ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಕುರಿತು UNSC ರಹಸ್ಯ ಸಮಾಲೋಚನೆ

15 ರಾಷ್ಟ್ರಗಳ ಭದ್ರತಾ ಮಂಡಳಿಯು ನಡೆಸಿದ ಸಮಾಲೋಚನೆ ನಿನ್ನೆ ಸೋಮವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದವು ಆದರೆ ಸಭೆಯ ನಂತರ ಭದ್ರತಾ ಮಂಡಳಿಯಿಂದ ಯಾವುದೇ ಹೇಳಿಕೆ ಹೊರಬಂದಿಲ್ಲ.
UNSC
ವಿಶ್ವಸಂಸ್ಥೆ ಭದ್ರತಾ ಮಂಡಳಿ
Updated on

ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರಹಸ್ಯವಾಗಿ ಸಮಾಲೋಚನೆಗಳನ್ನು ನಡೆಸಿದ್ದು, ಅಲ್ಲಿ ರಾಯಭಾರಿಗಳು ಸಂಯಮ ಕಾಪಾಡುವಂತೆ ಮತ್ತು ಪರಸ್ಪರ ಮಾತುಕತೆಗೆ ಕರೆ ನೀಡಿದ್ದಾರೆ.

15 ರಾಷ್ಟ್ರಗಳ ಭದ್ರತಾ ಮಂಡಳಿಯು ನಡೆಸಿದ ಸಮಾಲೋಚನೆ ನಿನ್ನೆ ಸೋಮವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದವು ಆದರೆ ಸಭೆಯ ನಂತರ ಭದ್ರತಾ ಮಂಡಳಿಯಿಂದ ಯಾವುದೇ ಹೇಳಿಕೆ ಹೊರಬಂದಿಲ್ಲ.

ಪ್ರಸ್ತುತ ಪ್ರಬಲ ಮಂಡಳಿಯ ಖಾಯಂ ಸದಸ್ಯನಲ್ಲದ ಪಾಕಿಸ್ತಾನವು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆ ದೇಶಗಳ ಪರಿಸ್ಥಿತಿಯ ಕುರಿತು ರಹಸ್ಯ ಸಮಾಲೋಚನೆ ನಡೆಸುವಂತೆ ಮನವಿ ಮಾಡಿಕೊಂಡಿತ್ತು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ಸಭೆಯ ನಂತರ ವರದಿಗಾರರಿಗೆ ಮಾಹಿತಿ ನೀಡಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಮಂಡಳಿ ಸದಸ್ಯರು ಚರ್ಚೆ ನಡೆಸಲು ಮತ್ತು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದಾದ ಸಂಭಾವ್ಯ ದಾಳಿಯನ್ನು ತಪ್ಪಿಸುವುದು ಸೇರಿದಂತೆ ಪರಿಸ್ಥಿತಿಯನ್ನು ಹೇಗೆ ಪರಿಹರಿಸುವುದು ಎಂಬುದರ ಕುರಿತು ಅಭಿಪ್ರಾಯಗಳ ವಿನಿಮಯ ಮಾಡಿಕೊಳ್ಳಲು ರಹಸ್ಯ ಸಮಾಲೋಚನೆಗಳನ್ನು ನಡೆಸಿದರು.

ಮೇ ತಿಂಗಳಿನ ಕೌನ್ಸಿಲ್‌ನ ಅಧ್ಯಕ್ಷರಾಗಿರುವ ಗ್ರೀಸ್ ನಿನ್ನೆ ಸಭೆ ನಿಗದಿಪಡಿಸಿದ್ದರು. ರಹಸ್ಯ ಸಭೆಯು UNSC ಚೇಂಬರ್‌ನಲ್ಲಿ ನಡೆಯಲಿಲ್ಲ, ರಾಜಕೀಯ ಮತ್ತು ಶಾಂತಿ ನಿರ್ಮಾಣ ವ್ಯವಹಾರಗಳು ಮತ್ತು ಶಾಂತಿ ಕಾರ್ಯಾಚರಣೆ ಇಲಾಖೆಗಳಲ್ಲಿ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಪೆಸಿಫಿಕ್‌ನ ಸಹಾಯಕ ಪ್ರಧಾನ ಕಾರ್ಯದರ್ಶಿ ಟುನೀಶಿಯಾದ ಖಲೀದ್ ಮೊಹಮ್ಮದ್ ಖಿಯಾರಿ ಎರಡೂ ಇಲಾಖೆಗಳ (DPPA ಮತ್ತು DPO) ಪರವಾಗಿ ಕೌನ್ಸಿಲ್‌ಗೆ ವಿವರಿಸಿದರು.

ವಿಶ್ವಸಂಸ್ಥೆಗೆ ಗ್ರೀಸ್‌ನ ಖಾಯಂ ಪ್ರತಿನಿಧಿ ಮತ್ತು ಮೇ ತಿಂಗಳಿನ ಭದ್ರತಾ ಮಂಡಳಿಯ ಅಧ್ಯಕ್ಷ ರಾಯಭಾರಿ ಇವಾಂಜೆಲೋಸ್ ಸೆಕೆರಿಸ್ ಸಭೆ ಫಲಪ್ರದವಾಗಿತ್ತು ಎಂದು ಬಣ್ಣಿಸಿದ್ದಾರೆ. ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಕೌನ್ಸಿಲ್‌ನ ಪಾತ್ರದ ಕುರಿತು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಭದ್ರತಾ ಮಂಡಳಿಯು ಯಾವಾಗಲೂ ಅಂತಹ ಪ್ರಯತ್ನಗಳಲ್ಲಿ ಸಹಾಯಕವಾಗಿದೆ ಎಂದು ಸೆಕೆರಿಸ್ ಹೇಳಿದರು.

UNSC
ಭಾರತ-ಪಾಕ್ ಯುದ್ಧ ಭೀತಿ: ದಯವಿಟ್ಟು ಆ ತಪ್ಪು ಮಾಡಬೇಡಿ... ಹಿಂದೂಗಳ ಹತ್ಯೆ ಖಂಡಿಸಿದ ವಿಶ್ವಸಂಸ್ಥೆಯ ಮುಖ್ಯಸ್ಥ ಗುಟೆರೆಸ್!

ಏಪ್ರಿಲ್ 22 ರಂದು ಜಮ್ಮು- ಕಾಶ್ಮೀರದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನೇಪಾಳಿ ನಾಗರಿಕ ಸೇರಿದಂತೆ 26 ನಾಗರಿಕರನ್ನು ಕೊಂದ ನಂತರ ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ನಿನ್ನೆ ಬೆಳಗ್ಗೆ ಯುಎನ್‌ಎಸ್‌ಸಿ ಚರ್ಚೆಯಲ್ಲಿ ಗುಟೆರೆಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

ಭದ್ರತಾ ಮಂಡಳಿಯ ಹಸ್ತಕ್ಷೇಪವನ್ನು ಕೋರುವ ಪಾಕಿಸ್ತಾನದ ಪ್ರಯತ್ನಗಳನ್ನು ಭಾರತೀಯ ರಾಜತಾಂತ್ರಿಕತೆ ಮತ್ತೊಮ್ಮೆ ಯಶಸ್ವಿಯಾಗಿ ತಡೆದಿದೆ. ಭದ್ರತಾ ಮಂಡಳಿಯಲ್ಲಿ ಐದು ವೀಟೋ-ಚಾಲಿತ ಖಾಯಂ ಸದಸ್ಯರಾದ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ಹೊರತುಪಡಿಸಿ ಕೌನ್ಸಿಲ್‌ನಲ್ಲಿರುವ 10 ಖಾಯಂ ಸದಸ್ಯರೆಂದರೆ ಅಲ್ಜೀರಿಯಾ, ಡೆನ್ಮಾರ್ಕ್, ಗ್ರೀಸ್, ಗಯಾನಾ, ಪಾಕಿಸ್ತಾನ, ಪನಾಮ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ಸೊಮಾಲಿಯಾ ಆಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com