ ಅಮೆರಿಕದಲ್ಲಿದ್ದರು.ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಉಕ್ರೇನ್ ಸರ್ಕಾರದ ಪರವಾಗಿ, ನಾನು ಯುನೈಟೆಡ್ ಸ್ಟೇಟ್ಸ್-ಉಕ್ರೇನ್ ಪುನರ್ನಿರ್ಮಾಣ ಹೂಡಿಕೆ ನಿಧಿಯ ಸ್ಥಾಪನೆಯ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ಯುನೈಟೆಡ್ ಸ್ಟೇಟ್ಸ್ ಜೊತೆಗೆ, ನಮ್ಮ ದೇಶಕ್ಕೆ ಜಾಗತಿಕ ಹೂಡಿಕೆಯನ್ನು ಆಕರ್ಷಿಸುವ ನಿಧಿಯನ್ನು ನಾವು ರಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿತ್ತು. ಆದಾಗ್ಯೂ, ವಿವಾದಾತ್ಮಕ ಓವಲ್ ಆಫೀಸ್ ಸಭೆಯ ನಂತರ ಅವರ ಭೇಟಿಯನ್ನು ಮೊಟಕುಗೊಳಿಸಿದ ನಂತರ ಒಪ್ಪಂದಕ್ಕೆ ಸಹಿ ಹಾಕಲಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com