'ನಾವು ಮಾತನಾಡಿದೆವು, ಅವರು ನಿಲ್ಲಿಸಿದರು': ಭಾರತ-ಪಾಕಿಸ್ತಾನ ಕದನ ವಿರಾಮ ಕುರಿತು ಮತ್ತೆ ಮಾತಾಡಿದ ಡೊನಾಲ್ಡ್ ಟ್ರಂಪ್

'ಭಾರತ ಮತ್ತು ಪಾಕಿಸ್ತಾನದ ನಾಯಕರು ಹಾಗೂ ನನ್ನ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ವ್ಯಾಪಾರದ ಬಗ್ಗೆಯೂ ಮಾತನಾಡಿದ್ದೇವೆ' ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ತಾವು ನಿಲ್ಲಿಸಿದ್ದೇವೆ ಎಂಬ ತಮ್ಮ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪುನರುಚ್ಚರಿಸಿದ್ದಾರೆ. ಪರಸ್ಪರ ಹಿಂಸಾತ್ಮಕ ಸಂಘರ್ಷದಲ್ಲಿ ತೊಡಗಿರುವ ದೇಶಗಳೊಂದಿಗೆ ಅಮೆರಿಕ ವ್ಯಾಪಾರವನ್ನು ಮುಂದುವರಿಸಲು ಅಥವಾ ಉತ್ತಮ ಆರ್ಥಿಕ ಸಂಬಂಧವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಎರಡೂ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.

'ನಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇವೆ. ಸಂಘರ್ಷ ಉಲ್ಬಣಗೊಂಡಿದ್ದರೆ, ಎರಡೂ ದೇಶಗಳು ಪರಮಾಣು ಶಸ್ತ್ರಸಜ್ಜಿತವಾಗಿರುವುದರಿಂದ ಅದು ಪರಮಾಣು ವಿಪತ್ತಿಗೆ ಕಾರಣವಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ' ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಲಾನ್ ಮಸ್ಕ್ ಅವರೊಂದಿಗೆ ಮಾತನಾಡಿದರು.

ಅನಿರೀಕ್ಷಿತ ಬೆಳವಣಿಗೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಿಂದ ಸ್ಪೇಸ್ ಎಕ್ಸ್ ಮಾಲೀಕ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಮುಖ್ಯಸ್ಥ ಸ್ಥಾನದಿಂದ ಮಸ್ಕ್ ಕೆಳಗಿಳಿದಿದ್ದಾರೆ.

'ಭಾರತ ಮತ್ತು ಪಾಕಿಸ್ತಾನದ ನಾಯಕರು ಹಾಗೂ ನನ್ನ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ವ್ಯಾಪಾರದ ಬಗ್ಗೆಯೂ ಮಾತನಾಡಿದ್ದೇವೆ ಮತ್ತು ಪರಸ್ಪರ ಸಂಘರ್ಷದಲ್ಲಿ ತೊಡಗಿರುವ ದೇಶಗಳೊಂದಿಗೆ ಅಮೆರಿಕ ವ್ಯಾಪಾರವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ' ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಭಾರತ- ಪಾಕಿಸ್ತಾನ ಕದನ ವಿರಾಮ: ಪರಮಾಣು ಸಂಘರ್ಷವನ್ನು ನಾವು ತಡೆದಿದ್ದೇವೆ- ಕ್ರೆಡಿಟ್ ತೆಗೆದುಕೊಂಡ ಡೊನಾಲ್ಡ್ ಟ್ರಂಪ್!

'ಭಾರತ ಮತ್ತು ಪಾಕಿಸ್ತಾನದ ನಾಯಕರು 'ಶ್ರೇಷ್ಠ ನಾಯಕರು' ಮತ್ತು ಅವರು ನಮ್ಮ ಮಾತನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಒಪ್ಪಿಕೊಂಡರು. ಬಳಿಕ ಎಲ್ಲವೂ (ಸಂಘರ್ಷ) ನಿಂತುಹೋಯಿತು' ಎಂದು ಟ್ರಂಪ್ ಹೇಳಿದರು.

'ನಾವು ಪ್ರಪಂಚದಾದ್ಯಂತ ಯುದ್ಧಗಳನ್ನು ನಿಲ್ಲಿಸಲು ಸಹಾಯ ಮಾಡುತ್ತಿದ್ದೇವೆ. ನಾವು ದುರ್ಬಲರು ಎಂಬ ಕಾರಣದಿಂದ ಅಲ್ಲ, ಬದಲಾಗಿ ನಾವು ತುಂಬಾ ಶಕ್ತಿಶಾಲಿಗಳಾಗಿರುವುದರಿಂದ. ನಾವು ಯಾವುದೇ ಹೋರಾಟವನ್ನು ಕೂಡ ಗೆಲ್ಲಬಹುದು. ನಮ್ಮಲ್ಲಿ ವಿಶ್ವದ ಶ್ರೇಷ್ಠ ಸೈನ್ಯವಿದೆ. ನಮ್ಮಲ್ಲಿ ವಿಶ್ವದ ಶ್ರೇಷ್ಠ ನಾಯಕರು ಇದ್ದಾರೆ' ಎಂದು ಟ್ರಂಪ್ ಹೇಳಿದರು.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಯ ಸುಮಾರು ಎರಡು ವಾರಗಳ ನಂತರ, ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು.

ನಾಲ್ಕು ದಿನಗಳ ಕಾಲ ನಡೆದ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ, ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಯಿತು.

ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಭೂಮಿ, ವಾಯು ಮತ್ತು ಸಮುದ್ರದಲ್ಲಿನ ಎಲ್ಲ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ಒಪ್ಪಂದಕ್ಕೆ ಬರಲಾಗಿದೆ. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ದೆಹಲಿಯಲ್ಲಿರುವ ಭಾರತದ ಸರ್ಕಾರಿ ಮೂಲಗಳು ಸಮರ್ಥಿಸಿಕೊಂಡಿವೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಇತ್ಯರ್ಥಗೊಳಿಸಲು ಅಮೆರಿಕ ಸಹಾಯ ಮಾಡಿದೆ ಎಂದು ಟ್ರಂಪ್ ಪದೇ ಪದೆ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com