ಯುಎಸ್-ಭಾರತ ಸಂಬಂಧದಲ್ಲಿ ಬಿರುಕು?: ಅವರ ದಾರಿ ಅವರಿಗೆ, ನೀವೇನು ಭಾರತದಲ್ಲಿ ಹೂಡಿಕೆ ಮಾಡ್ಬೇಡಿ; Apple CEO ಗೆ ಟ್ರಂಪ್ ಒತ್ತಡ! Video

ಭಾರತದವರು ಅವರ ದಾರಿ ಅವರು ನೋಡಿಕೊಳ್ಳುತ್ತಾರೆ, ನೀವು ಭಾರತದಲ್ಲಿ ಹೂಡಿಕೆ ಮಾಡಬೇಡಿ ಎಂದು ಟಿಮ್ ಕುಕ್ ಗೆ ಟ್ರಂಪ್ ಒತ್ತಡ ಹೇರಿದ್ದಾರೆ.
 Tim Cook with Donald Trump
ಟಿಮ್ ಕುಕ್ ಜೊತೆ ಡೊನಾಲ್ಡ್ ಟ್ರಂಪ್online desk
Updated on

ದೋಹಾ: ಭಾರತ ಪಾಕ್ ವಿರುದ್ಧ ನಡೆಸಿದ್ದ ಸೇನಾ ಕಾರ್ಯಾಚರಣೆ ವಿಷಯದಲ್ಲಿ ಮಧ್ಯಪ್ರವೇಶಿಸಿ ಕದನ ವಿರಾಮದ ಬಗ್ಗೆ ಘೋಷಣೆ ಮಾಡಿ ಭಾರತಕ್ಕೆ ಮುಜುಗರ ಉಂಟು ಮಾಡಿದ್ದ ಬಳಿಕ ಈಗ ಭಾರತದ ಬಗ್ಗೆ ಮತ್ತೊಂದು ನಕಾರಾತ್ಮಕ ನಿರ್ಧಾರಕ್ಕೆ Apple CEO ಟಿಮ್ ಕುಕ್ ಅವರನ್ನು ಟ್ರಂಪ್ ಒತ್ತಾಯಿಸಿದ್ದಾರೆ.

ಭಾರತದವರು ಅವರ ದಾರಿ ಅವರು ನೋಡಿಕೊಳ್ಳುತ್ತಾರೆ, ನೀವು ಭಾರತದಲ್ಲಿ ಹೂಡಿಕೆ ಮಾಡಬೇಡಿ ಎಂದು ಟಿಮ್ ಕುಕ್ ಗೆ ಟ್ರಂಪ್ ಒತ್ತಡ ಹೇರಿದ್ದಾರೆ.

ದೋಹಾದಲ್ಲಿ ನಡೆದ ಉದ್ಯಮ ಕಾರ್ಯಕ್ರಮದಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ನನಗೆ ಟಿಮ್ ಕುಕ್ ಜೊತೆ ಸ್ವಲ್ಪ ಸಮಸ್ಯೆ ಇದೆ. ನಾನು ಆತನಿಗೆ ಹೇಳುತ್ತಿದ್ದೇನೆ, ನನ್ನ ಸ್ನೇಹಿತ, ನಿಮ್ಮನ್ನು ನಾನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದೇನೆ. ನೀವು 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದ್ದೀರಿ, ಆದರೆ ಅದನ್ನು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಂಡೆ. ನೀವು ಭಾರತದಲ್ಲಿ ಹೂಡಿಕೆ ಮಾಡುವುದು ಬೇಡ, ನೀವು ಭಾರತವನ್ನು ನೋಡಿಕೊಳ್ಳಲು ಬಯಸಿದರೆ, ನೀವು ಭಾರತದಲ್ಲಿ ಹೂಡಿಕೆ ಮಾಡಬಹುದು, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆದ್ದರಿಂದ ಭಾರತದಲ್ಲಿ ಮಾರಾಟ ಮಾಡುವುದು ತುಂಬಾ ಕಷ್ಟ" ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಇತ್ತೀಚೆಗೆ ಅಮೆರಿಕ ಉತ್ಪನ್ನಗಳಿಗೆ ಹೆಚ್ಚಿನ ಸುಂಕ ವಿಧಿಸದೇ ಇರುವ ಪ್ರಸ್ತಾವನೆಯನ್ನು ಭಾರತ ಮುಂದಿಟ್ಟಿತ್ತು. ಆದರೆ ಈ ಬಗ್ಗೆ ಭಾರತ ಈ ವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ. ನೀವು ಚೀನಾದಲ್ಲಿ ವರ್ಷಗಳಿಂದ ನಿರ್ಮಿಸಿದ ಎಲ್ಲಾ ಸ್ಥಾವರಗಳನ್ನು ನಾವು ಸಹಿಸಿಕೊಂಡಿದ್ದೇವೆ. ನೀವು ಭಾರತದಲ್ಲಿ ನಿರ್ಮಿಸುವುದರಲ್ಲಿ ನಮಗೆ ಆಸಕ್ತಿ ಇಲ್ಲ. ಭಾರತ ತನ್ನನ್ನು ತಾನು ನೋಡಿಕೊಳ್ಳುತ್ತದೆ" ಎಂದು ಟ್ರಂಪ್ ಹೇಳಿದ್ದಾರೆ.

ಐಫೋನ್‌ಗಳು ಮತ್ತು ಮ್ಯಾಕ್‌ಬುಕ್‌ಗಳನ್ನು ಪ್ರಪಂಚದಾದ್ಯಂತ ಬೇಡಿಕೆಯಲ್ಲಿರುವ ಆಪಲ್, ಅಮೆರಿಕದಲ್ಲಿ ತನ್ನ ಉತ್ಪಾದನೆಯನ್ನು ವಿಸ್ತರಿಸಲು ಸಜ್ಜಾಗಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಇದೇ ವೇಳೆ ಹೇಳಿದ್ದಾರೆ.

ಭಾರತದಲ್ಲಿ ಉತ್ಪಾದನೆಯ ವಿರುದ್ಧ ಡೊನಾಲ್ಡ್ ಟ್ರಂಪ್ ಆಪಲ್‌ಗೆ ಈ ಸಲಹೆ ನೀಡಿರುವುದು, ಐಫೋನ್ ತಯಾರಕ ಕಂಪನಿಯು ಟ್ರಂಪ್ ಆಡಳಿತದ ಸುಂಕದ ಕ್ರಮವನ್ನು ನಿಭಾಯಿಸಲು ತನ್ನ ಭಾರತದ ಉತ್ಪಾದನೆಯನ್ನು ವಿಸ್ತರಿಸಲು ಮತ್ತು ಚೀನಾದಿಂದ ತನ್ನ ಉತ್ಪಾದನೆಯನ್ನು ಸ್ಥಳಾಂತರಿಸಲು ಯೋಜಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ಬಂದಿದೆ.

 Tim Cook with Donald Trump
ಹಾರುವ ಅರಮನೆ: ಕತಾರ್ ರಾಜಮನೆತನದಿಂದ Trump ಗೆ 400 ಮಿಲಿಯನ್ ಡಾಲರ್ ಮೌಲ್ಯದ Boeing 747-8 ಉಡುಗೊರೆ: Air Force One ಬದಲಿಗೆ ಬಳಕೆ!

ಈ ತಿಂಗಳ ಆರಂಭದಲ್ಲಿ, ಟಿಮ್ ಕುಕ್ "ಯುಎಸ್‌ನಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳು ಭಾರತವನ್ನು ತಮ್ಮ ಮೂಲ ದೇಶವಾಗಿ ಹೊಂದಿರುತ್ತವೆ" ಎಂದು ಹೇಳಿದ್ದರು.

ಆಪಲ್ ಪ್ರಸ್ತುತ ಭಾರತದಲ್ಲಿ ಮೂರು ಸ್ಥಾವರಗಳನ್ನು ಹೊಂದಿದೆ, ಎರಡು ತಮಿಳುನಾಡಿನಲ್ಲಿ ಮತ್ತು ಒಂದು ಕರ್ನಾಟಕದಲ್ಲಿ. ಇವುಗಳಲ್ಲಿ ಒಂದನ್ನು ಫಾಕ್ಸ್‌ಕಾನ್ ನಿರ್ವಹಿಸುತ್ತದೆ ಮತ್ತು ಇನ್ನೆರಡು ಟಾಟಾ ಗ್ರೂಪ್ ನಿರ್ವಹಿಸುತ್ತದೆ. ಇನ್ನೂ ಎರಡು ಆಪಲ್ ಸ್ಥಾವರಗಳು ನಿರ್ಮಾಣ ಹಂತದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com