‘ಭಾರತದ ಒಂದೇ ಜಿಲ್ಲೆಗೆ 2,20,000 H-1B ವೀಸಾ ಮಂಜೂರು’: ದೊಡ್ಡ ಪ್ರಮಾಣದ ಹಗರಣ, ಯುಎಸ್ ಅರ್ಥಶಾಸ್ತ್ರಜ್ಞ ಡಾ.ಡೇವ್ ಬ್ರಾಟ್ ಆರೋಪ

H-1B ವೀಸಾಗಳಲ್ಲಿ ಶೇಕಡಾ 71ರಷ್ಟು ಭಾರತದಿಂದ, ಕೇವಲ ಶೇಕಡಾ 12 ರಷ್ಟು ಚೀನಾದಿಂದ ಬರುತ್ತವೆ.
Former United States Congressman and economist, Dr. Dave Brat
ಅಮೆರಿಕದ ಮಾಜಿ ಕಾಂಗ್ರೆಸ್ಸಿಗ ಮತ್ತು ಅರ್ಥಶಾಸ್ತ್ರಜ್ಞ, ಡಾ. ಡೇವ್ ಬ್ರಾಟ್
Updated on

ಅಮೆರಿಕಾ ಸರ್ಕಾರದ H-1B ವೀಸಾ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದ ವಂಚನೆ ನಡೆದಿದೆ ಎಂದು ಯುನೈಟೆಡ್ ಸ್ಟೇಟ್ಸ್‌ನ ಮಾಜಿ ಕಾಂಗ್ರೆಸ್ ಸದಸ್ಯ ಮತ್ತು ಅರ್ಥಶಾಸ್ತ್ರಜ್ಞ ಡಾ. ಡೇವ್ ಬ್ರಾಟ್ ಆರೋಪಿಸಿದ್ದಾರೆ.

ಒಂದು ಭಾರತೀಯ ಕಾನ್ಸುಲರ್ ಜಿಲ್ಲೆ - ಚೆನ್ನೈ ವೀಸಾ ವರ್ಗದ ವಾರ್ಷಿಕ ಶಾಸನಬದ್ಧ ಮಿತಿಗಿಂತ ಎರಡು ಪಟ್ಟು ಹೆಚ್ಚಿನ ವೀಸಾ ಹೊಂದಿದೆ ಎಂಬ ಸ್ಫೋಟಕ ಆರೋಪ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತವು ಕೌಶಲ್ಯಪೂರ್ಣ-ಕೆಲಸಗಾರರ ವೀಸಾಗಳ ಪರಿಶೀಲನೆಯನ್ನು ಹೆಚ್ಚಿಸುತ್ತಿರುವ ಸಮಯದಲ್ಲಿ ಸ್ಟೀವ್ ಬ್ಯಾನನ್ ಅವರ ವಾರ್ ರೂಮ್ ಪಾಡ್‌ಕ್ಯಾಸ್ಟ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.

"H-1B ವೀಸಾಗಳಲ್ಲಿ ಶೇಕಡಾ 71ರಷ್ಟು ಭಾರತದಿಂದ ಬರುತ್ತವೆ ಮತ್ತು ಕೇವಲ ಶೇಕಡಾ 12 ರಷ್ಟು ಚೀನಾದಿಂದ ಬರುತ್ತವೆ. ಕೇವಲ 85,000 H-1B ವೀಸಾಗಳ ಮಿತಿ ಇದೆ. ಆದರೆ ಭಾರತದ ಚೆನ್ನೈಯ ಜಿಲ್ಲೆಯೊಂದರಲ್ಲಿ 2,20,000 ವೀಸಾ ವಿತರಣೆಯಾಗಿದೆ. ಅದು ಯುಎಸ್ ಕಾಂಗ್ರೆಸ್ ನಿಗದಿಪಡಿಸಿದ ಮಿತಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದ್ದು, ಇದರಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎಂದು ಟೀಕಿಸಿದ್ದಾರೆ.

Former United States Congressman and economist, Dr. Dave Brat
ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಬದಲಿಸಬೇಕಿದೆ: ಯುಎಸ್ ಅಧ್ಯಕ್ಷೀಯ ಸ್ಪರ್ಧೆ ಆಕಾಂಕ್ಷಿ ವಿವೇಕ್ ರಾಮಸ್ವಾಮಿ ಮಾತು

ವರದಿಗಳ ಪ್ರಕಾರ, ಚೆನ್ನೈನಲ್ಲಿರುವ ಯುಎಸ್ ಕಾನ್ಸುಲೇಟ್ ಕಳೆದ ವರ್ಷ ಸುಮಾರು 2,20,000 H-1B ವೀಸಾಗಳು ಮತ್ತು 1,40,000 H-4 ಅವಲಂಬಿತ ವೀಸಾಗಳನ್ನು ಪ್ರಕ್ರಿಯೆಗೊಳಿಸಿದೆ. ಕಾನ್ಸುಲೇಟ್ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ತೆಲಂಗಾಣದ ಅರ್ಜಿದಾರರಿಗೆ ಸೇವೆ ಸಲ್ಲಿಸುತ್ತದೆ. ಇದು ಜಾಗತಿಕವಾಗಿ ಅತ್ಯಂತ ಜನನಿಬಿಡ H-1B ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾಗಿದೆ.

ಇದರಿಂದ ಅಮೆರಿಕದ ನೌಕರರಿಗೆ ತೊಂದರೆಯಾಗುತ್ತದೆ ಎಂದು ಬ್ರಾಟ್ ಹೇಳಿದ್ದಾರೆ. H-1B ವೀಸಾ ಎಂದು ಹೇಳಿಕೊಂಡು ಸೋದರಸಂಬಂಧಿಗಳು, ಚಿಕ್ಕಪ್ಪ, ಅಜ್ಜಿಯಂದಿರ ಹೆಸರಲ್ಲಿ ಅರ್ಜಿ ಸಲ್ಲಿಸಿ ಬಂದರೆ ಅದು ದೊಡ್ಡ ವಂಚನೆ ಎಂದಿದ್ದಾರೆ. ಅವರು ನಿಮ್ಮ ಕುಟುಂಬದ ಕೆಲಸ ಮತ್ತು ನಿಮ್ಮ ಅಡಮಾನವನ್ನು ಕಸಿದುಕೊಂಡಂತೆ ಎಂದಿದ್ದಾರೆ.

ಅಮೆರಿಕದ ಮಾಜಿ ರಾಜತಾಂತ್ರಿಕ ಅಧಿಕಾರಿ ಕೈಗಾರಿಕೀಕರಣಗೊಂಡ ವೀಸಾ ವಂಚನೆಯನ್ನು ಉಲ್ಲೇಖಿಸಿದ್ದಾರೆ. ಬ್ರಾಟ್ ಅವರ ಹೇಳಿಕೆಗಳು ಸುಮಾರು ಎರಡು ದಶಕಗಳ ಹಿಂದೆ ಚೆನ್ನೈ ಕಾನ್ಸುಲೇಟ್‌ನಲ್ಲಿ ಸೇವೆ ಸಲ್ಲಿಸಿದ್ದ ಭಾರತೀಯ ಮೂಲದ ಅಮೆರಿಕ ವಿದೇಶಾಂಗ ಸೇವಾ ಅಧಿಕಾರಿ ಮಹ್ವಾಶ್ ಸಿದ್ದಿಕಿ ಅವರ ಹಿಂದಿನ ಆರೋಪಗಳನ್ನು ಪುಷ್ಠೀಕರಿಸುತ್ತದೆ.

ಸಿದ್ದಿಕಿ ಅವರು H-1B ಕಾರ್ಯಕ್ರಮದಲ್ಲಿ ವ್ಯಾಪಕ ಮತ್ತು ವ್ಯವಸ್ಥಿತ ವಂಚನೆಯಾಗಿದೆ ಎಂದು ಆರೋಪಿಸಿದ್ದರು. ಭಾರತೀಯ ಅರ್ಜಿದಾರರಿಗೆ ನೀಡಲಾದ ಹೆಚ್ಚಿನ ಕೆಲಸದ ವೀಸಾಗಳನ್ನು ವಂಚನೆಯಿಂದ ಪಡೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದರು.

Former United States Congressman and economist, Dr. Dave Brat
ಹೊಸ ಹೆಚ್-1 ಬಿ ವೀಸಾ ನಿಯಮಗಳಿಂದ ಅಮೆರಿಕ ಆರ್ಥಿಕತೆ, ಉದ್ಯೋಗಕ್ಕೆ ಹಾನಿ: ನಾಸ್ಕಾಮ್

2005 ರಿಂದ 2007 ರ ನಡುವೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಸಿದ್ದಿಕಿ, ಆಗ ವಿಶ್ವದ ಅತಿದೊಡ್ಡ H-1B ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾಗಿದ್ದ ತನ್ನ ಅನುಭವವನ್ನು ವಿವರಿಸಿದರು. 2024 ರಲ್ಲಿ ಮಾತ್ರ ಮಿಷನ್ 2,20,000 H-1B ವೀಸಾಗಳನ್ನು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ 1,40,000 H-4 ವೀಸಾಗಳನ್ನು ನಿರ್ಣಯಿಸಿದೆ ಎಂಬ ಹೇಳಿಕೆಗಳನ್ನು ಅವರು ಉಲ್ಲೇಖಿಸಿದ್ದಾರೆ.

ಭಾರತೀಯರಿಗೆ ನೀಡಲಾದ 80-90% ವೀಸಾಗಳು, ಮುಖ್ಯವಾಗಿ H-1B ಗಳು, ನಕಲಿ ಶೈಕ್ಷಣಿಕ ರುಜುವಾತುಗಳು ಅಥವಾ ಹೆಚ್ಚು ಕೌಶಲ್ಯಪೂರ್ಣ ಉದ್ಯೋಗದ ಅವಶ್ಯಕತೆಗಳನ್ನು ಪೂರೈಸದ ಅರ್ಜಿದಾರರು ಸೇರಿದಂತೆ ವಂಚನೆ ದಾಖಲೆಗಳನ್ನು ಒಳಗೊಂಡಿವೆ ಎಂದು ಅವರು ಆರೋಪಿಸಿದರು.

ಒಬ್ಬ ಭಾರತೀಯ-ಅಮೆರಿಕನ್ನಳಾಗಿ, ನಾನು ಇದನ್ನು ಹೇಳಲು ಇಷ್ಟಪಡುವುದಿಲ್ಲ, ಆದರೆ ಭಾರತದಲ್ಲಿ ವಂಚನೆ ಮತ್ತು ಲಂಚವು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.

ಕೆಲವು ಅರ್ಜಿದಾರರು ಅಮೇರಿಕನ್ ಅಧಿಕಾರಿಗಳ ಸಂದರ್ಶನಗಳನ್ನು ತಪ್ಪಿಸಲು ಪ್ರಯತ್ನಿಸಿದರು, ಕೆಲವೊಮ್ಮೆ ನಿಜವಾದ ಅರ್ಜಿದಾರರ ಬದಲಿಗೆ ನಕಲಿ ಅಭ್ಯರ್ಥಿಗಳು ಕಾಣಿಸಿಕೊಂಡರು. ಭಾರತದಲ್ಲಿ ಕೆಲವು ನೇಮಕಾತಿ ವ್ಯವಸ್ಥಾಪಕರು ವೀಸಾ ಅರ್ಜಿಗಳನ್ನು ಬೆಂಬಲಿಸಲು ಉದ್ಯೋಗ ನೀಡಿದರೆ ಅದಕ್ಕೆ ಪ್ರತಿಯಾಗಿ ಲಂಚ ಕೇಳಿದ್ದರು ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com