
ಜೆರುಸಲೇಂ: ಇಸ್ರೇಲ್ ರಾಜಧಾನಿ ಜೆರುಸಲೇಂ ಭಾರಿ ಗುಂಡಿನ ದಾಳಿಗೆ ನಲುಗಿದೆ. ಸೋಮವಾರ ಬೆಳಗ್ಗೆ ನಡೆದ ದಾಳಿಯಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ತುರ್ತು ಸೇವೆಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇಬ್ಬರು ಬಂದೂಕುಧಾರಿಗಳು ನಗರದ ಉತ್ತರದ ಪ್ರವೇಶದ್ವಾರದಲ್ಲಿ ಯಹೂದಿ ವಸಾಹತುಗಳಿಗೆ ತೆರಳುವ ಜನ ನಿಬಿಡ ರಸ್ತೆಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಹಾಗೂ ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಇಸ್ರೇಲ್‌ನಾದ್ಯಂತ ಹಿಂಸಾಚಾರ ಹೆಚ್ಚಿದೆ. ಈ ಮಧ್ಯೆ ಇಂದು ರಾಜಧಾನಿಯಲ್ಲಿಯೇ ಭಾರಿ ಗುಂಡಿನ ದಾಳಿ ನಡೆದಿರುವುದು ಇಸ್ರೇಲ್ ಆತಂಕವನ್ನು ಹೆಚ್ಚಿಸಿದೆ. ಮತ್ತಷ್ಟು ವಿವರಗಳನ್ನು ನಿರೀಕ್ಷಿಸಲಾಗಿದೆ.
Advertisement