
ಕಾಬುಲ್: ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನಡುವಿನ ಯುದ್ಧ ತೀವ್ರವಾಗಿದ್ದು, ಪಾಕ್ ಸೇನೆಯ ವಾಯುದಾಳಿಗೆ ಪ್ರತಿಯಾಗಿ ಆಫ್ಘಾನಿಸ್ತಾನ ಕೂಡ ಇದೀಗ ಕ್ಷಿಪಣಿ ದಾಳಿ ಆರಂಭಿಸಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಪಡೆಗಳು ಶನಿವಾರ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ವಿರುದ್ಧ ಸಶಸ್ತ್ರ ಪ್ರತೀಕಾರವನ್ನು ಆರಂಭಿಸಿದ್ದು, ಪಾಕಿಸ್ತಾನ ತನ್ನ ನೆಲದಲ್ಲಿ ವಾಯುದಾಳಿ ನಡೆಸುತ್ತಿದೆ ಎಂದು ಆರೋಪಿಸಿವೆ ಎಂದು ಹಲವಾರು ಪ್ರಾಂತ್ಯಗಳ ಹಿರಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಗುರುವಾರ, ಅಫ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ಎರಡು ಸ್ಫೋಟಗಳು ಸಂಭವಿಸಿದ್ದು, ಇದು ಮಾತ್ರವಲ್ಲದೇ ದೇಶದ ಆಗ್ನೇಯ ಭಾಗದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಮರುದಿನ, ತಾಲಿಬಾನ್ ನಡೆಸುತ್ತಿರುವ ರಕ್ಷಣಾ ಸಚಿವಾಲಯವು ದಾಳಿಗಳಿಗೆ ಪಾಕಿಸ್ತಾನದ ಮೇಲೆ ಆರೋಪ ಹೊರಿಸಿದೆ. ಅಲ್ಲದೆ ನೆರೆಹೊರೆಯ ಪಾಕಿಸ್ತಾನ ದೇಶ ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.
"ಕಾಬೂಲ್ ಮೇಲೆ ಪಾಕಿಸ್ತಾನಿ ಸೇನೆ ನಡೆಸಿದ ವಾಯುದಾಳಿಗಳಿಗೆ ಪ್ರತೀಕಾರವಾಗಿ," ತಾಲಿಬಾನ್ ಪಡೆಗಳು ಗಡಿಯಲ್ಲಿ "ವಿವಿಧ ಪ್ರದೇಶಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಭಾರೀ ಘರ್ಷಣೆಯಲ್ಲಿ" ತೊಡಗಿವೆ ಎಂದು ಅಫ್ಘಾನ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ನಂತರ, ತಾಲಿಬಾನ್ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತ್ ಖೋವಾರಾಜ್ಮ್ AFP ಜೊತೆ ಮಾತನಾಡಿ. "ಯಶಸ್ವಿ" ಸೇನಾ ಕಾರ್ಯಾಚರಣೆಗಳು ಮಧ್ಯರಾತ್ರಿಯಲ್ಲಿ ಕೊನೆಗೊಂಡಿವೆ. ಪಾಕಿಸ್ತಾನವು ಅಫ್ಘಾನಿಸ್ತಾನದ ಭೂಪ್ರದೇಶವನ್ನು ಮತ್ತೊಮ್ಮೆ ಉಲ್ಲಂಘಿಸಿದರೆ, ನಮ್ಮ ಸಶಸ್ತ್ರ ಪಡೆಗಳು ತಮ್ಮ ಪ್ರದೇಶವನ್ನು ರಕ್ಷಿಸಲು ಸಿದ್ಧವಾಗಿವೆ ಮತ್ತು ದೃಢವಾಗಿ ಪ್ರತಿಕ್ರಿಯಿಸುತ್ತವೆ ಎಂದು ಹೇಳಿದರು.
ಟಿಟಿಪಿಗೆ ಆಫ್ಘಾನಿಸ್ತಾನ ನೆರವು ಪಾಕಿಸ್ತಾನ ಆರೋಪ
ಗುರುವಾರದ ದಾಳಿಯ ಹಿಂದೆ ಇಸ್ಲಾಮಾಬಾದ್ ತನ್ನ ಕೈವಾಡವಿದೆ ಎಂದು ದೃಢಪಡಿಸಲಿಲ್ಲ, ಆದರೆ ಕಾಬೂಲ್ "ತನ್ನ ನೆಲದಲ್ಲಿ ಪಾಕಿಸ್ತಾನಿ ತಾಲಿಬಾನ್ (TTP) ಆಶ್ರಯ ನೀಡುವುದನ್ನು ನಿಲ್ಲಿಸುವಂತೆ ಪಾಕಿಸ್ತಾನ ಎಚ್ಚರಿಕೆ ನೀಡಿದೆ. 'ಅಫ್ಘಾನಿಸ್ತಾನದಲ್ಲಿ ಯುದ್ಧ ತರಬೇತಿ ಪಡೆದ ಮತ್ತು ಅಫ್ಘಾನ್ ತಾಲಿಬಾನ್‌ನಂತೆಯೇ ಅದೇ ಸಿದ್ಧಾಂತ ಪಾಲಿಸು ಟಿಟಿಪಿ, 2021 ರಿಂದ ತನ್ನ ನೂರಾರು ಸೈನಿಕರನ್ನು ಕೊಂದಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿಯಲ್ಲಿರುವ ಕುನಾರ್, ನಂಗರ್‌ಹಾರ್, ಪಕ್ತಿಯಾ, ಖೋಸ್ಟ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳ ತಾಲಿಬಾನ್ ಅಧಿಕಾರಿಗಳು ಘರ್ಷಣೆಗಳು ನಡೆಯುತ್ತಿವೆ ಎಂದು ದೃಢಪಡಿಸಿದರು.
"ಇಂದು ಸಂಜೆ, ತಾಲಿಬಾನ್ ಪಡೆಗಳು ಶಸ್ತ್ರಾಸ್ತ್ರಗಳನ್ನು ಬಳಸಲು ಪ್ರಾರಂಭಿಸಿದವು. ನಾವು ಮೊದಲು ಗಡಿಯುದ್ದಕ್ಕೂ ನಾಲ್ಕು ಹಂತಗಳಲ್ಲಿ ಲಘು ಮತ್ತು ನಂತರ ಭಾರೀ ಫಿರಂಗಿಗಳನ್ನು ಹಾರಿಸಿದೆವು" ಎಂದು ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್-ಪಖ್ತುನ್ಖ್ವಾ ಪ್ರಾಂತ್ಯದ ಹಿರಿಯ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದರು.
"ಪಾಕಿಸ್ತಾನಿ ಪಡೆಗಳು ಭಾರೀ ಗುಂಡಿನ ದಾಳಿ ನಡೆಸಿ ಸ್ಫೋಟಕಗಳನ್ನು ಹೊತ್ತೊಯ್ಯುತ್ತಿವೆ ಎಂದು ಶಂಕಿಸಲಾದ ಮೂರು ಅಫ್ಘಾನ್ ಕ್ವಾಡ್‌ಕಾಪ್ಟರ್‌ಗಳನ್ನು ನಮ್ಮ ಪಡೆಗಳು ಹೊಡೆದುರುಳಿಸಿದವು. ತೀವ್ರ ಹೋರಾಟ ಮುಂದುವರೆದಿದೆ, ಆದರೆ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ" ಎಂದು ಅವರು ಮುಂದುವರಿಸಿದರು.
ಇರಾನ್ ಸಲಹೆ
ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಮ್ಮ ದೇಶದ ನೆರೆಹೊರೆಯವರಿಗೆ "ಸಂಯಮವನ್ನು ಕಾಯ್ದುಕೊಳ್ಳಲು" ಕರೆ ನೀಡಿದ್ದಾರೆ.
Advertisement