ಮೋದಿ ಜೊತೆ ಮಾತನಾಡಿದ್ದೇನೆ, ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿದೆ: Donald Trump

ಉಭಯ ದೇಶಗಳಾದ ಭಾರತ ಮತ್ತು ರಷ್ಯಾ ಕೆಲವು ಉತ್ತಮ ಒಪ್ಪಂದಗಳ ಮೇಲೆ ಕೆಲಸ ಮಾಡುತ್ತಿವೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು. ಪ್ರಧಾನಿ ಮೋದಿ ಅವರೊಂದಿಗೆ "ಉತ್ತಮ ಸಂಬಂಧ" ಹೊಂದಿದ್ದಾರೆ ಎಂದು ಒತ್ತಿ ಹೇಳಿದರು.
PM Modi
ಪ್ರಧಾನಿ ಮೋದಿ
Updated on

ಇಂದು ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನ. ಅಮೆರಿಕದ ಶಕ್ತಿಕೇಂದ್ರ ವಾಷಿಂಗ್ಟನ್ ನಲ್ಲಿರುವ ಶ್ವೇತಭವನದ ಓವಲ್ ಕಚೇರಿಯಲ್ಲಿ ಅನಿವಾಸಿ ಭಾರತೀಯರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೀಪಾವಳಿ ಹಬ್ಬ ಆಚರಿಸಿ ಸಂಭ್ರಮಪಟ್ಟಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ರಷ್ಯಾದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಜೊತೆ ಮಾತುಕತೆ

ಉಭಯ ದೇಶಗಳಾದ ಭಾರತ ಮತ್ತು ರಷ್ಯಾ ಕೆಲವು ಉತ್ತಮ ಒಪ್ಪಂದಗಳ ಮೇಲೆ ಕೆಲಸ ಮಾಡುತ್ತಿವೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು. ಪ್ರಧಾನಿ ಮೋದಿ ಅವರೊಂದಿಗೆ "ಉತ್ತಮ ಸಂಬಂಧ" ಹೊಂದಿದ್ದಾರೆ ಎಂದು ಒತ್ತಿ ಹೇಳಿದರು. ನಾನು ಭಾರತದ ಜನರನ್ನು ಪ್ರೀತಿಸುತ್ತೇನೆ. ನಮ್ಮ ದೇಶಗಳ ನಡುವೆ ಕೆಲವು ಉತ್ತಮ ಒಪ್ಪಂದಗಳ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ. ಇಂದು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ ನಮ್ಮ ಮಧ್ಯೆ ಉತ್ತಮ ಸಂಬಂಧವಿದೆ ಎಂದರು.

ರಷ್ಯಾದಿಂದ ತೈಲ ಖರೀದಿಸುವುದಿಲ್ಲ

ಭಾರತ ರಷ್ಯಾದಿಂದ ಹೆಚ್ಚು ತೈಲ ಖರೀದಿಸುವುದಿಲ್ಲ. ಭಾರತ ಹಾಗೂ ಪ್ರಧಾನಿ ಮೋದಿ ಕೂಡ ನನ್ನಂತೆಯೇ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವುದನ್ನು ನೋಡಲು ಬಯಸುತ್ತಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೊಳ್ಳುವುದನ್ನು ನೋಡಲು ಅವರು ಬಯಸುತ್ತಾರೆ. ಅವರು ಹೆಚ್ಚು ತೈಲ ಖರೀದಿಸುವುದಿಲ್ಲ. ತೈಲ ಖರೀದಿ ಪ್ರಕ್ರಿಯೆಯನ್ನು ಭಾರತ ಹಿಂಪಡೆಯುತ್ತಿದೆ ಎಂದರು.

PM Modi
ಶ್ವೇತಭವನದಲ್ಲಿ ಅನಿವಾಸಿ ಭಾರತೀಯರೊಂದಿಗೆ ದೀಪಾವಳಿ ಆಚರಣೆ: ಪ್ರಧಾನಿ ಮೋದಿ ‘ಮಹಾನ್ ವ್ಯಕ್ತಿ, ಉತ್ತಮ ಸ್ನೇಹಿತ’ ಎಂದು ಕೊಂಡಾಡಿದ ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಮೆರಿಕ ಅಧ್ಯಕ್ಷರು ದೂರವಾಣಿ ಕರೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ ತೈಲ ಖರೀದಿಯ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ. ಅಧ್ಯಕ್ಷ ಟ್ರಂಪ್ ಅವರೇ ನಿಮ್ಮ ಫೋನ್ ಕರೆ ಮತ್ತು ದೀಪಾವಳಿ ಶುಭಾಶಯಗಳಿಗೆ ಧನ್ಯವಾದಗಳು. ಈ ಬೆಳಕಿನ ಹಬ್ಬದಂದು, ನಮ್ಮ ಎರಡು ಮಹಾನ್ ಪ್ರಜಾಪ್ರಭುತ್ವಗಳು ಭರವಸೆಯಿಂದ ಜಗತ್ತನ್ನು ಬೆಳಗಿಸುವುದನ್ನು ಮುಂದುವರಿಸಲಿ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲೋಣ ಎಂದು ಹೇಳಿದ್ದಾರೆ.

ಕಳೆದ ಅಕ್ಟೋಬರ್ 18 ರಂದು, ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದ್ವಿಪಕ್ಷೀಯ ಭೋಜನಕೂಟವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷರು, ಭಾರತವು ರಷ್ಯಾದಿಂದ ತೈಲ ಆಮದುಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಈಗ ಸಂಪೂರ್ಣವಾಗಿ ಹಿಂದೆ ಸರಿಯುತ್ತಿದೆ ಎಂದು ಹೇಳಿದ್ದರು.

ಸಂಕಷ್ಟದಲ್ಲಿ ಹಂಗೇರಿಯಾ

"ಭಾರತ ಇನ್ನು ಮುಂದೆ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ, ಹಂಗೇರಿಯಾ ಒಂದು ರೀತಿಯಲ್ಲಿ ಸಿಕ್ಕಿಹಾಕಿಕೊಂಡಿದೆ ಏಕೆಂದರೆ ಅವರು ವರ್ಷಗಳಿಂದ ಇರುವ ಒಂದು ಪೈಪ್‌ಲೈನ್ ನ್ನು ಹೊಂದಿದ್ದಾರೆ, ಅವರು ಇರುವ ಪ್ರದೇಶ ಒಳನಾಡು. ಅವರಿಗೆ ಸಮುದ್ರವಿಲ್ಲ, ನಾನು ಅವರ ನಾಯಕನೊಂದಿಗೆ ಮಾತನಾಡಿದೆ. ಆದರೆ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎಂದು ಹೇಳಿದ್ದರು.

ಉಕ್ರೇನ್‌ನ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾದೊಂದಿಗೆ ತಮ್ಮ ಇಂಧನ ಸಂಬಂಧಗಳನ್ನು ಕಡಿಮೆ ಮಾಡಲು ದೇಶಗಳ ಮೇಲೆ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಒತ್ತಡವನ್ನು ಉಲ್ಲೇಖಿಸಿ ಟ್ರಂಪ್ ಅವರ ಹೇಳಿಕೆಗಳು ಬಂದಿವೆ.

ಈ ಪ್ರದೇಶದಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಉತ್ತೇಜಿಸುತ್ತಿದೆ ಅಮೆರಿಕ ಹೇಳುತ್ತಿದೆ. ಅಕ್ಟೋಬರ್ 16 ರಂದು, ಪ್ರಧಾನಿ ಮೋದಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಮಾಡಿದ ಹೇಳಿಕೆಗಳಿಗೆ ಭಾರತ ಪ್ರತಿಕ್ರಿಯಿಸಿದೆ.

ದೇಶದ ಇಂಧನ ಮೂಲವನ್ನು ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಭಾರತೀಯ ಗ್ರಾಹಕರನ್ನು ರಕ್ಷಿಸುವ ಅಗತ್ಯದಿಂದ ನಿರ್ದೇಶಿಸಲಾಗುತ್ತದೆ ಎಂದು ಹೇಳಿತ್ತು. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷ ಟ್ರಂಪ್ ಹೇಳಿಕೊಂಡಿದ್ದರು, ಇದು ರಷ್ಯಾ ಮೇಲೆ ಜಾಗತಿಕ ಒತ್ತಡವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ಒಂದು ದೊಡ್ಡ ಹೆಜ್ಜೆ ಎಂದು ಬಣ್ಣಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com