ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಅಫ್ಘಾನಿಸ್ತಾನದ ತಾಲಿಬಾನ್ ಪಡೆಗಳು ಶನಿವಾರ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ವಿರುದ್ಧ ಸಶಸ್ತ್ರ ಪ್ರತೀಕಾರವನ್ನು ಆರಂಭಿಸಿದ್ದು, ಪಾಕಿಸ್ತಾನ ತನ್ನ ನೆಲದಲ್ಲಿ ವಾಯುದಾಳಿ ನಡೆಸುತ್ತಿದೆ ಎಂದು ಆರೋಪಿಸಿವೆ.
pakistan vs Afghanistan
ಪಾಕಿಸ್ತಾನ-ಆಫ್ಘಾನಿಸ್ತಾನ ಯುದ್ಧ
Updated on

ಕಾಬುಲ್: ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನಡುವಿನ ಯುದ್ಧ ತೀವ್ರವಾಗಿದ್ದು, ಪಾಕ್ ಸೇನೆಯ ವಾಯುದಾಳಿಗೆ ಪ್ರತಿಯಾಗಿ ಆಫ್ಘಾನಿಸ್ತಾನ ಕೂಡ ಪ್ರತಿದಾಳಿ ನಡೆಸಿದೆ.

ಅಫ್ಘಾನಿಸ್ತಾನದ ತಾಲಿಬಾನ್ ಪಡೆಗಳು ಶನಿವಾರ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ವಿರುದ್ಧ ಸಶಸ್ತ್ರ ಪ್ರತೀಕಾರವನ್ನು ಆರಂಭಿಸಿದ್ದು, ಪಾಕಿಸ್ತಾನ ತನ್ನ ನೆಲದಲ್ಲಿ ವಾಯುದಾಳಿ ನಡೆಸುತ್ತಿದೆ ಎಂದು ಆರೋಪಿಸಿವೆ.

ಇತ್ತ ಪಾಕಿಸ್ತಾನದ ಬೆಹ್ರಾಂಪುರ ಜಿಲ್ಲೆಯ ಡುರಾಂಡ್ ಲೈನ್ ಬಳಿ ನಡೆದ ಪ್ರತೀಕಾರದ ದಾಳಿಯಲ್ಲಿ ಕನಿಷ್ಠ 58 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಭಾನುವಾರ ಹೇಳಿದ್ದಾರೆ.

"ಪಾಕಿಸ್ತಾನವು ತನ್ನ ನೆಲದಲ್ಲಿ ಐಸಿಸ್ ಇರುವಿಕೆಯನ್ನು ಕಡೆಗಣಿಸಿದೆ. ಅಫ್ಘಾನಿಸ್ತಾನವು ತನ್ನ ವಾಯು ಮತ್ತು ಭೂ ಗಡಿಗಳನ್ನು ರಕ್ಷಿಸುವ ಹಕ್ಕನ್ನು ಹೊಂದಿದೆ ಮತ್ತು ಯಾವುದೇ ದಾಳಿಗೆ ಉತ್ತರಿಸದೆ ಬಿಡುವುದಿಲ್ಲ. ಪಾಕಿಸ್ತಾನವು ತನ್ನ ನೆಲದಿಂದ ಅಡಗಿಕೊಂಡಿರುವ ಪ್ರಮುಖ ಐಸಿಸ್ ಸದಸ್ಯರನ್ನು ಹೊರಹಾಕಬೇಕು ಅಥವಾ ಅವರನ್ನು ಇಸ್ಲಾಮಿಕ್ ಎಮಿರೇಟ್‌ಗೆ ಹಸ್ತಾಂತರಿಸಬೇಕು. ಐಸಿಸ್ ಗುಂಪು ಅಫ್ಘಾನಿಸ್ತಾನ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಬೆದರಿಕೆಯನ್ನು ಒಡ್ಡುತ್ತಿದೆ" ಎಂದು ಮುಜಾಹಿದ್ ಹೇಳಿದರು.

pakistan vs Afghanistan
ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ತಾಲಿಬಾನ್ ನಾಯಕನ ಪ್ರಕಾರ, ಇಸ್ಲಾಮಿಕ್ ಎಮಿರೇಟ್ ತನ್ನ ಭೂಪ್ರದೇಶದಲ್ಲಿ ಅಶಾಂತಿ ಉಂಟುಮಾಡುವವರಿಂದ ಮುಕ್ತಗೊಳಿಸಿತ್ತು, ಆದರೆ ಅವರು ಪಶ್ತುಂಖ್ವಾದಲ್ಲಿ ಉಗ್ರರು ಹೊಸ ಕೇಂದ್ರಗಳನ್ನು ಸ್ಥಾಪಿಸಿದರು. ಕರಾಚಿ ಮತ್ತು ಇಸ್ಲಾಮಾಬಾದ್ ವಿಮಾನ ನಿಲ್ದಾಣಗಳ ಮೂಲಕ ಕರೆತಂದು ತರಬೇತಿಗಾಗಿ ಈ ಕೇಂದ್ರಗಳಿಗೆ ನೇಮಕಾತಿಗಳನ್ನು ಮಾಡಲಾಯಿತು. ಅಫ್ಘಾನಿಸ್ತಾನದಲ್ಲಿ ದಾಳಿಗಳನ್ನು ಸಹ ಈ ಕೇಂದ್ರಗಳಿಂದ ಯೋಜಿಸಲಾಗುತ್ತಿದೆ ಮತ್ತು ಇದಕ್ಕೆ ದಾಖಲಿತ ಪುರಾವೆಗಳಿವೆ" ಎಂದು ಅವರು ಆರೋಪಿಸಿದರು.

ಇದೇ ವೇಳೆ ಅಫ್ಘಾನಿಸ್ತಾನದ ಪ್ರತೀಕಾರದ ದಾಳಿಗಳನ್ನು ಸಮರ್ಥಿಸಿಕೊಂಡ ತಾಲಿಬಾನ್ ವಕ್ತಾರರು, "ಗಮನಾರ್ಹ ಪ್ರಮಾಣದ ಶಸ್ತ್ರಾಸ್ತ್ರಗಳು ಇಸ್ಲಾಮಿಕ್ ಎಮಿರೇಟ್ ಪಡೆಗಳ ಕೈಗೆ ಸಿಕ್ಕವು. ಈ ಘರ್ಷಣೆಗಳಲ್ಲಿ, ಇಸ್ಲಾಮಿಕ್ ಎಮಿರೇಟ್ ಪಡೆಗಳ 20 ಕ್ಕೂ ಹೆಚ್ಚು ಸದಸ್ಯರು ಸಹ ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡರು.

ಅಫ್ಘಾನಿಸ್ತಾನವು ತನ್ನ ವಾಯು ಮತ್ತು ಭೂ ಗಡಿಗಳನ್ನು ರಕ್ಷಿಸುವ ಹಕ್ಕನ್ನು ಹೊಂದಿದೆ ಮತ್ತು ಯಾವುದೇ ದಾಳಿಗೆ ಉತ್ತರಿಸದೆ ಬಿಡುವುದಿಲ್ಲ. ತಮ್ಮ ನೆಲದ ಮೇಲೆ ಆಕ್ರಮಣ ಮಾಡುವ ಅಥವಾ ಅವರ ವಾಯುಪ್ರದೇಶವನ್ನು ಉಲ್ಲಂಘಿಸುವ ಯಾರಾದರೂ "ಕಠಿಣ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ" ಎಂದು ಮುಜಾಹಿದ್ ಹೇಳಿದರು.

ಸೌದಿ ಮನವಿ ಮೇರೆಗೆ ವಾಯುದಾಳಿ ಸ್ಥಗಿತ

ಇದೇ ವೇಳೆ ಕತಾರ್ ಮತ್ತು ಸೌದಿ ಅರೇಬಿಯಾದ ಕೋರಿಕೆಯ ಮೇರೆಗೆ ವಾಯುದಾಳಿಗಳನ್ನು ಅಂತಿಮವಾಗಿ ನಿಲ್ಲಿಸಲಾಯಿತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com