London: ವಲಸೆ ವಿರೋಧಿ ಬೃಹತ್ ಪ್ರತಿಭಟನೆ; ಪ್ರತಿಭಟನಾಕಾರರು, ಪೊಲೀಸರ ನಡುವೆ ಸಂಘರ್ಷ

ರ್ಯಾಲಿಯಲ್ಲಿ ಅಂದಾಜು 110,000 ರಿಂದ 150,000 ಜನರು ಸೇರಿದ್ದರು, ಇದು ನಿರೀಕ್ಷೆಗೂ ಮೀರಿದ ಘಟನೆ ಎಂದು ಪೊಲೀಸರು ತಿಳಿಸಿದ್ದಾರೆ.
Anti-Immigration Rally In London
ವಲಸಿಗರ ವಿರುದ್ಧ ಬೃಹತ್ ಪ್ರತಿಭಟನೆ
Updated on

ಲಂಡನ್: ಬ್ರಿಟನ್ ಇತಿಹಾಸದಲ್ಲೇ ಅತೀ ದೊಡ್ಡ ಪ್ರತಿಭಟನಾ ರ್ಯಾಲಿ ನಡೆಯುತ್ತಿದ್ದು, ಈ ಬೃಹತ್ ರ್ಯಾಲಿಗೆ ವಲಸಿಗರು ಕಾರಣ ಎನ್ನಲಾಗಿದೆ.

ಹೌದು.. ಯುನೈಟೆಡ್ ಕಿಂಗ್‌ಡಮ್ ಇತಿಹಾಸದಲ್ಲೇ ಅತಿದೊಡ್ಡ ಬಲಪಂಥೀಯ (ರೈಟ್-ವಿಂಗ್) ಪ್ರತಿಭಟನೆಗೆ ಲಂಡನ್‌ ಸಾಕ್ಷಿಯಾಗಿದ್ದು, ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ (Tommy Robinson) ನೇತೃತ್ವದಲ್ಲಿ ನಡೆದ ಬೃಹತ್‌ ʻವಲಸೆ ವಿರೋಧಿʼ ಮೆರವಣಿಗೆಯಲ್ಲಿ ಸುಮಾರು 1,00,000ಕ್ಕೂ ಹೆಚ್ಚು ಪ್ರತಿಭಟನಾಕಾರರು (Protester) ಭಾಗವಹಿಸಿದ್ದಾರೆ.

ಈ ರ್ಯಾಲಿಯಲ್ಲಿ ಅಂದಾಜು 110,000 ರಿಂದ 150,000 ಜನರು ಸೇರಿದ್ದರು, ಇದು ನಿರೀಕ್ಷೆಗೂ ಮೀರಿದ ಘಟನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟ್ಯಾಂಡ್ ಅಪ್ ಟು ರೇಸಿಸಂ ಆಯೋಜಿಸಿದ್ದ ಪ್ರತಿಸ್ಪರ್ಧಿ "ಫ್ಯಾಸಿಸಂ ವಿರುದ್ಧ ಮಾರ್ಚ್" ಪ್ರತಿಭಟನೆಯಲ್ಲಿ ಸುಮಾರು 5,000 ಜನರು ಭಾಗವಹಿಸಿದ್ದರು ಎನ್ನಲಾಗಿದೆ.

ಈ ಪ್ರತಿಭಟನೆಯನ್ನು ಫಾರ್-ರೈಟ್ ಅಕ್ಟಿವಿಸ್ಟ್ ಟಾಮಿ ರಾಬಿನ್ಸನ್ (ಸ್ಟೀಫನ್ ಯ್ಯಾಕ್ಷಿ-ಲೆನ್ನನ್) ನೇತೃತ್ವದಲ್ಲಿ ಯುನೈಟ್ ದಿ ಕಿಂಗ್‌ಡಮ್ ಎಂಬ ಹೆಸರಿನಲ್ಲಿ ಆಯೋಜಿಸಲಾಗಿದ್ದು, ಇಂಗ್ಲಿಷ್ ಡಿಫೆನ್ಸ್ ಲೀಗ್‌ ಸಂಸ್ಥಾಪಕನಾದ ರಾಬಿನ್ಸನ್‌, ಬ್ರಿಟನ್‌ನ ಪ್ರಭಾವಶಾಲಿ ಬಲಪಂಥೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಪ್ರತಿಭಟನಾಕಾರರು ಇಂಗ್ಲೆಂಡ್ (England) ಮತ್ತು ಬ್ರಿಟನ್ ಧ್ವಜಗಳನ್ನ ಹಿಡಿದು, ವೆಸ್ಟ್‌ಮಿನ್‌ಸ್ಟರ್‌ ಕಡೆಗೆ ಮೆರವಣಿಗೆ ಹೊರಟಿದ್ದರು. ಇದೇ ವೇಳೆ ರಾಬಿನ್ಸನ್ ಪ್ರತಿಭಟನೆಗೆ ಪ್ರತಿಯಾಗಿ ಸ್ಟ್ಯಾಂಡ್ ಅಪ್ ಟು ರೇಸಿಸಂ ಗುಂಪು ನೇತೃತ್ವದಲ್ಲಿ 5,000 ಮಂದಿ ಪ್ರತಿಭಟನೆ ನಡೆಸಿದರು.

Anti-Immigration Rally In London
'ಅಧಿಕಾರದ ಆಸೆಯಿಂದ ಬಂದಿಲ್ಲ.. 6 ತಿಂಗಳಿಗಿಂತ ಹೆಚ್ಚು ದಿನ ಸ್ಥಾನದಲ್ಲಿ ಇರಲ್ಲ': ನೇಪಾಳ ನೂತನ ಪ್ರಧಾನಿ Sushila Karki

ʻಮಾರ್ಚ್ ಅಗೈನ್‌ಸ್ಟ್ ಫ್ಯಾಸಿಸಂʼ ಎಂಬ ಹೆಸರಿನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಾರಾ ಸುಲ್ತಾನಾ ಮತ್ತು ಡಯಾನ್‌ ಅಬ್‌ಬಟ್‌ನಂತಹ ಸಂಸದರು ಕೂಡ ಭಾಗವಹಿಸಿದರು. ಈ ಎರಡು ಗುಂಪುಗಳ ನಡುವಿನ ಘರ್ಷಣೆ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

ವಲಸೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನ ಹೊರತುಪಡಿಸಿ, ಹಿಂಸಾಚಾರವನ್ನೇ ಗುರಿಯಾಗಿಸಿಕೊಂಡು ಕೆಲವರು ಬಂದಿದ್ದರು. ಅವರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದರು. ಪೊಲೀಸರೊಂದಿಗೆ ಗುದ್ದಾಟವನ್ನೂ ನಡೆಸಿದ್ರು ಎಂದು ಸಹಾಯಕ ಆಯುಕ್ತ ಮ್ಯಾಟ್ ಟ್ವಿಸ್ಟ್ ಹೇಳಿದರು.

ಪೊಲೀಸರು-ಪ್ರತಿಭಟನಾಕಾರರ ನಡುವೆ ಸಂಘರ್ಷ

ಪ್ರತಿಭಟನಾ ರ್ಯಾಲಿ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಕೂಡ ನಡೆದ ವರದಿಯಾಗಿದೆ. ರ್ಯಾಲಿಯ ಅಂಚಿನಲ್ಲಿ ಜನರು ಎಸೆದ ಬಾಟಲಿಗಳಿಂದ ಹಲವಾರು ಅಧಿಕಾರಿಗಳಿಗೆ ಥಳಿಸಿದ್ದಾರೆ. ಕರ್ತವ್ಯದಲ್ಲಿದ್ದ 1,000 ಕ್ಕೂ ಹೆಚ್ಚು ಅಧಿಕಾರಿಗಳಿಗೆ ಬೆಂಬಲವಾಗಿ ಹೆಲ್ಮೆಟ್‌ಗಳು ಮತ್ತು ಗಲಭೆ ಗುರಾಣಿಗಳೊಂದಿಗೆ ಬಲವರ್ಧನೆಗಳನ್ನು ನಿಯೋಜಿಸಲಾಗಿದೆ.

ಈ ಘಟನೆಯಲ್ಲಿ ಇಪ್ಪತ್ತಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡರು. ಹಿಂಸಾತ್ಮಕ ಅವ್ಯವಸ್ಥೆ, ಹಲ್ಲೆಗಳು ಮತ್ತು ಕ್ರಿಮಿನಲ್ ಹಾನಿ ಸೇರಿದಂತೆ ಕನಿಷ್ಠ 25 ಜನರನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com