
ಇಸ್ಲಾಮಾಬಾದ್: ಭಾರತದೊಂದಿಗಿನ ಇತ್ತೀಚಿನ ಮಿಲಿಟರಿ ಘರ್ಷಣೆಯಲ್ಲಿ 11 ಸೈನಿಕರು ಮೃತಪಟ್ಟು 78 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮಂಗಳವಾರ ಘೋಷಿಸಿದೆ.
ಮೇ 6-7ರ ರಾತ್ರಿ ಭಾರತ ನಡೆಸಿದ ಅಪ್ರಚೋದಿತ ಮತ್ತು ಖಂಡನೀಯ ಹೇಯ ದಾಳಿಗಳಲ್ಲಿ 40 ನಾಗರಿಕರು ಮೃತಪಟ್ಟಿದ್ದಾರೆ, 121 ಜನರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಶನಿವಾರ ಒಪ್ಪಂದಕ್ಕೆ ಬಂದವು.
ಮಾತೃಭೂಮಿಯನ್ನು ರಕ್ಷಿಸುವಾಗ, ಪಾಕಿಸ್ತಾನದ ಸಶಸ್ತ್ರ ಪಡೆಗಳ 11 ಸಿಬ್ಬಂದಿ ಮೃತಪಟ್ಟು 78 ಜನರು ಗಾಯಗೊಂಡರು ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಮೃತರಾದ ಪಾಕ್ ಸೇನೆಯ ಸಿಬ್ಬಂದಿಗಳಲ್ಲಿ ಪಾಕಿಸ್ತಾನ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್, ಮುಖ್ಯ ತಂತ್ರಜ್ಞ ಔರಂಗಜೇಬ್, ಹಿರಿಯ ತಂತ್ರಜ್ಞ ನಜೀಬ್, ಕಾರ್ಪೋರಲ್ ತಂತ್ರಜ್ಞ ಫಾರೂಕ್ ಮತ್ತು ಹಿರಿಯ ತಂತ್ರಜ್ಞ ಮುಬಾಶಿರ್ ಸೇರಿದ್ದಾರೆ.
ದಾಳಿಯಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿಗಳಲ್ಲಿ ನಾಯಕ್ ಅಬ್ದುಲ್ ರೆಹಮಾನ್, ಲ್ಯಾನ್ಸ್ ನಾಯಕ್ ದಿಲಾವರ್ ಖಾನ್, ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ, ನಾಯಕ್ ವಕಾರ್ ಖಾಲಿದ್, ಸಿಪಾಯಿ ಮುಹಮ್ಮದ್ ಅದೀಲ್ ಅಕ್ಬರ್ ಮತ್ತು ಸಿಪಾಯಿ ನಿಸಾರ್ ಸೇರಿದ್ದಾರೆ ಎಂದು ಅದು ಹೇಳಿದೆ.
ಪಾಕಿಸ್ತಾನ ಸಶಸ್ತ್ರ ಪಡೆಗಳು ಮರ್ಕಾ-ಎ-ಹಕ್' ಬ್ಯಾನರ್ ಅಡಿಯಲ್ಲಿ ಪ್ರತಿದಾಳಿ ನಡೆಸಿದ್ದಾರೆ, ಆಪರೇಷನ್ ಬನ್ಯಾನಮ್ ಮರ್ಸೂಸ್ ಮೂಲಕ ನಿಖರ ಮತ್ತು ತೀಕ್ಷ್ಣವಾದ ಪ್ರತೀಕಾರದ ದಾಳಿಗಳನ್ನು ನೀಡಿತು ಎಂದು ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದೆ. ಪಾಕಿಸ್ತಾನದ ಸಶಸ್ತ್ರ ಪಡೆಗಳು, ಪಾಕಿಸ್ತಾನದ ಜನರೊಂದಿಗೆ, ಮೃತ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಗೆ ಗೌರವ ಸಲ್ಲಿಸುತ್ತೇವೆ ಎಂದರು.
ಯಾವುದೇ ಅಸ್ಪಷ್ಟತೆ ಇರಬಾರದು: ಪಾಕಿಸ್ತಾನದ ಸಾರ್ವಭೌಮತ್ವ ಅಥವಾ ಪ್ರಾದೇಶಿಕ ಸಮಗ್ರತೆಯನ್ನು ಪ್ರಶ್ನಿಸುವ ಯಾವುದೇ ಪ್ರಯತ್ನವನ್ನು, ಮತ್ತೊಮ್ಮೆ, ತ್ವರಿತ, ನಿರ್ಣಾಯಕ ಪ್ರತಿಕ್ರಿಯೆಯೊಂದಿಗೆ ಎದುರಿಸಲಾಗುವುದು ಎಂದು ಪಾಕಿಸ್ತಾನ ಹೇಳಿದೆ.
Advertisement