ಇಸ್ಲಾಮಾಬಾದ್ ನಲ್ಲಿ 'ಆತ್ಮಾಹುತಿ ಬಾಂಬ್' ದಾಳಿ: ಭಾರತವನ್ನು ದೂಷಿಸಿದ ಪಾಕಿಸ್ತಾನ!

ಪಾಕಿಸ್ತಾನದ ರಾಜಧಾನಿಯ ಜಿಲ್ಲಾ ನ್ಯಾಯಾಲಯದ ಗೇಟ್ ಹೊರಗೆ ಮಂಗಳವಾರ ಸಂಭವಿಸಿದ ದಾಳಿಯಲ್ಲಿ ಇತರ 27 ಮಂದಿ ಗಾಯಗೊಂಡಿದ್ದಾರೆ.
Security forces are combing the scene
ಆತ್ಮಾಹುತಿ ಬಾಂಬ್ ದಾಳಿ ನಡೆದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ
Updated on

ಇಸ್ಲಾಮಾಬಾದ್: ಇಸ್ಲಾಮಾಬಾದ್ ನ ಕೋರ್ಟ್ ಕಟ್ಟಡದ ಹೊರಗಡೆ ಸೋಮವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಸಾವನ್ನಪ್ಪಿರುವುದಕ್ಕೆ ಭಾರತ ಮತ್ತು ಅಪ್ಘಾನಿಸ್ತಾನವನ್ನು ಪಾಕಿಸ್ತಾನ ದೂಷಿಸಿದೆ.

ಪಾಕಿಸ್ತಾನದ ರಾಜಧಾನಿಯ ಜಿಲ್ಲಾ ನ್ಯಾಯಾಲಯದ ಗೇಟ್ ಹೊರಗೆ ಮಂಗಳವಾರ ಸಂಭವಿಸಿದ ದಾಳಿಯಲ್ಲಿ ಇತರ 27 ಮಂದಿ ಗಾಯಗೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಒಳಾಡಳಿತ ಸಚಿವ ಮೊಹ್ಸಿನ್ ನಖ್ವಿ, ನ್ಯಾಯಾಲಯದ ಗೇಟ್ ಹೊರಗೆ ಪೊಲೀಸ್ ವಾಹನದ ಬಳಿ ಸೂಸೈಡ್ ಬಾಂಬರ್ ಒಬ್ಬ ಸ್ಪೋಟಿಸಿಕೊಂಡಿದ್ದಾನೆ. ಆತ ಕೋರ್ಟ್ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ್ದಾನೆ ಆದರೆ, ವಿಫಲವಾಗಿದ್ದು, ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಯಾವುದೇ ಪುರಾವೆ ಸಿಗದಂತೆ ಇಸ್ಲಾಮಾಬಾದ್ ಮೇಲಿನ ದಾಳಿ ಈ ಪ್ರದೇಶದಲ್ಲಿ ಭಾರತದಲ್ಲಿನ ಭಯೋತ್ಪಾದನೆಗೆ ಕೆಟ್ಟ ಉದಾಹರಣೆಯಾಗಿದೆ ಎಂದು ಪ್ರಧಾನ ಮಂತ್ರಿ ಶೆಹಬಾಜ್ ಶರೀಪ್ ಆರೋಪಿಸಿದ್ದಾರೆ. ಭಾರತದ ಇಂತಹ ಹೀನ ಸಂಚನ್ನು ವಿಶ್ವ ನಾಯಕರು ಖಂಡಿಸಬೇಕಾದ ಸಂದರ್ಭವಾಗಿದೆ ಎಂದು ಅವರು ಹೇಳಿದ್ದಾರೆ.

State of war: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ದೇಶವು ಯುದ್ಧದ ಸ್ಥಿತಿಯಲ್ಲಿದ್ದು, ಈ ದಾಳಿಯನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಬೇಕು ಎಂದಿದ್ದಾರೆ. ಇಂತಹ ವಾತಾವರಣದಲ್ಲಿ ಕಾಬೂಲ್ ಆಡಳಿತಗಾರರೊಂದಿಗೆ ಯಶಸ್ವಿ ಮಾತುಕತೆಗಾಗಿ ಹೆಚ್ಚಿನ ಭರವಸೆ ಇಡುವುದು ವ್ಯರ್ಥ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Security forces are combing the scene
ಪಾಕಿಸ್ತಾನದಲ್ಲೂ ಭೀಕರ ಸ್ಫೋಟ: ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ ಬಾಂಬ್ ಬ್ಲಾಸ್ಟ್; ಕನಿಷ್ಠ 12 ಮಂದಿ ಸಾವು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com