ನಾನು ಮಧ್ಯಸ್ಥಿಕೆ ವಹಿಸಿಲ್ಲ: India-Pakistan ಕದನ ವಿರಾಮ ಹೇಳಿಕೆ ಕುರಿತು Donald Trump ಯೂಟರ್ನ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷವನ್ನು ಕೊನೆಗೊಳಿಸಲು ನೇರವಾಗಿ ಮಧ್ಯಸ್ಥಿಕೆ ವಹಿಸಿದ್ದಾಗಿ ಕಳೆದ ವಾರ ನೀಡಿದ್ದ ಹೇಳಿಕೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ.
ನಾನು ಮಧ್ಯಸ್ಥಿಕೆ ವಹಿಸಿಲ್ಲ: India-Pakistan ಕದನ ವಿರಾಮ ಹೇಳಿಕೆ ಕುರಿತು Donald Trump ಯೂಟರ್ನ್!
Updated on

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷವನ್ನು ಕೊನೆಗೊಳಿಸಲು ನೇರವಾಗಿ ಮಧ್ಯಸ್ಥಿಕೆ ವಹಿಸಿದ್ದಾಗಿ ಕಳೆದ ವಾರ ನೀಡಿದ್ದ ಹೇಳಿಕೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ. ಕತಾರ್‌ನ ಅಲ್-ಉದೈದ್ ವಾಯುನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, "ನಾನು ಮಧ್ಯಸ್ಥಿಕೆ ವಹಿಸಿಲ್ಲ, ಆದರೆ ಕದನ ವಿರಾಮಕ್ಕೆ ಸಹಾಯ ಮಾಡಿದೆ" ಎಂದು ಹೇಳಿದ್ದಾರೆ. ಅಮೆರಿಕದ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಎರಡು ನೆರೆಯ ರಾಷ್ಟ್ರಗಳ ನಡುವಿನ ದ್ವೇಷ ಮುಗಿದಿದೆ. ಅದರ ಬಗ್ಗೆ ಅವರೂ ಸಂತೋಷಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಂಘರ್ಷಗಳನ್ನು ಕೊನೆಗೊಳಿಸುವುದು ತಮ್ಮ ಆದ್ಯತೆಯಾಗಿದ್ದು ಅವುಗಳನ್ನು ಪ್ರಾರಂಭಿಸುವುದಲ್ಲ ಎಂದು ಹೇಳಿದರು.

ಮೇ 10ರಂದು, ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷದ ಮಧ್ಯೆ, ಟ್ರಂಪ್ ಟ್ರುತ್ ಸೋಶಿಯಲ್ ಪೋಸ್ಟ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ರಾತ್ರಿಯ ಮಾತುಕತೆಯ ನಂತರ, ಎರಡೂ ದೇಶಗಳು ಸಂಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದರು. ನಂತರ, ಭಾರತದ ವಿದೇಶಾಂಗ ಸಚಿವಾಲಯ ಅವರ ಹೇಳಿಕೆಯನ್ನು ನಿರಾಕರಿಸಿತು. ಸೇನಾ ಕದನ ವಿರಾಮವು ಎರಡೂ ದೇಶಗಳ ನಡುವಿನ ಡಿಜಿಎಂಒ ಮಟ್ಟದ ಮಾತುಕತೆಯ ಪರಿಣಾಮವಾಗಿದೆ ಎಂದು ಹೇಳಿತ್ತು. ಪಾಕಿಸ್ತಾನದ ಡಿಜಿಎಂಒ ಭಾರತೀಯ ಸಹವರ್ತಿಯಿಂದ ಕದನ ವಿರಾಮಕ್ಕೆ ಮನವಿ ಮಾಡಿದ ನಂತರ ಕದನ ವಿರಾಮ ನಡೆದಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತ್ತು. ಪಾಕಿಸ್ತಾನದ ಪ್ರಮುಖ ಮಿಲಿಟರಿ ಸ್ಥಾಪನೆಗಳು ಮತ್ತು ವಾಯುನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡ ನಂತರ ಪಾಕಿಸ್ತಾನ ಕದನ ವಿರಾಮಕ್ಕೆ ಮುಂದಾಗಿತ್ತು.

ನಾನು ಮಧ್ಯಸ್ಥಿಕೆ ವಹಿಸಿಲ್ಲ: India-Pakistan ಕದನ ವಿರಾಮ ಹೇಳಿಕೆ ಕುರಿತು Donald Trump ಯೂಟರ್ನ್!
ಯುಎಸ್-ಭಾರತ ಸಂಬಂಧದಲ್ಲಿ ಬಿರುಕು?: ಅವರ ದಾರಿ ಅವರಿಗೆ, ನೀವೇನು ಭಾರತದಲ್ಲಿ ಹೂಡಿಕೆ ಮಾಡ್ಬೇಡಿ; Apple CEO ಗೆ ಟ್ರಂಪ್ ಒತ್ತಡ! Video

ಮೇ 13 ರಂದು, ಟ್ರಂಪ್ ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಉತ್ತಮ ಭೋಜನ ಮಾಡಬಹುದು ಎಂದು ಹೇಳಿದ್ದರು. ಆದರೆ ಅವರ ಆಡಳಿತವು ವ್ಯಾಪಾರದ ಮೂಲಕ ಉಭಯ ದೇಶಗಳ ನಡುವೆ ಐತಿಹಾಸಿಕ ಕದನ ವಿರಾಮವನ್ನು ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿದರು. ಉಭಯ ದೇಶಗಳು ನಿಜವಾಗಿಯೂ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದಾರೆ ಎಂದು ಟ್ರಂಪ್ ಅವರು ಪಶ್ಚಿಮ ಏಷ್ಯಾದ ರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೌದಿ ಅರೇಬಿಯಾ-ಯುಎಸ್ ಹೂಡಿಕೆ ವೇದಿಕೆ 2025ರಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com