Video: ಜಾರ್ಜಿಯಾದಲ್ಲಿ ಟರ್ಕಿಯ ಸೇನಾ ವಿಮಾನ ಪತನ, 20 ಮಂದಿ ಸಾವು

ಅಜರ್ಬೈಜಾನ್‌ನಿಂದ ಟರ್ಕಿಗೆ ವಾಪಸಾಗುತ್ತಿದ್ದ ಟರ್ಕಿ ಸೇನೆಯ C-130 ಸಾರಿಗೆ ವಿಮಾನ ಜಾರ್ಜಿಯಾದಲ್ಲಿ ಪತನವಾಗಿದೆ.
Turkish military cargo plane crashed
ಟರ್ಕಿ ಸೇನಾ ವಿಮಾನ ಪತನ
Updated on

ಅಂಕಾರಾ: ಟರ್ಕಿ ಸೇನೆಗೆ ಸೇರಿದ ಸರಕು ಸಾಗಾಣಿಕಾ ವಿಮಾನವೊಂದು ದುರಂತ ಪತನಕ್ಕೀಡಾಗಿದ್ದು, ವಿಮಾನದಲ್ಲಿದ್ದ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಜರ್ಬೈಜಾನ್‌ನಿಂದ ಟರ್ಕಿಗೆ ವಾಪಸಾಗುತ್ತಿದ್ದ ಟರ್ಕಿ ಸೇನೆಯ C-130 ಸಾರಿಗೆ ವಿಮಾನ ಜಾರ್ಜಿಯಾದಲ್ಲಿ ಪತನವಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 20 ಮಂದಿ ಸಿಬ್ಬಂದಿ ಮತ್ತು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಮೂಲಗಳ ಪ್ರಕಾರ ವಿಮಾನವು ಅಜೆರ್ಬೈಜಾನ್‌ನ ಗಂಜಾ ವಿಮಾನ ನಿಲ್ದಾಣದಿಂದ ಹೊರಟು ಟರ್ಕಿಗೆ ತೆರಳುತ್ತಿತ್ತು. ಜಾರ್ಜಿಯಾದ ಗಡಿಯ ಸಮೀಪದಲ್ಲಿ ಅ ವಿಮಾನವು ಪೈಲಟ್ ನಿಯಂತ್ರಣ ಕಳೆದುಕೊಂಡು ಪತನವಾಗಿದೆ.

ಜಾರ್ಜಿಯಾ-ಅಜೆರ್ಬೈಜಾನ್ ಗಡಿಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಸಿಘ್ನಾಘಿ ಪ್ರಾಂತ್ಯದಲ್ಲಿಯೇ ಆ ವಿಮಾನ ಪತವಾಗಿರುವುದಾಗಿ ರಕ್ಷಣಾ ಇಲಾಖೆ ತಿಳಿಸಿದೆ. ಜಾರ್ಜಿಯಾದ ವಾಯು ಸಂಚಾರ ನಿಯಂತ್ರಣ ಸೇವೆಗಳ ಪ್ರಕಾರ, ವಿಮಾನವು ಜಾರ್ಜಿಯಾ ವಾಯುಪ್ರದೇಶವನ್ನು ಪ್ರವೇಶಿಸಿದ ತಕ್ಷಣ ರಡಾರ್‌ನಿಂದ ಕಣ್ಮರೆಯಾಗಿದೆ. ತುರ್ತು ಸೇವೆಗಳಿಂದ ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಅವರು ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ.

ಟರ್ಕಿ C-130 ವಿಮಾನವು ಜಾರ್ಜಿಯಾ ವಾಯುಪ್ರದೇಶವನ್ನು ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ, ಕಂಟ್ರೋಲ್ ರೂಂನೊಂದಿಗೆ ಎಲ್ಲಾ ರೀತಿಯ ಸಂವಹನಗಳನ್ನು ಕಡಿತಗೊಂಡವು. ಕನಿಷ್ಟಪಕ್ಷ ಅದರಲ್ಲಿನ ಪೈಲಟ್ ಗಳಿಗೆ ತುರ್ತು ಸಂದೇಶಗಳನ್ನು ಕಳುಹಿಸುವುದಕ್ಕೂ ಸಮಯ ಸಿಕ್ಕಿಲ್ಲ ಎಂದೆನಿಸುತ್ತದೆ. ಅಷ್ಟು ಬೇಗ ಆ ವಿಮಾನ ಪತನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Turkish military cargo plane crashed
ಪಾಕಿಸ್ತಾನ ಸೇನೆಯಲ್ಲಿ 'ಜಿಹಾದ್': ಅಸಿಮ್ ಮುನೀರ್ ಯಾಕಿಷ್ಟು ಹಿಂದೂ ದ್ವೇಷಿ?

ಜಾರ್ಜಿಯಾ ಜೊತೆ ಟರ್ಕಿ ಅಧ್ಯಕ್ಷರ ಚರ್ಚೆ

ಇನ್ನು ಸುದ್ದಿ ತಿಳಿದ ಕೂಡಲೇ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು, ಜಾರ್ಜಿಯಾ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.

ಅತ್ತ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಟರ್ಕಿ ಅಧ್ಯಕ್ಷರಿಗೆ ಸಂತಾಪ ಸೂಚಿಸಿದ್ದಾರೆ. ಟರ್ಕಿ ವಿದೇಶಾಂಗ ಸಚಿವ ಹಕನ್ ಫಿಡಾನ್ ಅವರು ಜಾರ್ಜಿಯಾದ ತಮ್ಮ ಸಹೋದ್ಯೋಗಿ ಮಕಾ ಬೊಚೋರಿಶ್ವಿಲಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಅಂದಹಾಗೆ C-130 ಹರ್ಕ್ಯುಲಸ್ ಸೇನಾ ಸಾರಿಗೆ ವಿಮಾನವನ್ನು ಅಮೆರಿಕಾದ ಲಾಕ್‌ಹೀಡ್ ಮಾರ್ಟಿನ್ ಕಂಪನಿ ತಯಾರಿಸಿದೆ. ಈ ವಿಮಾನಗಳು ಸಾಮಾನ್ಯವಾಗಿ ಸೇನಾ ಸಾಮಗ್ರಿಗಳನ್ನು ಸಾಗಿಸಲು ಮತ್ತು ಸೈನಿಕರನ್ನು ಸಾಗಿಸಲು ಬಳಸಲಾಗುತ್ತದೆ.

ಇವುಗಳು ತಮ್ಮ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಟರ್ಕಿ ರಕ್ಷಣಾ ಸಚಿವಾಲಯವು, ಮಾಧ್ಯಮಗಳಿಗೆ ಅಪಘಾತದ ಚಿತ್ರಗಳನ್ನು ಪ್ರಕಟಿಸದಂತೆ ಮನವಿ ಮಾಡಿದೆ. ಈ ದುರಂತದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com